Political News: ಕಾಂಗ್ರೆಸ್ ಯುವ ನಾಯಕ ನಲಪಾಡ್ ಹ್ಯಾರಿಸ್ ಸಂದರ್ಶನದಲ್ಲಿ ಮಾತನಾಡಿದ್ದು, ಸಿಎಂ ಡಿ.ಕೆ.ಶಿವಕುಮಾರ್ ಮೇಲೆ ಯಾಕೆ ಅಂಥ ಪ್ರೀತಿ ಎಂದು ವಿವರಿಸಿದ್ದಾರೆ.
ಡಿ.ಕೆ.ಶಿವಕುಮಾರ್ ಅವರು ನನಗೆ ಗೌರವಿಸಿದ್ದಾರೆ, ಸ್ಥಾನಮಾನ ನೀಡಿದ್ದಾರೆ. ಅವರೂ ನನಗೆ ಪ್ರೀತಿ ನೀಡಿದ್ದಾರೆ. ಹಾಗಾಗಿ ನನಗೂ ಅವರ ಮೇಲೆ ಹೆಚ್ಚು ಪ್ರೀತಿ ಇದೆ. ಅದರಲ್ಲಿ ತಪ್ಪೇನಿದೆ ಎಂದು ನಲಪಾಡ್ ವಿವರಿಸಿದ್ದಾರೆ. ನನಗೆ ಅವರು ಮುಂದೆ ಏನು ನೀಡದಿದ್ದರೂ, ನಾನು ಅವರನ್ನು ಅದೇ ರೀತಿ ಪ್ರೀತಿಸುತ್ತೇನೆ ಎಂದು ಹೇಳಿದ್ದಾರೆ.
ನನ್ನಂಥ ಸುಮಾರು ಯುವಕರು ಇವತ್ತು ರಾಹುಲ್ ಗಾಂಧಿಯವರನ್ನು ನಂಬುತ್ತಿದ್ದಾರೆ. ಇತ್ತೀಚೆಗೆ ನಡೆದ ಪ್ರತಿಭಟನೆಯಲ್ಲಿ ರಾಹುಲ್ ಗಾಂಧಿಯವರು ಅಲ್ಲಿದ್ದ ಎಂಪಿಗಳನ್ನು ಯಾರೂ ಬಂಧಿಸಬಾರದು ಎಂದು ತಾವೇ ಚೈನ್ ಕಟ್ಟಿದ್ದರು. ಆದರೆ ಅದು ವೀಡಿಯೋ ಎಲ್ಲಿಯೂ ವೈರಲ್ ಆಗಲಿಲ್ಲ. ಅಲ್ಲದೇ ಪ್ರಿಯಾಂಕಾ ಗಾಂಧಿಯವರು ಆ ಸಮಯದಲ್ಲಿ ನಮ್ಮನ್ನು ಲೀಡ್ ಮಾಡಿದ ರೀತಿ ಅದ್ಭುತವಾಗಿತ್ತು. ಇದೆಲ್ಲ ನೋಡಿದಾಗ, ಕಾಂಗ್ರೆಸ್ನಲ್ಲೂ ಬದಲಾವಣೆಯಾಗಿದೆ ಎಂದರ್ಥ ಎಂದು ನಲಪಾಡ್ ಹೇಳಿದ್ದಾರೆ.
ಅಲ್ಲದೇ ಜಾತಿ-ಧರ್ಮದ ಹೆಸರಿನಲ್ಲಿ ನಮ್ಮನ್ನು ಬೇರೆ ಮಾಡುವ ಕೆಲಸದ ಬಗ್ಗೆ ಯುವಪೀಳಿಗೆಗೆ ಅರಿವಿದೆ. ಇದೆಲ್ಲ ತಲೆ ತಿರುಗಿಸುವ ಆಟವೆಂದು ಎಲ್ಲರಿಗೂ ಈಗ ತಿಳಿದಿದೆ ಎಂದು ಬಿಜೆಪಿ ವಿರುದ್ಧ ನಲಪಾಡ್ ಕಿಡಿಕಾರಿದ್ದಾರೆ. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.




