Sunday, September 8, 2024

Latest Posts

ಯೋಗಿ ಮೇಲೆ ಮೋದಿ, ಶಾಗೆ ಪ್ರೀತಿಯೇಕೆ..?

- Advertisement -

ಕರ್ನಾಟಕ ಟಿವಿ : ಯಡಿಯೂರಪ್ಪ ಸರ್ಕಾರದ ಎರಡನೇ ಹಂತದ ಸಂಪುಟ ವಿಸ್ತರಣೆ ಭಾರೀ ವಿವಾದಕ್ಕೆ ಕಾರಣವಾಗಿದೆ.. ಅರ್ಹ ಶಾಸಕರ ಜೊತೆ ಮೂಲ ಬಿಜೆಪಿಯ ಮೂವರ ಸೇರ್ಪಡೆ ಮಾಡಿಕೊಳ್ಳಲು ಯಡಿಯೂರಪ್ಪ ನಿರ್ಧರಿಸಿದ್ದಾರೆ.. ಈ ಮೂವರಲ್ಲಿ ಒಬ್ಬರು ಮಾಜಿ ಶಾಸಕರು.. ಅದೇ ಚನ್ನಪಟ್ಟಣ ಸೈನಿಕ, ಕುಮಾರಸ್ವಾಮಿ ಸರ್ಕಾರ ಬೀಳಿಸಿ ಯಡಿಯೂರಪ್ಪ ಸರ್ಕಾರ ಸ್ಥಾಪನೆ ಮಾಡಿದ ನಾವೀಕ ಯೋಗೀಶ್ವರ್.

https://www.youtube.com/watch?v=5wuR7e16fYw

 ಸಿ.ಪಿ ಯೋಗೀಶ್ವರ್ ಮೈತ್ರಿ ಸರ್ಕಾರ ಬೀಳಿಸಲು 9 ಬಾರಿ ವಿಫಲ ಪ್ರಯತ್ನ ಮಾಡಿದ್ರು.. ನಂತರ  ಬಿಜೆಪಿ ಹೈಕಮಾಂಡ್ ಆಪರೇಷನ್ ಕಮಲ ಕೈಬಿಟ್ಟು ವಿರೋಧ ಪಕ್ಷದಲ್ಲಿ ಕೂರಲು ಆದೇಶ ಕೊಡ್ತು.. ಯಡಿಯೂರಪ್ಪ ಸಹ ಯೋಗೀಶ್ವರ್ ಗೆ ಸುಮ್ಮನೆ ಇರಪ್ಪ ನಾವು ಸರ್ಕಾರ ಮಾಡಲು ಸಾಧ್ಯವಾಗಲ್ಲ ಅಂತ ಹೇಳಿಬಿಟ್ರು.. ಆದ್ರೆ ಛಲಬಿಡದ ತ್ರಿವಿಕ್ರಮನಂತೆ ಯೋಗೀಶ್ವರ್ ಮತ್ತೆ ಹೈಕಮಾಂಡ್ ಮುಂದೆ ಹೋಗಿ ನನಗೆ ಕಡೇ ಬಾರಿ ಅವಕಾಶ ಕೊಡಿ ನಾನು ಸರ್ಕಾರ ಬೀಳಿಸುತ್ತೇನೆ.. ಯಡಿಯೂರಪ್ಪ ನೇತೃತ್ವದ  ಸರ್ಕಾರ ಅಧಿಕಾರಕ್ಕೆ ತರ್ತೇನೆ ಅಂತ ಹೇಳಿ ಬಂದ್ರು.. 9 ಬಾರಿ ವಿಫಲವಾಗಿದ್ದ ಯೋಗೀಶ್ವರ್ ಹತ್ತನೇ ಬಾರಿ 17 ಶಾಸಕರನ್ನ ರಾಜೀನಾಮೆ ಕೊಡಿಸಿ ಯಡಿಯೂರಪ್ಪ ಸರ್ಕಾರ ಬರಲು ಕಾರಣರಾದ್ರು.. ಆದ್ರೆ, ಈಗ ಇದೇ ಯೋಗೀಶ್ವರ್ ಸಂಪುಟ ಸೇರ್ಪಡೆಯಾಗ್ತಿರೋದು   ವಿವಾದಕ್ಕೆ ಕಾರಣವಾಗಿದೆ.. 

ಆಪರೇಷನ್ ಮಾಡುವಾಗ ಓಕೆ..  ಸಚಿವ ಸ್ಥಾನ ಕೊಡುವಾಗ ಸೋಲಿನ ಬಗ್ಗೆ ವಿರೋಧವ್ಯಾಕೆ..?

ಕುಮಾರಸ್ವಾಮಿ ಸರ್ಕಾರ ಬೀಳಿಸಲು ಆಪರೇಷನ್ ಕಮಲಕ್ಕೆ ಮುಂದಾದ ಮಾಜಿ ಶಾಸಕ ಯೋಗೀಶ್ವರ್ ಸಕಲೇಶಪುರದಲ್ಲಿ ಸೋತ ಜಿಮ್ ಸೋಮು, ಮದ್ದೂರಿನ ಉದಯ್ ಗೌಡ ಹಾಗೂ ಅಂದಿನ ಮಲ್ಲೇಶ್ವರಂ ಶಾಸಕ, ಇಂದಿನ ಡಿಸಿಎಂ ಡಾ ಅಶ್ವಥ್ ನಾರಾಯಣ್ ತಂಡ ಕಟ್ಟಿಕೊಂಡು ಶಾಸಕರನ್ನ ಸೆಳೆಯೋ ಕೆಲಸಕ್ಕೆ ಮುಂದಾದ್ರೂ.. ಆಗ ಸುಮ್ಮನಿದ್ದು ಈಗ ವಿರೋಧ ಮಾಡ್ತಿರುವ ಬಿಜೆಪಿ ಶಾಸಕರು ಕುಮಾರಸ್ವಾಮಿ ಸರ್ಕಾರ ಬಿದ್ದು ಯಡಿಯೂರಪ್ಪ ಸಿಎಂ ಆದ್ರೆ ಸಾಕಪ್ಪ ಅಂತಿದ್ರು.. ಆದ್ರೀಗ ಮೈತ್ರಿ ಸರ್ಕಾರ ಬೀಳಿಸಿ ಬಿಜೆಪಿ ಸರ್ಕಾರ ತಂದ ಯೋಗೀಶ್ವರ್ ಗೆ ಸಚಿವ ಸ್ಥಾನ ನೀಡಲು ವಿರೋಧ ಮಾಡ್ತಿದ್ದಾರೆ..

ಯೋಗಿ ಮೇಲೆ ಮೋದಿ, ಶಾಗ್ಯಾಕೆ ಪ್ರೀತಿ ಗೊತ್ತಾ..?

ಕುಮಾರಸ್ವಾಮಿ,  ಡಿ ಕೆ ಶಿವಕುಮಾರ್ ಹೊಂದಾಣಿಕೆಯಿಂದಾಗಿ 2018ರ ವಿಧಾನಸಭಾ ಚುನಾವಣೆಯಲ್ಲಿ ಚನ್ನಪಟ್ಟಣ ಕ್ಷೇತ್ರದಲ್ಲಿ ಸೋಲು ಕಂಡ ಯೋಗೀಶ್ವರ್ ಅಂದೇ ದೋಸ್ತಿ ಸರ್ಕಾರ ಬೀಳಿಸುವ ಶಪಥ ಮಾಡಿ 7-8 ತಿಂಗಳು ಭೂಗತರಾಗಿದ್ರು.. ಕುಮಾರಸ್ವಾಮಿ ಅಂದು ಯೋಗೀಶ್ವರ್ ರನ್ನ ಸರ್ಕಾರ ಬೀಳಿಸುತ್ತಿರುವ  ಕಿಂಗ್ ಪಿನ್ ಅಂತಾನೆ ಹಲವು ಬಾರಿ ಆರೋಪ ಮಾಡಿದ್ರು.. ಯಾವಾಗ ಸೈನಿಕ ಸರ್ಕಾರ ಬೀಳಿಸಲು ಇನ್ನಿಲ್ಲದ ಪ್ರಯತ್ನ ಪಟ್ಟರೋ.. ಆಗ ಅಂದಿನ ಸಿಎಂ ಕುಮಾರಸ್ವಾಮಿ, ಸಚಿವ ಡಿಕೆಶಿ ಇಬ್ಬರೂ ಸೇರಿ ಯೋಗೀಶ್ವರ್ ರನ್ನ ಟಾರ್ಗೆಟ್ ಮಾಡಿದ್ರು..  ಆದರೂ ಯೋಗೀಶ್ವರ್ ಮಾತ್ರ ಬಿಟ್ಟ ಹಠ ಕೈಬಿಡದೆ ಕುಮಾರಸ್ವಾಮಿ ಸರ್ಕಾರವನ್ನ ಬೀಳಿಸಿದ್ರು..  ಇನ್ನು ದೇಶದಲ್ಲಿ ಮೋದಿ-ಶಾ ಜೋಡಿಗೆ ಎದುರೇಟು ಕೊಡುವ ತಾಕತ್ ಇರೋದು ಡಿಕೆಶಿಗೆ ಮಾತ್ರ.. ಇದೇ ಡಿಕೆಶಿಗೆ ಕೌಂಟರ್ ಕೊಡುವ ತಾಕತ್ ಬಿಜೆಪಿಯಲ್ಲಿ ಇರೋದು ಸಿ.ಪಿ ಯೋಗೀಶ್ವರ್ ಗೆ ಮಾತ್ರ ಅನ್ನೋದು ಆರ್ ಎಸ್ ಎಸ್ ನಾಯಕರಿಗೆ ಗೊತ್ತಾಗಿದೆ.. ಕಪಾಲಿ ಬೆಟ್ಟದಲ್ಲಿ ಯೇಸು ಪ್ರತಿಮೆ ನಿರ್ಮಾಣ ವಿವಾದ ೆದ್ದಾಗ ಕಲ್ಲಡ್ಕ ಪ್ರಭಾಕರ್ ಭಟ್ ಕರೆದುಕೊಂಡು ಬಂದು ಕನಕಪುರದಲ್ಲಿ ಹತ್ತು ಸಾವಿರ ಜನ ಸೇರಿಸಿ ಪ್ರತಿಭಟನೆ ಮಾಡಲಾಯ್ತು.. ಪ್ರತಿಭಟನೆ ಯಶಸ್ಸಿನ ಹಿಂದೆ ಇದೇ ಸಿ.ಪಿ ಯೋಗೀಶ್ವರ್ ಇದ್ರು.. ಅಂದೇ ಕಲ್ಲಡ್ಕ ಪ್ರಕಾರ್ ಭಟ್ ಬಿಜೆಪಿ ನಾಯಕರಿಗೆ  ಯೋಗೀಶ್ವರ್ ರನ್ನ ಮಂತ್ರಿ ಮಾಡಿದ್ರೆ ಪಕ್ಷಕ್ಕೆ ಸಂಘಟನೆಗೆ ಅನುಕೂಲವಾಗುತ್ತೆ ಅಂತ ಹೇಳಿದ್ರುಂತೆ.. ಜೊತೆಗೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಜೀ ಗೂ ಸಹ ಯೋಗೀಶ್ವರ್ ರನ್ನ ಮಂತ್ರಿ ಮಾಡುವಂತೆ ಸಲಹೆ ಕೊಟ್ಟಿದ್ದರಂತೆ..  ಹೀಗಾಗಿ ಚುನಾವಣೆಯಲ್ಲಿ ಸೋತಿದ್ದರೂ ಸಿ.ಪಿ ಯೋಗೀಶ್ವರ್ ಸಚಿವರನ್ನಾಗಿ ಮಾಡಲು ಮೋದಿ-ಅಮಿತ್ ಇಬ್ಬರು ಯಡಿಯೂರಪ್ಪಗೆ ಸೂಚನೆ ಕೊಟ್ಟಿದ್ದಾರಂತೆ..

ಬಿಜೆಪಿಗೆ ಯೋಗೀಶ್ವರ್ ಅಗತ್ಯ ಎಷ್ಟಿದೆ..?

ಇದಲ್ಲದೇ ಹಳೇ ಮೈಸೂರು ಭಾಗದಲ್ಲಿ ಪಕ್ಷ ಕಟ್ಟಲು ಯೋಗೀಶ್ವರ್ ಅನಿವಾರ್ಯ.. ಮುಂದೆ ಯಡಿಯೂರಪ್ಪ ನಾಯಕತ್ವವಿಲ್ಲದೆ ಬಿಜೆಪಿ ಅಧಿಕಾರಕ್ಕೆ ಬರಬೇಕಾದರೆ ಜೆಡಿಎಸ್ ಭದ್ರಕೋಟೆ ಎಂದು ಕರೆಸಿಕೊಳ್ತಿದ್ದ ಹಳೇ ಮೈಸೂರು ಭಾಗದಲ್ಲಿ ಕಮಲ ಅರಳಬೇಕಿದೆ..  ಇದಲ್ಲದೇ ಡಿಕೆ ಶಿವಕುಮಾರ್ ಹಾಗೂ ಕುಮಾರಸ್ವಾಮಿ ವಿರುದ್ಧ  ತೊಡೆ ತಟ್ಟಿ ರಾಜಕೀಯ ಮಾಡುವ ಏಕೈಕ ನಾಯಕ ಅಂದ್ರೆ ಅದು  ಸಿ.ಪಿ ಯೋಗೀಶ್ವರ್..  ಇದೆಲ್ಲಾ ಕಾರಣದಿಂದಾಗಿ ಸಿ.ಪಿ ಯೋಗೀಶ್ವರ್ ಗೆ ಸಚಿವ ಸ್ಥಾನ ಒಲಿದು ಬರ್ತಿದೆ.. ಹೀಗಾಗಿ ಬಿಜೆಪಿ ಶಾಸಕರನ್ನ ಎತ್ತಿಕಟ್ಟುವ ಮೂಲಕ ಯೋಗೀಶ್ವರ್ ಮಂತ್ರಿಯಾಗೋದನ್ನ ಕಾಂಗ್ರೆಸ್, ಜೆಡಿಎಸ್ ನ ಇಬ್ಬರು ನಾಯಕರು ಮಾಡ್ತಿದ್ದಾರೆ ಅಂತ ಬಿಜೆಪಿ ನಾಯಕರೇ ಮಾತಾಡಿಕೊಳ್ತಿದ್ದಾರೆ.. ಈ ನಡುವೆ ಯಾವುದೇ ಕಾರಣಕ್ಕೂ ಯೋಗೀಶ್ವರ್ ಗೆ ಸಚಿವ ಕೊಡುವುದನ್ನ ವಿರೋಧಿಸಬೇಡಿ ಅಂತ ಡಿಸಿಎಂ ಡಾ ಅಶ್ವಥ್ ನಾರಾಯಣ್ ಕೈಮುಗಿದು ಕೇಳಿಕೊಂಡಿರೋದು ಬಿಜೆಪಿ ಹೈಕಮಾಂಡ್ ಯೋಗೀಶ್ವರ್  ರನ್ನ ಯಾವ ರೀತಿ ಬಳಸಿಕೊಳ್ತಿದೆ ಅನ್ನೋದು  ಗೊತ್ತಾಗುತ್ತೆ..

ನಿಮ್ಮ ಪ್ರಕಾರ  ಮೋದಿ, ಅಮಿತ್ ಶಾ ಲೆಕ್ಕಾಚಾರದಂತೆ ಯೋಗೀಶ್ವರ್ ಗೆ ಡಿಕೆಶಿ, ಹೆಚ್ಡಿಕೆ ಯನ್ನ ಎದುರಿಸುವ ಶಕ್ತಿ ಇದೆಯಾ..? ಈ ಬಗ್ಗೆ ನಿಮ್ಮಅಭಿಪ್ರಾಯ ಕಾಮೆಂಟ್ ಮಾಡಿ..

- Advertisement -

Latest Posts

Don't Miss