Tuesday, September 16, 2025

Latest Posts

ಧಾರ್ಮಿಕ ಧಿರಿಸಿನಲ್ಲಿ ಕಾಣಿಸಿಕೊಂಡಿದ್ದೇಕೆ ಸಚಿವ ಜೋಶಿ

- Advertisement -

Hubli News: ಹುಬ್ಬಳ್ಳಿ: ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ ಜೋಶಿ ರಾಜಕೀಯ ಮಾತ್ರವಲ್ಲ ಧರ್ಮ ಅನುಸರಣೆಯಲ್ಲೂ ಸದಾ ಮುಂದಿರುವಂಥ ಸಜ್ಜನಿತರು ಎಂದು ಧಾರವಾಡದ ಜನ ಮಾತನಾಡುವಂತಾಗಿದೆ. ಕಲಬುರ್ಗಿಯಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಪ್ರಧಾನಿ ಮೋದಿ ಅವರೊಂದಿಗೆ ವೇದಿಕೆ ಹಂಚಿಕೊಂಡ ಜೋಶಿ ಅವರು ಸಂಜೆ ವೇಳೆಗಾಗಲೇ ಹುಬ್ಬಳ್ಳಿಯಲ್ಲಿ ಜರುಗಿದ ಶ್ರೀನಿವಾಸ ಕಲ್ಯಾಣೋತ್ಸವದಲ್ಲಿ ಧಾರ್ಮಿಕ ಧಿರಿಸಿನಲ್ಲಿ ಪ್ರತ್ಯಕ್ಷರಾದರು. ಹುಬ್ಬಳ್ಳಿ ಭವಾನಿ ನಗರದ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠದ ಆವರಣದಲ್ಲಿ ಏರ್ಪಡಿಸಿದ್ದ ಶ್ರೀನಿವಾಸ ಕಲ್ಯಾಣೋತ್ಸವ ಸಮಾರಂಭದಲ್ಲಿ ಭಾಗವಹಿಸಿ, ದೇವರ ಕೃಪೆಗೆ ಪಾತ್ರರಾದರು.

ಮೊನ್ನೆ ಮೊನ್ನೆ ಧಾರವಾಡದಲ್ಲಿ ಮೋದಿ ಮತ್ತೆ ಪ್ರಧಾನಿ ಆಗಲೆಂಬ ಸಂಕಲ್ಪದಲ್ಲಿ ಏರ್ಪಡಿಸಿದ್ದ ಚಂಡಿಕಾಯಾಗದಲ್ಲಿ ಭಾಗಿಯಾಗಿದ್ದರು. ಶ್ರೀರಾಮನವಮಿ ಮತ್ತು ಅಯೋಧ್ಯೆ ರಾಮ ಮಂದಿರ ಲೋಕಾರ್ಪಣೆ ವೇಳೆ ಸಹ ಶ್ರೀರಾಮ ಭಜನೆ ಸ್ತುತಿಸುವ ಮೂಲಕ ಗಮನ ಸೆಳೆದಿದ್ದರು. ಬಿಜೆಪಿ ಟಿಕೆಟ್ ಘೋಷಣೆ ಬಳಿಕ ಹುಬ್ಬಳ್ಳಿ- ಧಾರವಾಡ ಕ್ಷೇತ್ರದಲ್ಲಿ ಮೂರುಸಾವಿರ ಮಠ, ಸಿದ್ಧಾರೂಢ ಮಠ, ಮುರುಘಾ ಮಠ, ರಾಯರ ಮಠ ಸೇರಿದಂತೆ ವಿವಿಧ ದೇವಸ್ಥಾನಗಳಿಗೂ ತೆರಳಿ ಪೂಜೆ ಸಲ್ಲಿಸಿದ್ದನ್ನು ಸ್ಮರಿಸಬಹುದು.

ಕೇಂದ್ರ ಗೃಹಸಚಿವ ಅಮಿತ್‌ಷಾರನ್ನು ಭೇಟಿಯಾದ ಗೌಡರ ಕುಟುಂಬ

ಅಸಮಾಧಾನ ಎರಡು ಮೂರು ದಿನಗಳಲ್ಲಿ ಶಮಮಗೊಳ್ಳುತ್ತದೆ: ಬಿ.ಎಸ್.ಯಡಿಯೂರಪ್ಪ

ಚುನಾವಣೆ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಧಾರವಾಡ ಜಿಲ್ಲಾಧಿಕಾರಿ

- Advertisement -

Latest Posts

Don't Miss