Health Tips: ದೇಹಕ್ಕೆ ಬೇಕಾದ ಪೋಷಕಾಂಶಗಳು ಸರಿಯಾಗಿ ಸಿಕ್ಕಾಗಲೇ ನಾವು ಆರೋಗ್ಯವಾಗಿ ಇರೋಕ್ಕೆ ಸಾಧ್ಯವಾಗೋದು. ಒಂದೇ ಒಂದು ಪೋಷಕಾಂಶದ ಕೊರತೆಯುಂಟಾದರೂ, ನಮ್ಮ ಆರೋಗ್ಯ ಏರುಪೇರಾಗೋಕ್ಕೆ ಶುರುವಾಗುತ್ತದೆ. ಇನ್ನು ದೇಹದಲ್ಲಿ ವಿಟಾಮಿನ್ ಎ,ಬಿ,ಸಿ,ಡಿ,ಈ ಇವೆಲ್ಲವೂ ಇರುವುದು ತುಂಬಾ ಮುಖ್ಯ. ಹಾಗಾಗಿ ದೇಹಕ್ಕೆ ವಿಟಾಮಿನ್ ಎ ಏಕೆ ಬೇಕು..? ಇದರಿಂದ ಏನು ಪ್ರಯೋಜನ..? ಇದನ್ನು ಪಡೆಯಲು ನಾವು ಏನನ್ನೂ ಸೇವಿಸಬೇಕು..? ಇತ್ಯಾದಿ ವಿಷಯಗಳ ಬಗ್ಗೆ ತಿಳಿಯೋಣ ಬನ್ನಿ..
ದೇಹದಲ್ಲಿರುವ ನೀರಿನ ಅಂಶದ ಪೂರೈಕೆ ಮತ್ತು ಚರ್ಮದ ಆರೈಕೆ ಮಾಡುವಲ್ಲಿ ವಿಟಾಮಿನ್ ಎ ಪ್ರಮುಖ ಪಾತ್ರ ವಹಿಸುತ್ತದೆ. ಹಾಗಾಗಿ ನಿಮ್ಮ ದೇಹದ ಚರ್ಮ ಒಣಗಿರುವ ರೀತಿಯಾಗಿದೆ. ನಿಮ್ಮ ತುಟಿಗಳು ಒಣಗುತ್ತಿದೆ, ನಿಮ್ಮಲ್ಲಿ ಚೈತನ್ಯ ಕಡಿಮೆಯಾಗಿದೆ ಅಂದ್ರೆ, ನಿಮ್ಮ ದೇಹದಲ್ಲಿ ವಿಟಾಮಿನ್ ಎ ಪ್ರಮಾಣ ಕಡಿಮೆಯಾಗಿದೆ ಎಂದರ್ಥ.
ಅಲ್ಲದೇ, ನಿಮಗೆ ಸರಿಯಾಗಿ ಕಣ್ಣು ಕಾಣಿಸುತ್ತಿಲ್ಲ. ಅಥವಾ ಕಣ್ಣಿನಲ್ಲಿ ಪೊರೆ ಬಂದಿದೆ. ದೃಷ್ಟಿಹೀನ ಸಮಸ್ಯೆ, ಕಣ್ಣಲ್ಲಿ ಪದೇ ಪದೇ ನೀರು ಬರುವುದು. ಗಜಕರ್‌ಣ, ಚರ್ಮ ರೋಗದ ಸಮಸ್ಯೆ, ತುರಿಕೆ ಸಮಸ್ಯೆ, ಇವೆಲ್ಲವೂ ಕಾಣಿಸಿಕೊಂಡಲ್ಲಿ ನಿಮ್ಮ ದೇಹದಲ್ಲಿ ವಿಟಾಮಿನ್ ಎ ಪ್ರಮಾಣ ಕಡಿಮೆಯಾಗಿದೆ ಎಂದರ್ಥ.
ಇನ್ನು ನಮ್ಮ ದೇಹಕ್ಕೆ ವಿಟಾಮಿನ್ ಎ ಅಂಶ ಸಿಗಬೇಕು ಅಂದ್ರೆ, ನೀವು ಕುಡಿಯುವ ನೀರಿನ ಪ್ರಮಾಣವನ್ನು ಕೊಂಚ ಹೆಚ್ಚಿಸಬೇಕು. ಬಾಯಾರಿಕೆಯಾದಾಗ, ನೀರನ್ನೇ ಕುಡಿಯಿರಿ. ಹಸಿವಾಗುತ್ತಿದೆ ಎಂದಾಗ, ಕೊಂಚ ನೀರು ಕುಡಿದು, ಆಹಾರವನ್ನು ಸೇವಿಸಿ.
ಇದರ ಜೊತೆಗೆ ಹಸಿರು ಸೊಪ್ಪು, ತರಕಾರಿಗಳನ್ನು ಚೆನ್ನಾಗಿ ತೊಳೆದು ಸ್ವಚ್ಛಗೊಳಿಸಿ ತಿನ್ನಬೇಕು. ಇನ್ನು ನಾನ್‌ವೆಜ್ ತಿನ್ನುವವರು ಮೀನಿನ ಎಣ್ಣೆಯಿಂದ ಮಾಡಿದ ಮಾತ್ರೆ ಸೇವನೆಯನ್ನು ಮಾಡಬಹುದು. ಆದರೆ ಈ ಮಾತ್ರೆ ಸೇವನೆಗೂ ಮುನ್ನ, ವೈದ್ಯರ ಬಳಿ ವಿಚಾರಿಸಿ, ಬಳಿಕ ಮಾತ್ರೆ ಸೇವಿಸಿ. ಈ ಬಗ್ಗೆ ಸಂಪೂರ್ಣ ಮಾಹಿತಿಗಾಗಿ ವೀಡಿಯೋ ನೋಡಿ.