Hassan Political News: ಹಾಸನ: ಹಾಸನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಂಸದ ಪ್ರಜ್ವಲ್ ರೇವಣ್ಣ, ಲೋಕಸಭಾ ಚುನಾವಣೆಗೆ ನಾನು ಮೊದಲಿನಿಂದಲೂ ಸಕ್ರಿಯವಾಗಿದ್ದೇನೆ. ಜನರಿಗೆ ಸ್ಪಂದಿಸಿ, ಸಮಸ್ಯೆ ಪರಿಹರಿಸುವ ಕೆಲಸ ಮಾಡಿದ್ದೇನೆ. ಆಗಿಂದಾಗ್ಗೆ ಎಲ್ಲಾ ಭಾಗಕ್ಕೆ ಭೇಟಿ ನೀಡಿ ಜನರ ಜೊತೆ ಇದ್ದೇನೆ. ಮೈತ್ರಿ ಸ್ಥಾನ ಹಂಚಿಕೆ ದೇವೇಗೌಡರು, ಕುಮಾರಸ್ವಾಮಿ, ಬಿಜೆಪಿ ವರಿಷ್ಠರು ಕುಳಿತು ತೀರ್ಮಾನ ಮಾಡ್ತಾರೆ. ಖಂಡಿತಾ ಸಿಹಿ ಸುದ್ದಿ ಸಿಗಲಿದೆ ಎಂದು ಪ್ರಜ್ವಲ್ ರೇವಣ್ಣ ಹೇಳಿದ್ದಾರೆ.
ಹಾಸನ ಮಂಡ್ಯ ಬಿಜೆಪಿಗೆ ಸಿಗಲಿದೆ ಎಂಬ ಬಿಜೆಪಿ ರಾಜ್ಯ ಕಾರ್ಯದರ್ಶಿ ಪ್ರೀತಂಗೌಡ ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಪ್ರಜ್ವಲ್, ಯಾರೋ ಒಬ್ಬರು ಹೇಳ್ತಾರೆ. ಆದರೆ ಇದನ್ನೆಲ್ಲಾ ದೊಡ್ಡವರು ಕುಳಿತು ತೀರ್ಮಾನ ಮಾಡಲಿದ್ದಾರೆ. ಬಿಜೆಪಿಯ ಬಹುತೇಕ ಕಾರ್ಯಕರ್ತರು ಕೂಡ ನಮ್ಮ ಬೆಂಬಲಕ್ಕೆ ಇದ್ದಾರೆ. ನರೇಂದ್ರಮೋದಿಯವರು ಮತ್ತೊಮ್ಮೆ ಪ್ರಧಾನಿ ಮಾಡಬೇಕೆಂದು ಎಲ್ಲರ ಮನಸ್ಸಿನಲ್ಲಿದೆ. ಇಲ್ಲಿ ಯಾವ ಕಾರ್ಯಕರ್ತರು, ಮುಖಂಡರಲ್ಲಿ ಗೊಂದಲವಿಲ್ಲ. ಅವರ ಮನಸ್ಸಿನಲ್ಲಿ ಇರೋದನ್ನ ಅವರವರು ಹೇಳ್ಕೊತಾರೆ. ಅದು ತಪ್ಪು ಎಂದು ನಾನು ಭಾವಿಸುವುದಿಲ್ಲ. ಮುಂದಿನ ದಿನಗಳಲ್ಲಿ ಏನೇನೋ ಆಗುತ್ತೆ ಎಂದು ಪ್ರಜ್ವಲ್ ರೇವಣ್ಣ ಹೇಳಿದ್ದಾರೆ.
ಬಿಜೆಪಿಯವರು ಎಲ್ಲಾ ಜಿಲ್ಲೆಗಳಿಗೂ ಹೋಗಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಮಾಡ್ತಿದ್ದಾರೆ. ಕುಮಾರಸ್ವಾಮಿ ಅವರು ಜಿಲ್ಲೆ, ತಾಲ್ಲೂಕುಗಳಿಗೆ ಭೇಟಿ ನೀಡುತ್ತಿದ್ದಾರೆ. ಸ್ವಲ್ಪ ಸಮಯ ತೆಗೆದುಕೊಳ್ಳುತ್ತೆ. ಹಿರಿಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಎಲ್ಲಿಲ್ಲಿ ಸಭೆ ಮಾಡಬೇಕೆಂದು ತೀರ್ಮಾನ ಮಾಡಬೇಕು. ಈ ಸೆಷನ್ ಮುಗಿದ ಮೇಲೆ ಎಲ್ಲಾ ತೀರ್ಮಾನ ಆಗುತ್ತೆ ಎಂದು ಪ್ರೀತಂಗೌಡ ಹೇಳಿಕೆಗೆ ಪ್ರಜ್ವಲ್ ಪ್ರತಿಕ್ರಿಯಿಸಿದ್ದಾರೆ.
ದೆಹಲಿಯಲ್ಲಿ ಕೇಂದ್ರ ಸರ್ಕಾರದ ವಿರುದ್ದ ಕಾಂಗ್ರೆಸ್ ಪ್ರತಿಭಟನೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಪ್ರಜ್ವಲ್ ರೇವಣ್ಣ, ಕಾಂಗ್ರೆಸ್‌ನ ನಮ್ಮ ಹಕ್ಕು ನಮ್ಮ ತೆರಿಗೆ ಘೋಷಣೆಗೆ ಟಾಂಗ್ ಕೊಟ್ಟಿದ್ದಾರೆ. ಹಾಗಿದ್ದರೆ ಜನರ ತೆರಿಗೆ ಹಣವನ್ನು ಇವರ ಫ್ರೀ ಗ್ಯಾರಂಟಿಗೆ ಬಳಸಿದ್ದಾರೆ. ಮುಂದೆ ತೆರಿಗೆ ಪಾವತಿದಾರರು ನಮ್ಮ ತೆರಿಗೆ ನಮ್ಮ ಹಕ್ಕು ಎಂದು ಹೋರಾಟ ಮಾಡಿದ್ರೆ ಏನು ಮಾಡೋದು. ನಾವು ಅಖಂಡ ಭಾರತದಲ್ಲಿ ಇದ್ದೇವೆ, ಅಭಿವೃದ್ಧಿ, ರಾಜ್ಯಗಳಿಂದ ಹಿಂದುಳಿದ ರಾಜ್ಯಗಳಿಗೆ ಅನುದಾನ ಕೊಡೋದು ಸಾಮಾನ್ಯ. ಅವರು ಹೋರಾಟ ಮಾಡಲಿ ನಮ್ಮದೇನಿಲ್ಲ. ಆದರೆ ಕೇಂದ್ರ ಸರ್ಕಾರ ಅಗತ್ಯ ಇದ್ದಾಗಲೆಲ್ಲ ನೆರವು ನೀಡಿದೆ. ಸುಮ್ಮನೇ ಕೇಂದ್ರದಿಂದ ಏನು ಅನುದಾನ ಬಂದೇ ಇಲ್ಲಾ ಎನ್ನುವ ಭಾವನೆ ಮೂಡಿಸೋದು ಸರಿಯಲ್ಲ ಎಂದು ಪ್ರಜ್ವಲ್ ಹೇಳಿದ್ದಾರೆ.
ದಕ್ಷಿಣ ಭಾರತ ಪ್ರತ್ಯೇಕ ದೇಶದ ಬಗ್ಗೆ ಸಂಸದ ಡಿಕೆ ಸುರೇಶ್ ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಪ್ರಜ್ವಲ್, ಭಾರತ ಒಡೆಯುವ ಹೇಳಿಕೆ ಯಾರೂ ಕೊಡಬಾರದು. ಇದು ಯಾರಿಗು ಶೋಭೆ ತರಲ್ಲ. ಭಾರತ ಒಂದಾಗಿರುತ್ತೆ, ಭಾರತೀಯರು ಎಂದು ಹೇಳಿಕೊಳ್ಳಲು ನಮಗೆ ಹೆಮ್ಮೆ ಇದೆ ಎಂದು ಡಿ.ಕೆ.ಸುರೇಶ್ ಹೇಳಿಕೆಗೆ, ಪ್ರಜ್ವಲ್ ತಿರುಗೇಟು ನೀಡಿದ್ದಾರೆ.
ಕುಮಾರಸ್ವಾಮಿ ಕೇಸರಿ ಶಾಲು ಧರಿಸಬಾರದಿತ್ತು ಎಂಬ ಎಚ್.ಡಿ.ದೇವೇಗೌಡರ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಪ್ರಜ್ವಲ್, ಕೇಸರಿ ಶಾಲು ಎಂದರೆ ಬಿಜೆಪಿ ಎಂದು ಯಾಕೆ ಭಾವಿಸಬೇಕು..? ದೇಗುಲದ ಉದ್ಘಾಟನೆ ವೇಳೆ ನಮ್ಮ ಕಾರ್ಯಕರ್ತರೇ ಕೇಸರಿ ಶಾಲು ಹಾಕಿರ್ತಾರೆ. ಅದು ಧಾರ್ಮಿಕ ಸಂಕೇತ ಅಷ್ಟೇ. ಕೇಸರಿ ಶಾಲು ಹಾಕಿರೋರು ಬಿಜೆಪಿ ಕಾರ್ಯಕರ್ತರು ಎನ್ನೋಕೆ ಆಗುತ್ತಾ..? ಕುಮಾರಣ್ಣ ಜೆಡಿಎಸ್‌ಗೆ ಸದಾ ಆಶ್ರಯ ನೀಡೋರು. ಮಂಡ್ಯ ಪ್ರತಿಭಟನೆ ವೇಳೆಯಲ್ಲಿ ಕುಮಾರಸ್ವಾಮಿ ಅವರಿಗೆ ಯಾರೋ ಕಾರ್ಯಕರ್ತ ಬಂದು ಕೇಸರಿ ಶಾಲು ಹಾಕಿದ್ದರು. ಇದನ್ನು ತಪ್ಪಾಗಿ ತಿಳಿಯುವ ಅಗತ್ಯ ಇಲ್ಲಾ ಎಂದ ಪ್ರಜ್ವಲ್ ಹೇಳಿದ್ದಾರೆ.
ರಾಜಕೀಯ ಪಿತೂರಿಗೆ ನಾನು, ಪ್ರೀತಂಗೌಡ ಬಲಿಯಾದೆವೂ ಎಂಬ ಸಿ.ಟಿ.ರವಿ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಪ್ರಜ್ವಲ್ ರೇವಣ್ಣ, ಕಾಂಗ್ರೆಸ್‌ವರು 2018 ರಲ್ಲಿ 38 ಸಾವಿರ ಮತ ಪಡೆದಿದ್ದರು, ಈ ಭಾರಿ ನಾಲ್ಕು ಸಾವಿರ ತೆಗೆದುಕೊಂಡಿದೆ. ರಾಜಕೀಯದ ವಿದ್ಯಾಮಾನಗಳು ಬದಲಾಗುತ್ತವೆ. ಚನ್ನರಾಯಪಟ್ಟಣದಲ್ಲಿ ಕಳೆದ ಚುನಾವಣೆಯಲ್ಲಿ 49 ಲೀಡ್ ಬಂದಿತ್ತು. ಈ ಭಾರಿ ಏಳು ಸಾವಿರ ಲೀಡ್ ಬಂದಿದೆ. ಒಂದು ಚುನಾವಣೆಯಿಂದ ಇನ್ನೊಂದು ಚುನಾವಣೆ ವ್ಯಾತ್ಯಾಸ ಆಗಬಾರದು ಅಂದರೆ ಹೇಗೆ. ಅದೇ ತರಹ ರಿಸಲ್ಟ್ ಬರಬೇಕು ಎಂದರೆ ಅರ್ಥವಿಲ್ಲ. ಅವೆಲ್ಲಾ ಆಗಿರುತ್ತೆ ಏನು ಮಾಡಲು ಆಗಲ್ಲ. ಸೋತಿದ್ದೀನಿ ಎನ್ನುವ ಬೇಸರ ಇರಬಹುದು. ಮುಂದಿನ ದಿನಗಳಲ್ಲಿ ಕೆಲಸ ಮಾಡಿ, ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡ ಸಂದರ್ಭದಲ್ಲಿ ಅವರಿಗೂ ಭವಿಷ್ಯ ಇರುತ್ತೆ ಎಂದು ಪ್ರಜ್ವಲ್ ಹೇಳಿದ್ದಾರೆ.
ಹಾಸನ ರೈಲ್ವೆ ಮೇಲ್ಸೇತುವೆ ಕಾಮಗಾರಿಗೆ ರಾಜ್ಯ ಸರ್ಕಾರ ನೀಡಲ್ಲ ಎಂದು ಪತ್ರ ಬರೆದಿರುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಪ್ರಜ್ವಲ್ ರೇವಣ್ಣ, ರಾಜ್ಯ ಸರ್ಕಾರ ಹಣ ಕೊಡಲ್ಲ ಅಂತ ಹೇಳಿದೆ.. ರಾಜ್ಯ ಸರ್ಕಾರ ಹಣ ಕೊಡಲ್ಲ ಅಂದಮೇಲೆ ಕೇಂದ್ರ ಸರ್ಕಾರದ ಬಳಿ ಹೋಗಿದ್ದೇವೆ. ಕೇಂದ್ರ ಸರ್ಕಾರದಲ್ಲಿ 48 ಕೋಟಿ ಅಪ್ರೂವಲ್‌ಗೆ ಹೋಗಿದೆ, ಸೆಕೆಂಡ್ ಲೈನ್‌ಗೆ ಅಪ್ರೂವಲ್‌ಗೆ ಹೋಗಿದೆ. ಅದೇನು ಬಿಬಿಎಂಪಿ ಕೆಲಸ ಕೆಟ್ಟೊಯ್ತಾ. ಅದೇ ಚರಂಡಿಗೆ ಅದೇ ಕಲ್ಲು ಹಾಕೋಕೆ. ಹಲವಾರು ಭಾರಿ ನಾವು ಹಣ ಬಿಡುಗಡೆಗೆ ಪತ್ರ ಬರೆದಿದ್ದೇವೆ. ನಾವು ಹಣ ಕೊಡಲು ಆಗಲ್ಲ ಎಂದು ಕಠಿಣವಾಗಿಯೇ ಬರೆದಿದ್ದಾರೆ, ನಾವು ಸಹಕಾರ ಕೊಡಲು ಆಗಲ್ಲ ಎಂದು ಪತ್ರ ಬರೆದಿದ್ದಾರೆ. ಅಲ್ಲಿಗೆ ಅದು ಮುಗಿದು ಹೋದಂತೆ. ನಮಗೆ ಯಾವುದೇ ರೀತಿ ರಾಜ್ಯ ಸರ್ಕಾರದಿಂದ ರೈಲ್ವೆ ಮೇಲ್ಸೇತುವೆಗೆ ಯಾವುದೇ ಸಹಕಾರ ಬೇಕಾಗಿಲ್ಲ. ಮೂರು ಸಾರಿ ಕೊಡಲ್ಲ ಅಂದಮೇಲೆ ಬೇಕಾಗಿಲ್ಲ ಎಂದು ಪ್ರಜ್ವಲ್ ರೇವಣ್ಣ ಹೇಳಿದ್ದಾರೆ.
ನಾಯಿ ತಿನ್ನದ ಬಿಸ್ಕೀಟನ್ನು ಕಾಂಗ್ರೆಸ್ ಕಾರ್ಯಕರ್ತನಿಗೆ ನೀಡಿದ ರಾಹುಲ್ ಗಾಂಧಿ
ಮದುವೆಯಾಗಲಿದ್ದಾರಾ ಸ್ಪೋರ್ಟ್ಸ್ ಸ್ಟಾರ್ಸ್ ಪಿವಿ ಸಿಂಧು- ನೀರಜ್ ಛೋಪ್ರಾ..?
ಚಿಲಿಯಲಿ ಸಂಭವಿಸಿದ ಕಾಡ್ಗಿಚ್ಚಿಗೆ 100ಕ್ಕೂ ಹೆಚ್ಚು ಜನ ಬಲಿ, 200ಕ್ಕೂ ಹೆಚ್ಚು ಜನರು ಕಾಣೆ