Tuesday, October 14, 2025

Latest Posts

Spiritual: ರಾತ್ರಿ ಪರ್ಫ್ಯೂಮ್ ಹಾಕಬಾರದು ಅಂತಾ ಹೇಳೋದ್ಯಾಕೆ..?

- Advertisement -

Spiritual: ಈಗೆಲ್ಲಾ ಘಮ ಘಮ ಅನ್ನೋಕ್ಕೆ ಯುವ ಪೀಳಿಗೆ ಪರ್ಫ್ಯೂಮ್ ಹಾಕುತ್ತಾರೆ. ಆದರೆ ಮುಂಚೆ ಎಲ್ಲಾ, ಉತ್ತಮ ಸೋಪ್‌ನಿಂದ ಸ್ನಾನ ಮಾಡಿದ್ರೆ ಸಾಕಿತ್ತು. ದೇಹ ಘಮಗೂಡುವುದಕ್ಕೆ ಅದಷ್ಟೇ ಸಾಕಿತ್ತು. ಪರ್ಫ್ಯೂಮ್ ಅಥವಾ ಸೆಂಟ್ ಅಂದ್ರೆ ಅಪರೂಪದ ವಸ್ತುವಾಗಿತ್ತು. ಅದರ ಬಳಕೆಯೂ ಕಡಿಮೆ ಇತ್ತು. ಆದರೆ ಇದೀಗ ಎಲ್ಲರ ಬಳಿಯೂ 5ರಿಂದ 10 ತರಹದ ಪರ್ಫ್ಯೂಮ್ ಇರುತ್ತದೆ.

ಆದರೆ ನಾವು ಕೆಲವು ಬಾರಿ ಪರ್ಫ್ಯೂಮ್ ಹಾಕಬಾರದು ಅನ್ನೋ ನಿಯಮ ಇದೆ. ರಾತ್ರಿ ವೇಳೆ ಪರ್ಫ್ಯೂಮ್ ಹಾಕಬಾರದು ಅಂತಾ ಹೇಳ್ತಾರೆ. ಹಾಗಾದ್ರೆ ಯಾಕೆ ಹೀಗೆ ಹೇಳ್ತಾರೆ..? ಇದರ ಹಿಂದಿರುವ ಕಾರಣವೇನು ಅಂತಾ ತಿಳಿಯೋಣ ಬನ್ನಿ..

ಆಧ್ಯಾತ್ಮಿಕತೆಗೆ ಧಕ್ಕೆಯುಂಟಾಗುತ್ತದೆ: ಹಿಂದೂ ಧರ್ಮದ ಪ್ರಕಾರ, ರಾತ್ರಿ ವೇಳೆ ನಾವು ದೇವರ ಧ್ಯಾನದಲ್ಲಿ ತ“ಡಗಬೇಕು. ಪ್ರಾರ್ಥಿಸಿ ಮಲಗಬೇಕು ಅಂತಾ ಹೇಳಲಾಗುತ್ತದೆ. ಆದರೆ ಸುಗಂಧ ದ್ರವ್ಯ ಬಳಸುವುದರಿಂದ ನಿಮ್ಮ ಏಕಾಗೃತೆಗೆ ಧಕ್ಕೆಯುಂಟಾಗಬಹುದು.

ನಕಾರಾತ್ಮಕ ಶಕ್ತಿ ಆಕರ್ಷಿಸುತ್ತದೆ: ರಾತ್ರಿ ವೇಳೆ ಪರ್ಫ್ಯೂಮ್ ಬಳಸಿದರೆ, ನಕಾರಾತ್ಮಕ ಶಕ್ತಿ ಆಕರ್ಷಿಸುತ್ತದೆ ಅಂತಾ ಹೇಳಲಾಗಿದೆ. ಇದರ ಅನುಭವವೂ ಹಲವರಿಗೆ ಆಗಿರುತ್ತದೆ. ಕೆಲ ಜಾಗಗಳಲ್ಲಿ ಆತ್ಮಗಳ ಓಡಾಟವಿರುತ್ತದೆ. ಇವುಗಳು ಸುವಾಸನೆಯನ್ನು ಹುಡುಕಿ, ಮನುಷ್ಯನ ಬೆನ್ನಟ್ಟುತ್ತದೆ ಅಂತಾ ಹೇಳಲಾಗಿದೆ. ಹಾಗಾಗಿ ರಾತ್ರಿ ವೇಳೆ ಪರ್ಫ್ಯೂಮ್ ಹಾಕಬಾರದು.

ನಿದ್ರೆಯ ಮೇಲೆ ಪರಿಣಾಮ ಬೀರುತ್ತದೆ: ರಾತ್ರಿ ಪರ್ಫ್ಯೂಮ್ ಬಳಸುವುದರಿಂದ ತಲೆನೋವು ಬರಬಹುದು. ಅಲ್ಲದೇ, ಕೆಲವರಿಗೆ ಸರಿಯಾಗಿ ನಿದ್ರೆ ಬರುವುದಿಲ್ಲ. ಕನಸು ಕೂಡ ಅಸ್ಪಷ್ಟವಾಗುತ್ತದೆ.

ಆರೋಗ್ಯ ಹದಗೆಡಬಹುದು: ಹಲವು ಪರ್ಫ್ಯೂಮ್ ನಲ್ಲಿ ಕೆಮಿಕಲ್‌ಗಳು ಇರುತ್ತದೆ. ಇದು ನಿಮ್ಮ ಆರೋಗ್ಯವನ್ನು ಹದಗೆಡಿಸುತ್ತದೆ. ಅದರಲ್ಲೂ ರಾತ್ರಿ ವೇಳೆ ಸೂರ್ಯನ ಶಾಖವಿರದ ಕಾರಣ, ಪರ್ಫ್ಯೂಮ್ ಹೆಚ್ಚು ವೇಳೆ ನಿಮ್ಮ ಉಡುಪಿಗೋ, ಅಥವಾ ದೇಹಕ್ಕೋ ಅಂಟಿಕ“ಂಡಿರುತ್ತದೆ. ಇದರಿಂದ ಆರೋಗ್ಯ ಹಾಳಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ರಾತ್ರಿ ವೇಳೆ ಪರ್ಫ್ಯೂಮ್ ಹಾಕುವುದನ್ನು ಆದಷ್ಟು ಕಡೆಗಣಿಸಿ.

ಇನ್ನು ದೇಹ ಪರಿಮಳದಿಂದ ಕೂಡಿರಬೇಕು ಅಂದ್ರೆ, ನೀರಿಗೆ ಉಪ್ಪು- ನಿಂಬೆರಸ ಬೆರೆಸಿ ಸ್ನಾನ ಮಾಡಿ. ಇದರಿಂದ ದೇಹದ ದುರ್ಗಂಧ ಹೋಗುತ್ತದೆ. ಫ್ರೆಶ್ ಆಗಿಯೂ ಇರುತ್ತೀರಿ.

- Advertisement -

Latest Posts

Don't Miss