Wednesday, December 4, 2024

Latest Posts

ಜೀನ್ಸ್ ಪ್ಯಾಂಟ್‌ನಲ್ಲಿ ಚಿಕ್ಕ ಪಾಕೇಟ್ ಇರಲು ಕಾರಣವೇನು..?

- Advertisement -

News: ನಾವು ನೀವೆಲ್ಲ ಧರಿಸುವ ಜೀನ್ಸ್ ಪ್ಯಾಂಟ್‌ನಲ್ಲಿ ಚಿಕ್ಕದೊಂದು ಪಾಕೇಟ್ ಇರುತ್ತದೆ. ಆ ಪಾಕೇಟ್‌ನ್ನು ಕೆಲವು ಉಪಯೋಗಿಸುತ್ತಾರೆ. ಇನ್ನು ಕೆಲವರು ಎಂದಿಗೂ ಉಪಯೋಗಿಸಿರುವುದೇ ಇಲ್ಲ. ಆದರೆ ಆ ಚಿಕ್ಕ ಪಾಕೇಟ್ ಮಾಡಿರೋದಾಾದ್ರೂ ಯಾಕೆ ಅನ್ನೋ ಸಂಗತಿ ಕೆಲವರಿಗೆ ಗೊತ್ತೇ ಇಲ್ಲ. ಆ ಬಗ್ಗೆ ಇಂದು ಮಾಹಿತಿ ತಿಳಿಯೋಣ ಬನ್ನಿ.

ಹಿಂದಿನ ಕಾಲದಲ್ಲಿ ವಿದೇಶದಲ್ಲಿ ಕೆಲಸ ಮಾಡುವ ಕೂಲಿ ಆಳುಗಳು ಜೀನ್ಸ್ ಪ್ಯಾಂಟ್ ಧರಿಸುತ್ತಿದ್ದರು. ಏಕೆಂದರೆ, ಜೀನ್ಸ್ ಪ್ಯಾಂಟ್ ಪದೇ ಪದೇ ತೊಳೆಯಬೇಕು ಎಂದಿರಲಿಲ್ಲ. ವಾರಪೂರ್ತಿ ಧರಿಸಿ, ವಾರಕ್ಕೊಮ್ಮೆ ತೊಳೆಯುತ್ತಿದ್ದರು. ಅಲ್ಲದೇ, ಬಟ್ಟೆ ಗಟ್ಟಿಮುಟ್ಟಾಗಿದ್ದ ಕಾರಣ, ಅದು ಬೇಗ ಹರಿಯುತ್ತಿರಲಿಲ್ಲ. ಹೀಗಿರುವಾಗ, ಜೀನ್ಸ್ ಪ್ಯಾಂಟ್‌ನ ಮುಂಬದಿಯ ಪಾಕೇಟ್‌ನಲ್ಲಿ ಅಲ್ಲಿನ ಜನ ಒಂದು ವಾಚ್ ಇಟ್ಟುಕೊಂಡು ಹೋಗುತ್ತಿದ್ದರು. ಆ ವಾಚ್ ಧರಿಸಲು ಸಾಧ್ಯವಿಲ್ಲದ ಕಾರಣ ಮತ್ತು ವಾಚ್ ಧರಿಸಿದರೆ, ಕೆಲಸ ಮಾಡುವಾಗ ವಾಚ್ ಹಾಳಾಗುತ್ತದೆ ಎಂದು ಅಲ್ಲಿನ ಜನ ಪಾಕೇಟ್ ವಾಚ್ ಬಳಸುತ್ತಿದ್ದರು.

ಈ ಪಾಕೇಟ್ ವಾಚ್ ಕಿಸೆಯಲ್ಲಿಯೇ ಇರುತ್ತಿತ್ತು. ಆದರೆ ಕಿಸೆಯಲ್ಲಿರುವ ವಾಚ್‌ ಹೆಚ್ಚು ಕ್ರ್ಯಾಕ್ ಆಗುತ್ತಿತ್ತು. ಹಾಗಾಗಿ ಅಲ್ಲಿನ ಜನರ ವಾಚ್ ಪದೇ ಪದೇ ಹಾಳಾಗುತ್ತಿತ್ತು. ಆಗ ವಿದೇಶಿಯ ಟೈಲರ್‌ಗಳು ಇನ್ನು ಮುಂದೆ ಜೀನ್ಸ್ ಪ್ಯಾಂಟ್ ಹೊಲೆಯುವಾಗ, ಪಾಕೇಟ್ ಒಳಗೆ ಇನ್ನೊಂದು ಚಿಕ್ಕ ಪಾಕೇಟ್ ಹೊಲಿದು, ಅದರಲ್ಲಿ ವಾಚ್ ಇಡುವಂತೆ ಅನುಕೂಲ ಮಾಡಿಕೊಡಬೇಕು ಎಂದು ನಿರ್ಧರಿಸಿ, ಆ ರೀತಿ ಪಾಕೇಟ್ ಹೊಲಿದರು. ಹಾಗಾಗಿಯೇ ಪ್ಯಾಂಟ್‌ನ ಕಿಸೆಯೊಳಗೆ ಇನ್ನೊಂದು ಪುಟ್ಟ ಕಿಸೆ ಇರುವುದು.

- Advertisement -

Latest Posts

Don't Miss