Spiritual: ಹಿಂದೂಗಳಲ್ಲಿ ದೇವರನ್ನು ಪೂಜಿಸುವಾಗ, ದೇವರ ಮುಂದೆ ನೈವೇದ್ಯವಾಗಿ ಬಾಳೆಹಣ್ಣು ಮತ್ತು ತೆಂಗಿನಕಾಯಿಯನ್ನೇ ಇರಿಸುತ್ತಾರೆ. ಆದರೆ ಯಾಕೆ ಆ್ಯಪಲ್, ದ್ರಾಕ್ಷಿ, ಮೂಸಂಬಿ ಇದನ್ನೆಲ್ಲ ಏಕೆ ಇರಿಸುವುದಿಲ್ಲ..? ಹಾಗಾದ್ರೆ ತೆಂಗಿನಕಾಯಿ ಮತ್ತು ಬಾಳೆಹಣ್ಣನ್ನೇ ಇಡಲು ಕಾರಣವೇನು ಅಂತಾ ತಿಳಿಯೋಣ ಬನ್ನಿ..
ತೆಂಗಿನಕಾಯಿ ಮತ್ತು ಬಾಳೆಹಣ್ಣನ್ನು ಪೂರ್ಣಫಲ ಎನ್ನುತ್ತಾರೆ. ಬೇರೆ ಹಣ್ಣುಗಳನ್ನು ನಾವು ಸೇವಿಸಿದ ಬಳಿಕ ಅದರ ಬೀಜವನ್ನು ಬಿಸಾಕುತ್ತೇವೆ. ಆ ಬೀಜದಿಂದ ಬೇರೆ ಮರ ಬೆಳೆದು, ಅದರಿಂದ ಹಣ್ಣಾಗುತ್ತದೆ. ಆದರೆ ಬಾಳೆಹಣ್ಣನ್ನು ಆ ರೀತಿ ಎಂಜಿಲು ಮಾಡಿ ಬಿಸಾಕಲು ಸಾಧ್ಯವಿಲ್ಲ. ಅದರ ಸಿಪ್ಪೆ ತೆಗೆದು ಬಿಸಾಕಿದರೂ, ಮತ್ತೆ ಅದರಿಂದ ಗಿಡವಾಗಲು ಸಾಧ್ಯವಿಲ್ಲ. ಹಾಗಾಗಿ ಯಾವುದೇ ಎಂಜಿಲು ಮಾಡಿದ ಬೀಜದಿಂದ ಉತ್ಪತ್ತಿಯಾಗದ ಗಿಡ ಅಂದ್ರೆ ಅದು ಬಾಳೆಗಿಡ. ಹಾಗಾಗಿ ಬಾಳೆಹಣ್ಣನ್ನೇ ದೇವರ ನೈವೇದ್ಯಕ್ಕಾಗಿ ಇಡುತ್ತಾರೆ.
ಇನ್ನು ತೆಂಗಿನಕಾಯಿ ಕೂಡ ಅದೇ ರೀತಿ, ಯಾವುದೇ ಎಂಜಿಲು ಮಾಡದ ವಸ್ತುವಿನಿಂದ ತೆಂಗಿನ ಮರ ಬೆಳೆಯುವುದಿಲ್ಲ. ಹಾಗಾಗಿ ತೆಂಗಿನಕಾಯಿಯನ್ನು ದೇವರ ಪೂಜೆಗೆ ಇರಿಸಲಾಗುತ್ತದೆ. ತೆಂಗಿನಕಾಯಿಗಿರುವ 3 ಕಣ್ಣು ತ್ರಿಲೋಕ, ತ್ರಿಗುಣಗಳನ್ನು ಸೂಚಿಸುತ್ತದೆ. ಇನ್ನು ತೆಂಗಿನ ಕಾಯಿಯ ಸುತ್ತ ಇರುವ ಗಟ್ಟಿಯಾದ ಗೆರಟೆ ಮನುಷ್ಯನ ಅಹಂ ತೋರಿಸುತ್ತದೆ. ಅದನ್ನು ತುಂಡು ಮಾಡಿದ ರೀತಿಯೇ ಮನುಷ್ಯ ತನ್ನ ಅಹಂ ತುಂಡು ಮಾಡಬೇಕು. ಹಾಗೆ ಮಾಡಿದಾಗಲೇ, ಅದರಲ್ಲಿರುವ ಸಿಹಿ ನೀರು ನಿಮಗೆ ಸಿಗುತ್ತದೆ. ಅಂದರೆ, ನಿಮ್ಮ ಉತ್ತಮ ವ್ಯಕ್ತಿತ್ವದ ಪರಿಚಯ ನಿಮಗೆಗಾಗುತ್ತದೆ.




