Sunday, December 29, 2024

Latest Posts

ಚಿಕ್ಕಮಗಳೂರಿಗೆ ಮೊದಲು ಕಾಫಿ ತಂದಿದ್ದು ಯಾರು..? ಈ ಜಿಲ್ಲೆ ಕಾಫಿನಾಡು ಆಗಿದ್ದು ಹೇಗೆ..?

- Advertisement -

Chikka magaluru News: ಇಡೀ ಭಾರತದಲ್ಲಿ ಮೊದಲು ಕಾಫಿ ಗಿಡ ಬೆಳೆದಿದ್ದೇ ನಮ್ಮ ಕರ್ನಾಟಕದ ಚಿಕ್ಕಮಗಳೂರಿನಲ್ಲಿ. ಹಾಗಾಗಿಯೇ ಚಿಕ್ಕ ಮಗಳೂರನ್ನು ಕಾಫಿನಾಡು ಎಂದು ಕರೆಯಲಾಗುತ್ತದೆ. ಎಷ್ಚೋ ಜನರು ಕಾಫಿ ತೋಟದಿಂದಲೇ ಶ್ರೀಮಂತರಾಗಿದ್ದಾರೆ. ಇಡೀ ದೇಶದಲ್ಲೇ ಫೇಮಸ್ ಆಗಿರುವ ಕೆಫೆ ಕಾಫಿ ಡೇ ಶುರುಮಾಡಿದ್ದು, ಚಿಕ್ಕಮಗಳೂರ ಮನೆಮಗ ದಿ. ಸಿದ್ಧಾರ್ಥ್ ಹೆಗ್ಡೆ. ಆದರೆ ನಿಮಗೆ ಚಿಕ್ಕಮಗಳೂರಿಗೆ ಮೊದಲು ಕಾಫೀಬೀಜ ತಂದು ಬಿತ್ತಿದ್ಯಾರು ಗೊತ್ತಾ..? ಆ ಬಗ್ಗೆ ಪೂರ್ತಿ ಮಾಹಿತಿ ತಿಳಿಯೋಣ ಬನ್ನಿ.

ಯಮನ್ ದೇಶದಿಂದ 7 ಕಾಫಿಬೀಜವನ್ನು ತಂದು, ಚಿಕ್ಕಮಗಳೂರಿನಲ್ಲಿ ಬಿತ್ತಿ, ಭಾರತ ದೇಶದ ಜನರಿಗೂ ಕಾಫಿ ಪರಿಚಯ ಮಾಡಿಕೊಟ್ಟವರು ಬಾಬಾ ಬುಡನ್. ಹಾಾಗಾಗಿಯೇ ಚಿಕ್ಕಮಗಳೂರಿನಲ್ಲಿ ಅವರ ಹೆಸರಿನಲ್ಲಿಯೇ ಒಂದು ಬೆಟ್ಟವಿದೆ. ಅದೇ ಬಾಬಾ ಬುಡನ್‌ಗಿರಿ.

ಬಾಬಾ ಬುಡನ್ ಮೆಕ್ಕಾದಿಂದ ಮರಳುವಾಗ, ಅವರಿಗೆ ಕಾಫಿ ಬೀಜವಿರುವ ಜಾಗದ ಬಗ್ಗೆ ಮಾಹಿತಿ ತಿಳಿಯುತ್ತದೆ. ಆದರೆ ಅಲ್ಲಿಂದ ಬೇರೆ ದೇಶಗಳಿಗೆ ಕಾಫಿ ಬೀಜ ರವಾನಿಸುವುದು ನಿಷಿದ್ಧವಾಗಿರುತ್ತದೆ. ಆ ಸಂದರ್ಭದಲ್ಲಿ ಬಾಾಬಾ ಬುಡನ್‌ ತಮ್ಮ ಗಡ್ಡದಲ್ಲಿ 7 ಕಾಫಿ ಬೀಜಗಳನ್ನು ಅಡಗಿಸಿ, ಭಾರತಕ್ಕೆ ತರುತ್ತಾರೆ. ಬಳಿಕ ಚಿಕ್ಕಮಗಳೂರಿನ ಒಂದು ಜಾಗದಲ್ಲಿ ಆ 7 ಕಾಫಿ ಬೀಜವನ್ನು ಬಿತ್ತುತ್ತಾರೆ.

ಇಲ್ಲಿ ಕಾಫಿ ಬೆಳೆ ಬೆಳೆಯಲು ಶುರುವಾದ ಬಳಿಕ, ಕರ್ನಾಟಕದ ಹಲವು ಭಾಗಗಳಿಗೆ ಕಾಫಿ ಗಿಡಗಳ ರವಾನೆಯಾಯಿತು. ಬಳಿಕಕ ಭಾರತದೆಲ್ಲೆಡೆ ಚಿಕ್ಕಮಗಳೂರಿನಿಂದಲೇ, ಕಾಫಿ ಪ್ಲಾಂಟ್ ಸರಬರಾಜಾಯಿತು. ಈ ರೀತಿ ಬಾಬಾ ಬುಡನ್ ತಂದ 7 ಕಾಫಿ ಬೀಜಗಳಿಂದ ಇಡೀ ದೇಶದ ಜನಗಳಿಗೆ ಕಾಫಿ ಸವಿಯುವ ಅವಕಾಶ ಸಿಕ್ಕಿತು. ಕರ್ನಾಟಕದಲ್ಲಿ ಚಿಕ್ಕಮಗಳೂರಿನ ಜೊತೆ ಮಡಿಕೇರಿಯಲ್ಲಿಯೂ ಹೆಚ್ಚು ಕಾಫಿ ಬೆಳೆಯಲಾಗುತ್ತದೆ.

- Advertisement -

Latest Posts

Don't Miss