ಫೋಟೊಶೂಟ್ ನೆಪದಲ್ಲಿ, ಪತ್ನಿಯೊಬ್ಬಳು ತನ್ನ ಪತಿಯನ್ನು ನದಿಗೆ ತಳ್ಳಿದ ರಾಯಚೂರಿನ ಘಟನೆ ಎಲ್ಲರು ಶಾಕ್ ಆಗುವಂತೆ ಮಾಡಿದೆ. ಮಹಿಳೆಯೊಬ್ಬರು ತನ್ನ ಪತಿಯನ್ನು “ಫೋಟೊಶೂಟ್” ನೆಪದಲ್ಲಿ ಬ್ರಿಡ್ಜ್ ಕಂ ಬ್ಯಾರೇಜ್ಗೆ ಬಳಿ ಕರೆದುಕೊಂಡು ಹೋಗಿ, ಮೊದಲಿಗೆ ತಾವು ಫೋಟೋ ತೆಗೆಸಿಕೊಂಡು, ನಂತರ ಪತಿಗೆ ಸೇತುವೆಯ ತುದಿಗೆ ಹೋಗಲು ಹೇಳುತ್ತಾರೆ. ಆತನು ಎಚ್ಚರಿಕೆಯಿಂದ ಅಂಚಿಗೆ ಹೋಗುತ್ತಿದ್ದಂತೆ, ಆಕೆ ನಿರ್ದಯವಾಗಿ ನದಿಗೆ ತಳ್ಳಿ ಬಿಟ್ಟಿದ್ದಾರೆ.
ಅದೃಷ್ಟವಶಾತ್, ಆ ವ್ಯಕ್ತಿಗೆ ಈಜು ಚೆನ್ನಾಗಿ ಬರುತ್ತಿದ್ದರಿಂದ, ತಕ್ಷಣವೇ ನದಿ ಮಧ್ಯದ ಬಂಡೆಯೊಂದರ ಮೇಲೆ ಹತ್ತಿ ಜೀವ ಉಳಿಸಿಕೊಂಡಿದ್ದಾರೆ. ಅವರ ಕಿರುಚಾಟ ಕೇಳಿ ಸ್ಥಳೀಯರು ಧಾವಿಸಿ, ಹಗ್ಗ ಬಳಸಿ 2 ಗಂಟೆಗಳ ರಕ್ಷಣಾ ಕಾರ್ಯಾಚರಣೆಯ ನಂತರ ರಕ್ಷಿಸಿದ್ದಾರೆ. ರಾಯಚೂರು ಜಿಲ್ಲೆಯ ಗುರ್ಜಾಪುರ ಬ್ರಿಡ್ಜ್ ಬಳಿ ಈ ಘಟನೆ ನಡೆದಿದೆ.
ಅವನ ಪತ್ನಿ – ಅವನೇ ಕಾಲು ಜಾರಿ ಬಿದ್ದ ಎನ್ನುತ್ತಿದ್ದರೆ, ಅಲ್ಲಿನ ಕೆಲ ಪ್ರತ್ಯಕ್ಷದರ್ಶಿಗಳು ಅವಳೆ ತಳ್ಳಿದಳು ಎಂದು ಹೇಳುತ್ತಿದ್ದಾರೆ. ಅದಕ್ಕಿಂತ ಮುಂಚೆಯೇ ಆಕೆಯು ಪತಿಯನ್ನು ಪುಸಲಾಯಿಸಿ ಕರೆದುಕೊಂಡು ಬಂದಿದ್ದಲ್ಲದೆ, ತಾನು ಮೊದಲಿಗೆ ಫೋಟೋ ತೆಗೆಸಿಕೊಳ್ಳುವುದು, ಬಳಿಕ ಪತಿಗೆ ಅಂಚಿಗೆ ಹೋಗಿ ನಿಲ್ಲಬೇಕೆಂದಿರುವುದು ಸಂಶಯಾಸ್ಪದವಾಗಿ ಪರಿಣಮಿಸಿದೆ. ಅವನ ಕಿರುಚಾಟ, ಈಜು, ಮತ್ತು ಸಾರ್ವಜನಿಕರ ತಕ್ಷಣದ ಸ್ಪಂದನೆ ಇದನ್ನು ಭಾರೀ ಅನಾಹುತದಿಂದ ತಪ್ಪಿಸಿದೆ. ಆದರೆ, ಈ ಘಟನೆಯ ಹಿಂದೆ ಏನಿದೆ ಎಂಬುದರ ಮೇಲೆ ಇದೀಗ ಎಲ್ಲರ ಕಣ್ಣು ಬಿದ್ದಿದೆ.
ಪೊಲೀಸರು ಈಗ ತನಿಖೆ ಆರಂಭಿಸಿದ್ದಾರೆ. ಪತ್ನಿಯೇ ತಳ್ಳಿದ್ದಾಳೆ ಎಂಬುದರ ಸಾಬೀತು ದೊರೆತರೆ, IPC ಸೆಕ್ಷನ್ 307 – ಹತ್ಯೆಗೆ ಯತ್ನ ಎಂಬ ಕೇಸ್ ದಾಖಲಿಸುವ ಸಾಧ್ಯತೆ ಇದೆ. ಈ ಪ್ರಕರಣದ ಹೊರತಾಗಿಯೂ, ಇದು ಸಾರ್ವಜನಿಕರ ಎಚ್ಚರಿಕೆಗೆ ಕಾರಣವಾಗಬೇಕು. ನಂಬಿಕೆ ಮತ್ತು ಪ್ರೀತಿಯ ಹೆಸರಿನಲ್ಲಿ ಯಾವುದೇ ಅಪಾಯಕ್ಕೆ ತುತ್ತಾಗದಂತೆ ಎಚ್ಚರ ಇರಬೇಕು. ಇದೊಂದು ಉತ್ತಮ ಉದಾಹರಣೆ ಅಷ್ಟೇ.
ವರದಿ : ಲಾವಣ್ಯ ಅನಿಗೋಳ