Political News: ಬಿಜೆಪಿಗರು ಹನುಮಾನ್ ಚಾಲೀಸಾ ಹಾಕಿದ್ದಕ್ಕಾಗಿ, ಹಲ್ಲೆಗೊಳಗಾಗಿದ್ದ ಮುಕೇಶ್ ಪರ ನಿಂತು ಪ್ರತಿಭಟನೆ ಮಾಡಿದ್ದು, ಈ ಬಗ್ಗೆ ದಿನೇಶ್ ಗುಂಡೂರಾವ್ ಆಕ್ರೋಶ ಹೊರಹಾಕಿದ್ದರು. ಅದೇ ರೀತಿ ಇಂದು ದಸಿಚನ ದಿನೇಶ್ ಗುಂಡೂರಾವ್ ಬಿಜೆಪಿ ವಿರುದ್ಧ ಟ್ವೀಟ್ ಮಾಡಿದ್ದು, ನಮ್ಮ ದೇಶದ ಮುಸ್ಲಿಂ ಯುವಕರು ಬಿಜೆಪಿಯವರಿಂದ ದೌರ್ಜನ್ಯಕ್ಕೊಳಗಾಗಿ ಮಾಡದ ತಪ್ಪಿಗೆ ವರ್ಷಾನುಗಟ್ಟಲೆ ಜೈಲು ಶಿಕ್ಷೆ ಅನುಭವಿಸುತ್ತಿರೋದನ್ನು ನೋಡಿದರೆ ಬಿಜೆಪಿಯವರ ಕೋಮುದ್ವೇಷದ ಬಗ್ಗೆ ಅರ್ಥವಾಗುತ್ತದೆ ಎಂದಿದ್ದಾರೆ.
ಮಧ್ಯಪ್ರದೇಶದಲ್ಲಿ 2017ರ ಜೂನ್‌ನಲ್ಲಿ ನಡೆದಿದ್ದ ಕ್ರಿಕೆಟ್ ಪಂದ್ಯವೊಂದರಲ್ಲಿ ಪಾಕಿಸ್ತಾನ ಜಯಗಳಿಸಿದ ಬಳಿಕ ಮುಸ್ಲಿಂ ಯುವಕರು ವಿಜಯೋತ್ಸವ ನಡೆಸಿದ್ದಾರೆಂಬ ಆರೋಪದ ಮೇಲೆ ಬಂಧಿತರಾಗಿದ್ದ 16 ಮಂದಿಯನ್ನು 6 ವರ್ಷದ ಬಳಿಕ ನ್ಯಾಯಾಲಯವು ಖುಲಾಸೆಗೊಳಿಸಿ ಪೊಲೀಸರ ಕಟ್ಟುಕಥೆಯನ್ನು ಬಯಲಿಗೆಳೆದಿದೆ. ಅಮಾಯಕರನ್ನು ‘ದೇಶದ್ರೋಹಿ’ಗಳೆಂದು ಬಿಂಬಿಸಿ ಬರೋಬ್ಬರಿ 6 ವರ್ಷ ಅವರ ಜೀವನವನ್ನು ನರಕ ಮಾಡಿದ ಬಿಜೆಪಿಯವರಿಗೇಕೆ ಶಿಕ್ಷೆ ಇಲ್ಲ? ಮುಸ್ಲಿಂ ಯುವಕರ ಮೇಲೇಕೆ ಬಿಜೆಪಿಯವರಿಗೆ ಈ ಪರಿ ದ್ವೇಷ? ಎಂದು ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.
ಮುಸ್ಲಿಂಮರು ಈ ದೇಶದ ಪ್ರಜೆಗಳಲ್ಲವೇ? ನಮ್ಮ ಸಂವಿಧಾನ ಈ ದೇಶದಲ್ಲಿ ಬದುಕುವ ಹಕ್ಕು ಅವರಿಗೂ ಕೊಟ್ಟಿದೆ ಅಲ್ಲವೇ? ಬಿಜೆಪಿಯವರ ಕೋಮುದ್ವೇಷಕ್ಕೆ ಇನ್ನೆಷ್ಟು ದಿನ ಇಂತಹ ಅಮಾಯಕರು ನೋವು ಅನುಭವಿಸಬೇಕು? ಇದಕ್ಕೆಲ್ಲ ಶಾಶ್ವತ ಪರಿಹಾರ ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ನಮ್ಮ ದೇಶದ ಮುಸ್ಲಿಂ ಯುವಕರು ಬಿಜೆಪಿಯವರಿಂದ ದೌರ್ಜನ್ಯಕ್ಕೊಳಗಾಗಿ ಮಾಡದ ತಪ್ಪಿಗೆ ವರ್ಷಾನುಗಟ್ಟಲೆ ಜೈಲು ಶಿಕ್ಷೆ ಅನುಭವಿಸುತ್ತಿರೋದನ್ನು ನೋಡಿದರೆ ಬಿಜೆಪಿಯವರ ಕೋಮುದ್ವೇಷದ ಬಗ್ಗೆ ಅರ್ಥವಾಗುತ್ತದೆ.
ಮಧ್ಯಪ್ರದೇಶದಲ್ಲಿ 2017ರ ಜೂನ್‌ನಲ್ಲಿ ನಡೆದಿದ್ದ ಕ್ರಿಕೆಟ್ ಪಂದ್ಯವೊಂದರಲ್ಲಿ ಪಾಕಿಸ್ತಾನ ಜಯಗಳಿಸಿದ ಬಳಿಕ ಮುಸ್ಲಿಂ ಯುವಕರು ವಿಜಯೋತ್ಸವ…
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) March 21, 2024
ಕಾಂಗ್ರೆಸ್ ಸರ್ಕಾರ ಹಾಸನದ ರೈತರಿಗೂ ದ್ರೋಹ ಬಗೆದಿದೆ: ಮಾಜಿ ಶಾಸಕ ಪ್ರೀತಂಗೌಡ
ಮಾಜಿ ಸಿಎಂ ಯಡಿಯೂರಪ್ಪ, ವಿಜಯೇಂದ್ರ ಅವರನ್ನು ಭೇಟಿಯಾದ ಮಾಜಿ ಸಚಿವ ರೇವಣ್ಣ, ಪ್ರಜ್ವಲ್