Sunday, September 8, 2024

Latest Posts

Bollywood News: ಮದುವೆ ಬಳಿಕ ಮತಾಂತರವಾಗುತ್ತಾರಾ ನಟಿ ಸೋನಾಕ್ಷಿ..?

- Advertisement -

Bollywood News: ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ, ತಮ್ಮ ಬಹುಕಾಲದ ಗೆಳೆಯ, ನಟ ಜಹೀರ್ ಇಕ್ಬಾಲ್ ಜೊತೆ ವಿವಾಹವಾಗುತ್ತಿದ್ದಾರೆ. ಇದಕ್ಕಾಗಿ ಸೋಶಿಯಲ್ ಮೀಡಿಯಾದಲ್ಲಿ ಬಿಸಿ ಬಿಸಿ ಚರ್ಚೆಯಾಗುತ್ತಿದ್ದು, ಈ ವಿವಾಹ ಲವ್‌ ಜಿಹಾದ್ (Love Jihad) ರೀತಿ ಕಾಣುತ್ತಿದೆ. ವಿವಾಹದ ಬಳಿಕ ಸೋನಾಕ್ಷಿ ಮತಾತಂರವಾಗುತ್ತಾರಾ ಅಂತಾ ಪ್ರಶ್ನಿಸಿದ್ದಾರೆ.

ಜನರೆಲ್ಲ ಈ ರೀತಿ ಪ್ರಶ್ನಿಸುತ್ತಿರುವುದನ್ನು ಕಂಡು, ಜಹೀರ್ ತಂದೆ ಮಾಧ್ಯಮಕ್ಕೆ ಹೇಳಿಕೆ ಕೊಟ್ಟಿದ್ದು, ನಾನು ಮನುಷ್ಯತ್ವಕ್ಕೆ, ಮಾನವೀಯತೆಗೆ ಬೆಲೆ ಕೊಡುತ್ತೇನೆ. ಹಾಗಾಗಿ ಸೋನಾಕ್ಷಿ ಮದುವೆಯ ಬಳಿಕವೂ ಹಿಂದೂ ಆಗಿಯೇ ಇರುತ್ತಾರೆ. ಅವರು ಮತಾಂತರವಾಗುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಅಲ್ಲದೇ ಇದು ಮದುವೆಯೂ, ನಿಖಾವೋ ಅಂತಾ ಹೇಳಿದ್ದಕ್ಕೆ, ಇದು ಮದುವೆಯೂ ಅಲ್ಲ ನಿಖಾ ಕೂಡ ಅಲ್ಲ. ಇದು ಸರ್ಕಾರದ ನಿಯಮದ ಪ್ರಕಾರ ಮಾಡುವ ರಿಜಿಸ್ಟರ್ ಮ್ಯಾರೇಜ್. ಈ ಮದುವೆಯಲ್ಲಿ ಮಧುಮಕ್ಕಳು ಸೇರಿ, ಇಬ್ಬರ ಕುಟುಂಬಸ್ಥರು ಭಾಗಿಯಾಗಲಿದ್ದಾರೆ. ಬಳಿಕ ಎಲ್ಲರಿಗೂ ಸಿಹಿಯೂಟ ಹಾಕಿಸಲಾಗುತ್ತದೆ ಎಂದಿದ್ದಾರೆ.

ಇನ್ನು ಜಹೀರ್ ಮನೆಯಲ್ಲಿ ನಡೆಯುವ ಈ ರಿಜಿಸ್ಟರ್‌ ಮ್ಯಾರೇಜ್‌ನಲ್ಲಿ ಸೋನಾಕ್ಷಿಯ ಅಪ್ಪ, ಅಮ್ಮ, ಅಣ್ಣ, ಚಿಕ್ಕಪ್ಪ ಭಾಗಿಯಾಗಲಿದ್ದಾರೆ. ಈ ಮೊದಲು ಸೋನಾಕ್ಷಿಯ ತಂದೆ, ಅಣ್ಣನಿಗೆ ಈ ಮದುವೆ ಇಷ್ಟವಿರಲಿಲ್ಲ. ಆದರೆ ಸೋನಾಕ್ಷಿ ಹಿಂದೂವಾಗಿಯೇ ಉಳಿತ್ತಾರೆ ಅನ್ನುವ ಸಮಾಧಾನ ಇದ್ದು, ಮದುವೆಗೆ ಒಪ್ಪಿಗೆ ಸೂಚಿಸಿದ್ದಾರೆ.

ಇನ್ನು ಈ ಬಗ್ಗೆ ಹೇಳಿಕೆ ಕೊಟ್ಟಿರುವ ಸೋನಾಕ್ಷಿ, ನಮ್ಮ ಮದುವೆ ಬಗ್ಗೆ ಜನರಿಗೆ ಯಾಕಿಷ್ಟು ಕುತೂಹಲ ಅಂತಲೇ ತಿಳಿಯುತ್ತಿಲ್ಲ. ನಮ್ಮ ಅಪ್ಪ ಅಮ್ಮನಿಂದ ಹೆಚ್ಚು ಪ್ರಶ್ನೆ ಜನ ಕೇಳುತ್ತಿದ್ದಾರೆ. ಇದು ತಮಾಷೆಯಾಗಿ ಕಾಣುತ್ತಿದೆ ಎಂದು ಹೇಳಿದ್ದಾರೆ.

- Advertisement -

Latest Posts

Don't Miss