Thursday, December 26, 2024

Latest Posts

ಹಿಂದೂ ಧರ್ಮದಲ್ಲಿ ಪ್ರತಿದಿನ ಸ್ನಾನ ಮಾಡಲೇಬೇಕೆಂಬ ನಿಯಮವಿರುವುದೇಕೆ..?

- Advertisement -

ಹಿಂದೂ ಧರ್ಮದಲ್ಲಿ ಪ್ರತಿದಿನ ರೂಢಿಯಲ್ಲಿರುವ ಪದ್ಧತಿಯಲ್ಲಿ ಸ್ನಾನ ಮಾಡುವ ಪದ್ಧತಿ ಕೂಡ ಒಂದು. ಸ್ನಾನ ಮಾಡೋದು ಬಿಡೋದು ಅವರವರಿಗೆ ಬಿಟ್ಟಿದ್ದು, ಆದ್ರೆ ಹಿಂದೂ ಧರ್ಮದಲ್ಲಿ ಪ್ರತಿದಿನ ಸ್ನಾನ ಮಾಡಿಯೇ, ದೇವರಿಗೆ ಪೂಜೆ ಸಲ್ಲಿಸಬೇಕು ಎಂಬ ಪದ್ಧತಿ ರೂಢಿಯಲ್ಲಿದೆ. ಹಾಗಾದ್ರೆ ಪ್ರತಿದಿನ ಸ್ನಾನ ಮಾಡದಿದ್ದಲ್ಲಿ, ಏನಾಗತ್ತೆ..? ಹಿಂದೂ ಪುರಾಣದಲ್ಲಿ ಈ ಬಗ್ಗೆ ಹೇಳಿದ್ದೇನು..? ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋಣ ಬನ್ನಿ..

ಹಿಂದೂ ಧರ್ಮದ ಪ್ರಕಾರ ಮುಂಜಾನೆ ಮಿಂದು ದೇವರಿಗೆ ಪೂಜೆ ಸಲ್ಲಿಸುವುದು ಶ್ರೇಷ್ಠವೆಂದು ಹೇಳಲಾಗಿದೆ. ರಾತ್ರಿ ನಾವು ಮಲಗಿದಾಗ, ನಮ್ಮ ಮೈಯಲ್ಲಿ ಬೇವರು ಉತ್ಪತ್ತಿಯಾಗುತ್ತದೆ. ನಮ್ಮ ದೇಹ ಕೊಳೆಯಾಗಿರುತ್ತದೆ. ಹಾಗಾಗಿ ಬೆಳಿಗ್ಗೆ ಎದ್ದ ತಕ್ಷಣ, ಸ್ನಾನಾದಿಗಳನ್ನು ಮಾಡಿಯೇ, ನಮ್ಮ ದಿನಚರಿಯನ್ನು ಆರಂಭಿಸಬೇಕು ಎಂದು ಹೇಳಲಾಗಿದೆ.

ಇನ್ನು ಗರುಡ ದೇವನಿಗೆ ಬ್ರಹ್ಮ ಸ್ನಾನದ ಮಹತ್ವವೇನು ಎಂದು ಹೇಳಿದ್ದಾನೆ. ಸ್ನಾನ ಮಾಡಿದ ನಂತರ ಇರುವುದಕ್ಕಿಂತ ಹೆಚ್ಚು, ಸ್ನಾನ ಮಾಡದಿದ್ದಾಗಲೇ ನಮ್ಮ ಸುತ್ತ ಮುತ್ತ ನಕಾರಾತ್ಮಕ ಶಕ್ತಿ ಹೆಚ್ಚಾಗಿರುತ್ತದೆ. ಹಾಗಾಗಿ ಸ್ನಾನ ಮಾಡಬೇಕು ಅಂತಾ ಹೇಳಿದ್ದಾರೆ. ಯಾಕಂದ್ರೆ ಅಪವಿತ್ರತೆಯ ವಾಸವಿದ್ದಲ್ಲಿ, ನಕಾರಾತ್ಮಕ ಶಕ್ತಿಯ ವಾಸ ಹೆಚ್ಚಾಗಿರುತ್ತದೆಯಂತೆ. ಆದ್ದರಿಂದಲೇ ಹಿರಿಯರು, ಸ್ನಾನ ಮಾಡು, ಸ್ವಚ್ಛವಾಗಿರು. ಇಲ್ಲದಿದ್ದಲ್ಲಿ ದರಿದ್ರ ಲಕ್ಷ್ಮೀ ಬಂದು ವಕ್ಕರಿಸುವಳು ಎಂದು ಹೇಳಿದ್ದಾರೆ.

ಇನ್ನು ಗರುಡ ಪುರಾಣದ ಪ್ರಕಾರ, ಪ್ರತಿದಿನ ಸ್ನಾನ ಮಾಡದ ವ್ಯಕ್ತಿ ಶ್ರೀಮಂತನಾಗಲು ಸಾಧ್ಯವಿಲ್ಲ. ಆತನ ಸುತ್ತಮುತ್ತಲೂ ಯಾವಾಗಲೂ ನಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚಿರುತ್ತದೆ. ಮತ್ತು ನಮಗೆ ನಿಮಗೆ ಗೊತ್ತಿರುವ ಹಾಗೆ ಪ್ರತಿದಿನ ಸ್ನಾನ ಮಾಡದ ವ್ಯಕ್ತಿಗಳ ಬಳಿ ಸುಳಿಯಲೂ ಸಾಧ್ಯವಿಲ್ಲ. ಹಾಗಾಗಿ ಅಂಥವರು ಜೀವನದಲ್ಲಿ ಎಂದಿಗೂ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ.

- Advertisement -

Latest Posts

Don't Miss