Sunday, September 8, 2024

Latest Posts

ಕೊರೊನಾಗೆ ಮಲೇರಿಯಾ ಔಷಧಿ ಬಳಕೆ ನಿಷೇಧ

- Advertisement -
https://www.youtube.com/watch?v=EDMRYtaze_Q

ಕರ್ನಾಟಕ ಟಿವಿ : ಕೊರೊನಾಗೆ ಮಲೇರಿಯಾ ಔಷಧಿಯನ್ನ ಅಮೆರಿಕಾ ಬಳಸುತ್ತಿದೆ. ಸ್ವತಃ ಅಮೆರಿಕಾ ಅಧ್ಯಕ್ಷ ಟ್ರಂಪ್ ಪ್ರತಿದಿನ ಹೈಡ್ರಾಕ್ಸಿಕ್ಲೋರೋಕ್ವೀನ್ ತೆಗೆದುಕೊಳ್ತಿದ್ದಾರೆ.. ಬ್ರೆಜಿಲ್ ಸಹ ಕೊರೊನಾ ನಿಯಂತ್ರಿಸಲು ಮಲೇರಿಯಾ ಔಷಧಿ ಹಿಂದೆ ಬಿದ್ದಿಗೆ.. ಈ ನಡುವೆ ಇದು ಸೈಡ್ ಎಫೆಕ್ಟ್ ಆಗುತ್ತೆ ಅನ್ನೋ ಎಚ್ಚರಿಕೆ ಸಹ ಇದೆ. ಆದರೂ ಮಲೇರಿಯಾ ಔಷಧಿ ಬಳಕೆ ಮುಂದುವರೆದಿದೆ. ಇದೀಗ ವಿಶ್ವ ಆರೋಗ್ಯ ಸಂಸ್ಥೆ ಕೊರೊನಾಗೆ ಪರೀಕ್ಷಾರ್ಥ ಮಲೇರಿಯಾ ಔಷಧಿ ಬಳಸುವುದನ್ನ ನಿಷೇಧ ಮಾಡಿದೆ. ಹೈಡ್ರಾಕ್ಸಿಕ್ಲೋರೋಕ್ವಿನ್ ಬಳಸುವುದರಿಂದ ಹೃದಯ ಸಂಬಂಧಿ  ಕಾಯಿಲೆ ಬರುತ್ತೆ ಎಂದು ವಿಶ್ವ  ಆರೋಗ್ಯ ಸಂಸ್ಥೆಯ ಡೈರೆಕ್ಟರ್ ಜನರಲ್ ಟೆಡ್ರೋಸ್ ಹೇಳಿದ್ದಾರೆ.. ಇನ್ನು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್ ಕೂಡ ಸ್ಪಷ್ಟನೆ ಕೊಟ್ಟಿದ್ದು ಕೊರೊನಾ ತಡೆಗಟ್ಟಲು ಪ್ರಯೋಗಗಳಿಗೆ ಸದಾ ಬೆಂಬಲವಿದೆ. ಇದೀಗ ನಾವು ಹೈಡ್ರಾಕ್ಸಿಕ್ಲೋರೋಕ್ವೀನ್ ಗೆ ಮಾತ್ರ ತಾತ್ಕಾಲಿಕ ತಡೆ ಕೊಟ್ಟಿದ್ದೇವೆ  ಅಂತ ತಿಳಿಸಿದ್ದಾರೆ..

- Advertisement -

Latest Posts

Don't Miss