ಸಾವಿನ ಮನೆಯಲ್ಲಿ ಒಲೆಯನ್ನೇಕೆ ಉರಿಸುವುದಿಲ್ಲ..? ಇದಕ್ಕೆ ಕಾರಣವೇನು..?

Spiritual: ಹುಟ್ಟಿದ ಪ್ರತೀ ಜೀವಿಗೂ ಸಾವಿದೆ. ಅದೇ ರೀತಿ ಹಿಂದೂಗಳಲ್ಲಿ ಸಾವಿನ ಮನೆಯಲ್ಲಿ ಹಲವು ಪದ್ಧತಿಗಳನ್ನು ಆಚರಿಸಲಾಗುತ್ತದೆ. ನಿಯಮಗಳನ್ನು ಅನುಸರಿಸಲಾಗುತ್ತದೆ. ಅದರಲ್ಲಿ ಒಂದು ನಿಯಮ ಅಂದ್ರೆ, ಸಾವಿನ ಮನೆಯಲ್ಲಿ ಅಡುಗೆ ಮಾಡಲಾಗುವುದಿಲ್ಲ. ಒಲೆ ಉರಿಸಲಾಗುವುದಿಲ್ಲ. ಮೃತದೇಹವನ್ನು ಉರಿಸಿ, ಎಲ್ಲರೂ ಸ್ನಾನ ಮಾಡಿ, ಶುದ್ಧರಾಗಿ, ಬಳಿಕ ಒಲೆ ಹೊತ್ತಿಸಿ, ಅಡುಗೆ ಮಾಡಿ, ಬಡಿಸಲಾಗುತ್ತದೆ. ಕೆಲವು ಕಡೆ ಗಂಜಿ ಮಾಡಿಯೂ ಬಡಿಸುತ್ತಾರೆ. ಹಾಗಾದ್ರೆ ಯಾಕೆ ಸಾವಿನ ಮನೆಯಲ್ಲಿ ಒಲೆ ಉರಿಸುವುದಿಲ್ಲವೆಂದು ತಿಳಿಯೋಣ ಬನ್ನಿ..

ಸಾವಿನ ಮನೆಯಲ್ಲಿ ಸೂತಕದ ಛಾಯೆ ಆವರಿಸಿರುತ್ತದೆ. ತಮ್ಮವರನ್ನು ಕಳೆದುಕೊಂಡ ದುಃಖದಲ್ಲಿ ಮನೆ ಜನರಿರುತ್ತಾರೆ. ಈ ಸಮಯದಲ್ಲಿ ಅನಾರೋಗ್ಯ ಪೀಡಿತರಿಗೆ, ಗರ್ಭಿಣಿಯರಿಗೆ, ಪುಟ್ಟ ಮಕ್ಕಳಿಗೆ ಹಸಿವಾಗುತ್ತದೆ. ಮತ್ತು ಇವರೆಲ್ಲ ಹೊತ್ತು ಹೊತ್ತಿಗೆ ಆಹಾರ ಸೇವಿಸುವುದು ತುಂಬಾ ಮುಖ್ಯ. ಗರ್ಭಿಣಿ ಮತ್ತು ಅನಾರೋಗ್ಯ ಪೀಡಿತರಿಗೆ ದುಃಖವೇನೆಂದು ಅರ್ಥವಾಗುವ ಕಾರಣ, ಹಸಿವಾಗುವುದಿಲ್ಲ. ಆದರೆ ಆರೋಗ್ಯವಾಗಿ ಇದ್ದವರಿಗೆ ದುಃಖದ ಕಾರಣಕ್ಕೆ, ಆಹಾರ ಹಿಡಿಸುವುದಿಲ್ಲ. ಆದರೆ ಮಕ್ಕಳಿಗೆ ಇವ್ಯಾವುದರ ಬಗ್ಗೆ ಅರಿವಿರುವುದಿಲ್ಲ.

ಇನ್ನು ಸತ್ತ ವ್ಯಕ್ತಿಯ ಆತ್ಮ ಆ ಮನೆಯಲ್ಲೇ ಓಡಾಡುತ್ತದೆ. ಅಲ್ಲದೇ, ಶವವಿರುವ ಮನೆಯಲ್ಲಿ ಕ್ರಿಮಿ ಕೀಟಗಳು ಹೆಚ್ಚಾಗಿ ಇರುತ್ತದೆ. ಹಾಗಾಗಿ ಆ ಮನೆಯಲ್ಲಿ ಅಡುಗೆ ಮಾಡಲಾಗುವುದಿಲ್ಲ. ಶವ ಸುಟ್ಟು, ಮನೆಯನ್ನು ಶುದ್ಧಗೊಳಿಸಿದ ಬಳಿಕವೇ, ಅಡುಗೆ ಮಾಡಲಾಗುತ್ತದೆ.

About The Author