Horror: ನಿಮಗೆ ಹಾರರ್ ಸ್ಟೋರಿ ಅಥವಾ ಭೂತ, ಪ್ರೇತದ ಕಥೆಗೆ ಸಂಬಂಧಿಸಿದ ವೀಡಿಯೋವನ್ನು ನೋಡಿದಾಗ, ಅಥವಾ ಯಾವುದಾದರೂ ಲೇಖನವನ್ನು ಓದಿದಾಗ, ನೀಲವಂತಿ ಪುಸ್ತಕದ ಬಗ್ಗೆ ನೀವು ಕೇಳಿರುತ್ತೀರಿ. ಈ ಪುಸ್ತಕ ಓದಲು ಹಲವರು ಹೆದರುತ್ತಾರೆ. ಅಲ್ಲದೇ, ಈ ಪುಸ್ತಕ ಓದಲು ಟ್ರೈ ಮಾಡುವವರಿಗೂ ಕೂಡ ತೊಂದರೆ ಉಂಟಾಗುತ್ತದೆ. ಹಾಗಾಗಿ ಈ ಪುಸ್ತಕ ಪ್ರಕಟಣೆಯನ್ನು ಸರ್ಕಾರ ಬ್ಯಾನ್ ಮಾಡಿದೆ. ಹಾಗಾದ್ರೆ ನೀಲವಂತಿ ಪುಸ್ತಕದ ವಿಶೇಷತೆಗಳೇನು..? ಯಾಕೆ ಜನ ನೀಲವಂತಿ ಪುಸ್ತಕವನ್ನು ಓದಲು ಹೆದರುತ್ತಾರೆ. ಈ ಬಗ್ಗೆ ಸಣ್ಣ ಮಾಹಿತಿ ಇಲ್ಲಿದೆ ನೋಡಿ.
ನೀಲವಂತಿ ಎಂದರೆ ಓರ್ವ ಹೆಣ್ಣು. ಆಕೆ ಪುಟ್ಟ ಮಗುವಿರುವಾಗ, ಆಕೆಯ ಬಳಿ ಭೂತ, ಪ್ರೇತಗಳು ಸುಳಿಯುತ್ತಿದ್ದವು. ಆದರೆ ಆಕೆಗೆ ಯಾವುದೇ ತೊಂದರೆಯುಂಟು ಮಾಡುತ್ತಿರಲಿಲ್ಲ. ಅವುಗಳು ಆಕೆಯ ಬಳಿ ಬಂದು, ಕಿವಿಯಲ್ಲಿ, ನೀನು ಅದ್ಭುತವಾದ ಹೆಣ್ಣು, ನಿನ್ನಲ್ಲಿ ಒಂದು ಅದ್ಭುತವಾದ ಶಕ್ತಿ ಇದೆ. ಆ ಶಕ್ತಿಯನ್ನು ಅಭಿವೃದ್ಧಿಗೊಳಿಸಲು ನಾನು ನಿನಗೆ ಮಂತ್ರಗಳನ್ನು ಹೇಳಿಕೊಡುತ್ತೇನೆ. ಸಿದ್ಧಿ ಪ್ರಾಪ್ತಿಯ ಉಪಾಯಗಳನ್ನು ಹೇಳುತ್ತೇನೆ ಎನ್ನುತ್ತಿದ್ದವು.
ಅಲ್ಲದೇ, ಸಣ್ಣ ವಯಸ್ಸಿನಲ್ಲೇ ಆಕೆ, ಪ್ರಾಣಿ, ಪಕ್ಷಿಗಳ ಮನಸ್ಸಿನ ಮಾತುಗಳನ್ನು ಅರಿತುಕೊಳ್ಳುತ್ತಿದ್ದಳು. ಪ್ರಾಣಿ, ಪಕ್ಷಿಗಳ ಮನಸ್ಸಿನ ಮಾತು ಆಕೆಗೆ ಅರ್ಥವಾಗಲು ಶುರುವಾಗಿತ್ತು. ಮತ್ತು ಪಶು ಪಕ್ಷಿಗಳು ಸಹ ಈಕೆಯ ಬಳಿ ಬಂದು ಮಾತನಾಡಲು ಶುರು ಮಾಡಿದ್ದವು. ಆಕೆ ವಿದ್ಯಾವಂತೆಯಾಗಿ, ಕೊಂಚ ದೊಡ್ಡವಳಾದ ಬಳಿಕ, ಪ್ರೇತಗಳು ಆಕೆಗೆ ಹೇಳಿದ್ದ ಮಂತ್ರಗಳನ್ನು, ಸಿದ್ಧತಂತ್ರಗಳನ್ನು ಆಕೆ ಒಂದು ಪುಸ್ತಕದಲ್ಲಿ ಬರೆದಿಡಲು ಶುರು ಮಾಡಿದಳು. ಇದೇ ಪುಸ್ತಕ ಮುಂದೆ ನೀಲವಂಥಿ ಗ್ರಂಥವಾಯಿತು.
ಆಕೆ ಈ ಭೂಮಿ ಬಿಟ್ಟು ಬೇರೆ ಲೋಕಕ್ಕೆ ಹೋಗಬೇಕಾದಾಗ, ಪ್ರೇತದ ರೂಪದಲ್ಲಿ ಬಂದ ಆಕೆಯ ಪತಿ, ಆ ಗ್ರಂಥಕ್ಕಾಗಿ, ಅದರಲ್ಲಿರುವ ಸಿದ್ಧಿ ತಂತ್ರಕ್ಕಾಗಿ, ನೀಲವಂತಿ ಗ್ರಂಥ ನೀಡೆಂದು ಪೀಡಿಸಿದ. ಆದರೆ ನೀಲವಂತಿ ಆ ಗ್ರಂಥ ನೀಡಲು ನಿರಾಕರಿಸಿದಳು. ಆದರೆ ಆಕೆಗೆ ಹಿಂಸೆ ನೀಡಿ, ಆ ಗ್ರಂಥವನ್ನು ಕಸಿದುಕೊಂಡ. ಆಗ ನೀಲವಂತಿ, ಈ ಗ್ರಂಥವನ್ನು ಯಾರು ಅರ್ಧ ಓದುತ್ತಾರೋ, ಅವರು ಹುಚ್ಚರಾಗುತ್ತಾರೆ. ಮತ್ತು ಪೂರ್ಣವಾಗಿ ನೀಲವಂತಿ ಗ್ರಂಥ ಓದುವವರು, ಭೂಮಿ ಬಿಟ್ಟು ಹೊರಟು ಹೋಗುತ್ತಾರೆ ಎಂದು ಶಾಪ ನೀಡಿದಳು. ಈ ಗ್ರಂಥ ಓದಿದವರು ಹುಚ್ಚರಾಗಿಯೂ, ಪೂರ್ತಿ ಓದಿದವರು ಮಾಯವಾಗಿರುವ ಉಹಾರಣೆಗಳು ಇವೆಯಂತೆ. ಹಾಗಾಗಿಯೇ ಸರ್ಕಾರ ಕೂಡ ಈ ಗ್ರಂಥ ಪ್ರಕಟಣೆ ಬ್ಯಾನ್ ಮಾಡಿದೆ.