Political News: ಕರ್ನಾಟಕ ಟಿವಿ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಮಾಜಿ ಸಚಿವ ಸಿ.ಟಿ.ರವಿ, ನರೇಂದ್ರ ಮೋದಿ ಬಳಿಕ ದೇಶದ ಪ್ರಧಾನಿ ಯಾರಾಗ್ತಾರೆ ಅಂತಾ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ.
ನರೇಂದ್ರ ಮೋದಿ ಅಂದ್ರೆ ಒಂದು ವ್ಯಕ್ತಿ ಮಾತ್ರವಲ್ಲ. ಒಂದು ವಿಚಾರದ ಪ್ರತಿನಿಧಿ. ಸ್ವಾರ್ಥವೇ ಇಲ್ಲದಂಥ ವ್ಯಕ್ತಿತ್ವ. ದೇಶವೇ ಎಲ್ಲ ಅನ್ನೋ ವ್ಯಕ್ತಿತ್ವ. ವ್ಯಕ್ತಿ ಬದಲಾದರೂ ವ್ಯಕ್ತಿತ್ವ ಅನ್ನೋದು ಇದ್ದೇ ಇರುತ್ತದೆ. ಆ ವ್ಯಕ್ತಿತ್ವದ ಪ್ರತಿನಿಧಿ ನರೇಂದ್ರ ಮೋದಿಯವರು. ಆ ವ್ಯಕ್ತಿತ್ವವನ್ನೇ ಪ್ರತಿನಿಧಿಸುವ ವ್ಯಕ್ತಿಗಳು ಮುಂದೆ ಬರುತ್ತಾರೆ ಎಂದು ಸಿ.ಟಿ.ರವಿ ಹೇಳಿದ್ದಾರೆ.
ಆ ವ್ಯಕ್ತಿತ್ವವನ್ನು ಪ್ರತಿನಿಧಿಸುವ ವ್ಯಕ್ತಿ ಯಾರು ಅನ್ನೋದು ಕಾಲ ನಿರ್ಣಯ ಮಾಡುತ್ತದೆ. ಬಿಜೆಪಿ ಅನ್ನೋದು ಒಂದು ಐಡಿಯಾಲಜಿ. 30, 40 ಅಲ್ಲ, 300, ನಾಲ್ನೂರಕ್ಕೂ ಹೆಚ್ಚು ವರ್ಷಗಳ ಕಾಾಲ ಈ ಐಡಿಯಾಲಜಿ ದೇಶವನ್ನು ಲೀಡ್ ಮಾಡುತ್ತದೆ. ಈ ಐಡಿಯಾಲಜಿ ಉನ್ನತಿಯೇ ದೇಶದ ಉನ್ನತಿ. ಅಸ್ಪ್ರಶ್ಯತೆ, ಜಾತಿಯತೆ ಎನ್ನುವ ಸಮಾಜ ಮುಕ್ತ ನಿರ್ಮಾಣ ಅನ್ನೋದೇ, ದೇಶದ ಉನ್ನತಿ ಎಂದು ಸಿ.ಟಿ.ರವಿ ಹೇಳಿದ್ದಾರೆ.
ಆತ್ಮನಿರ್ಭರ ಸಮಾಜ ಅನ್ನೋದು ಈ ದೇಶದ ಉನ್ನತಿ, ಇದು ಯಾರಿಗೆ ಬೇಡಾ..? ಯಾರೂ ಗುಲಾಮನಾಗಲು ಬಯಸುವುದಿಲ್ಲ. ಹಾಗಾಗಬೇಕಾದರೆ, ದೇಶ ಮೊದಲು ಅನ್ನೋ ತತ್ವನೇ ಎದ್ದು ಬರಬೇಕು. ನಮ್ಮ ತತ್ವ ಸದಾಕಾಲ ಈ ಜಗತ್ತನ್ನು ಪ್ರಭಾವಿತಗೊಳಿಸುತ್ತದೆ ಎಂದು ಸಿ.ಟಿ.ರವಿ ಹೇಳಿದ್ದಾರೆ.
ನವಲಗುಂದ ಕ್ಷೇತ್ರವನ್ನ ಸಿಎಂ ಸಿದ್ದರಾಮಯ್ಯಗೆ ದತ್ತು ನೀಡ್ತೇವೆ- ಶಾಸಕ ಕೋನರೆಡ್ಡಿ
ಯಾವ ನೈತಿಕತೆಯಿಂದ ಇನ್ನೂ ಮುಖ್ಯಮಂತ್ರಿ ಕುರ್ಚಿಯ ಮೇಲೆ ಕುಳಿತಿದ್ದೀರಿ?: ಪ್ರೀತಂಗೌಡ