Spiritual: ಭಗವದ್ಗೀತೆಯಲ್ಲಿ ಜೀವನ ಸಾರವನ್ನೇ ಹೇಳಲಾಗಿದೆ. ಮನುಷ್ಯ ಜೀವನದಲ್ಲಿ ರೀತಿ ನಡೆದುಕೊಳ್ಳಬೇಕು. ಮನುಷ್ಯ ನೆಮ್ಮದಿಯಾಗಿರಬೇಕು ಅಂದ್ರೆ, ಯಾವ ವಿಷಯವನ್ನು ಅರಿತುಕೊಳ್ಳಬೇಕು ಎಂಬ ಬಗ್ಗೆ ಭಗವದ್ಗೀತೆಯಲ್ಲಿ ಬರೆಯಲಾಗಿದೆ. ಅಷ್ಟೇ ಅಲ್ಲದೇ ಮನುಷ್ಯ ಯಾವ ರೀತಿಯ ಆಹಾರವನ್ನು ಸೇವಿಸಬೇಕು ಎಂಬ ಬಗ್ಗೆಯೂ ಭಗವದ್ಗೀತೆಯಲ್ಲಿ ಬರೆಯಲಾಗದೆ. ಅದರಲ್ಲೂ ಮನುಷ್ಯ ಅಗತ್ಯಕ್ಕಿಂತ ಹೆಚ್ಚು ಉಪ್ಪು, ಹುಳಿ, ಖಾರ ಸೇವನೆ ಮಾಡಿದರೆ ಏನಾಗುತ್ತದೆ ಅಂತಲೂ ಹೇಳಲಾಗಿದೆ. ಆ ಬಗ್ಗೆ ತಿಳಿಯೋಣ ಬನ್ನಿ.
ಯಾವ ಮನುಷ್ಯ ಅಗತ್ಯಕ್ಕಿಂತ ಹೆಚ್ಚು ಉಪ್ಪು, ಹುಳಿ, ಖಾರದ ಸೇವನೆ ಮಾಡುತ್ತಾನೋ, ಯಾರಿಗೆ ರುಚಿ ರುಚಿಯಾದ, ಖಾರ ಖಾರವಾದ ಮಸಾಾಲೆಯುಕ್‌ತ ಪದಾರ್ಥ ಹೆಚ್ಚು ತಿನ್ನಬೇಕು ಅನ್ನಿಸುತ್ತದೆಯೋ, ಅಥವಾ ಯಾರು ಹೆಚ್ಚು ಮಸಾಲೆಯುಕ್ತ, ಖಾರ ಖಾರವಾದ ಪದಾರ್ಥ ಸೇವನೆ ಮಾಡುತ್ತಾರೋ ಅಂಥವರಲ್ಲಿ ರಜೋಗುಣ ಹೆಚ್ಚಾಗುತ್ತದೆ.
ಅಂದರೆ ಅವರಲ್ಲಿ ಸಾತ್ವಿಕ ಗುಣ ಕಡಿಮೆ ಇರುತ್ತದೆ. ಸಿಟ್ಟು, ಸಿಡುಕು, ಕೋಪ ಹೆಚ್ಚಾಗಿರುತ್ತದೆ. ಇದೇ ರೀತಿ ಅಂಥವರಿಗೆ ದುಃಖ, ರೋಗ, ರುಜಿನ, ಚಿಂತೆ, ಮಾನಸಿಕ ಒತ್ತಡವೂ ಹೆಚ್ಚಾಗಿರುತ್ತದೆ. ಅಂಥವರಿಗೆ ಮಾತಿನ ಮೇಲೆಯೂ ಹಿಡಿತ ಕಡಿಮೆ ಇರುತ್ತದೆ. ಹಾಗಾಗಿ ಆದಷ್ಟು ಸಪ್ಪೆಯಾಗಿರುವ, ಉಪ್ು, ಹುಳಿ, ಖಾರ ಕಡಿಮೆ ಇರುವ ಸಾತ್ವಿಕ ಆಹಾರ ಸೇವನೆ ಮಾಡಿ, ಉತ್ತಮವಾದ, ನೆಮ್ಮದಿಯಾದ ಜೀವನ ನಡೆಸಿ ಎಂದು ಭಗವದ್ಗೀತೆಯಲ್ಲಿ ಹೇಳಲಾಗಿದೆ.




