ಮಂಡ್ಯ ಕ್ಷೇತ್ರದಿಂದ ಮತ್ತೆ ಸ್ಪರ್ಧೆಗಿಳಿಯಲಿದ್ದಾರಾ ನಿಖಿಲ್ ಕುಮಾರ್..?

Mandya Political News: ಇಂದು ಮಂಡ್ಯದ ಅಂಬೇಡ್ಕರ್ ಭವನದಲ್ಲಿ ನಡೆದ ಜೆಡಿಎಸ್ ಸಭೆ ನಡೆದಿದ್ದು, ಈ ಬಾರಿ ಲೋಕಸಭಾ ಚುನಾವಣೆಗೆ ನಿಖಿಲ್ ಕುಮಾರಸ್ವಾಮಿಯವರನ್ನು ನಿಲ್ಲಿಸಲಿದ್ದಾರೆಂದು ಸೂಚನೆ ನೀಡಿದ್ದಾರೆ. ಇನ್ನು ಕೆಲ ದಿನಗಳಲ್ಲೇ ಈ ಬಗ್‌ಗೆ ಜೆಡಿಎಸ್ ಘೋಷಣೆ ಮಾಡಲಾಗಿದೆ.

ಈ ಬಗ್ಗೆ ಮಾತನಾಡಿದ ನಿಖಿಲ್ ಕುಮಾರ್, ನಾನು ಮಂಡ್ಯ ಲೋಕಸಭೆ ಚುನಾವಣೆಗೆ ನಿಂತರೆ, ಈ ಕ್ಷೇತ್ರ ಬಿಟ್ಟು ನಾನೆಲ್ಲೂ ಪ್ರಚಾರಕ್ಕೂ ಹೋಗುವುದಿಲ್ಲವೆಂದು ನಿಖಿಲ್ ಹೇಳಿದ್ದಾರೆ. ಈ ಮೂಲಕ ಈ ಲೋಕಸಭಾ ಎಲೆಕ್ಷನ್‌ಗೆ ತಾವು ಸ್ಪರ್ಧಿಸಲಿದ್ದೇವೆಂದು ಸೂಚನೆ ಕೊಟ್ಟಿದ್ದಾರೆ.

ಚುನಾವಣೆ ಬಂದ್ರೆ ಸಾಕು, ಮಂಡ್ಯದ ಬಗ್ಗೆ ಇಂಡಿಯಾನೇ ಮಾತನಾಡುವ ರೇಂಜಿಗೆ ಚರ್ಚೆಯಾಗುತ್ತದೆ. ಈ ಬಾರಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಯಾಗಿದ್ದು, 5 ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿರುವ ಬಿಜೆಪಿ ಉಳಿದ ಕ್ಷೇತ್ರದಲ್ಲಿ ತಾವು ಸ್ಪರ್ಧಿಸುವುದಾಗಿ ಹೇಳಿದ್ದಾರೆ. ಆ 5 ಕ್ಷೇತ್ರದಲ್ಲಿ ಮಂಡ್ಯವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿದ್ದು, ಮಂಡ್ಯ ಕ್ಷೇತ್ರದಿಂದ ಯಾರು ಸ್ಪರ್ಧಿಸಲಿದ್ದಾರೆಂಬ ಕುತೂಹಲ ಹಲವರಲ್ಲ ಮನೆ ಮಾಡಿದೆ.

ಇಂದು ನಡೆದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿರುವ ನಿಖಿಲ್, ನಮಗೆ ಈ ಕ್ಷೇತ್ರ ತುಂಬಾ ಮುಖ್ಯವಾಗಿದೆ. ನಮಗೆ ಈ ಕ್ಷೇತ್ರ ಬೇಕೇಬೇಕು. ನಮಗೆ ನಿಮ್ಮ ಪ್ರೀತಿ ವಿಶ್ವಾಸ ಬೇಕೆ ಬೇಕು. ನಾನು ನಿಮ್ಮೆಲ್ಲರ ಜೊತೆಯಲ್ಲೇ ಇರುತ್ತೇನೆ. ಪ್ರತೀ ಹಳ್ಳಿಗೂ ಬರುತ್ತೇನೆ ಎಂದಿದ್ದಾರೆ. ಹೀಗಾಗಿ ಮಂಡ್ಯದಲ್ಲಿ ನಿಖಿಲ್ ನಿಲ್ಲುವುದು ಸ್ಪಷ್ಟ ಎನ್ನಲಾಗಿದೆ.

ಇದೇ ವೇಳೆ ಮಾಜಿ ಮುಖ್ಯ ಮಂತ್ರಿಗಳಾದ ಶ್ರೀ ಹೆಚ್. ಡಿ ಕುಮಾರಸ್ವಾಮಿ ಅವರು, ಮಾಜಿ ಸಚಿವರು , ಜೆ.ಡಿ.ಎಸ್ ಪಕ್ಷದ ರಾಜ್ಯ ಕೋರ್ ಕಮಿಟಿ ಅಧ್ಯಕ್ಷರಾದ ಶ್ರೀ ಜಿ. ಟಿ ದೇವೇಗೌಡ ಅವರು, ಮಾಜಿ ಸಚಿವರಾದ ಶ್ರೀ ಸಿ. ಎಸ್ ಪುಟ್ಟರಾಜು ಅವರು , ಶ್ರೀ ಡಿ. ಸಿ ತಮ್ಮಣ್ಣ ಅವರು ಮಾಜಿ ಶಾಸಕರಾದ ಶ್ರೀ ರವೀಂದ್ರ ಶ್ರೀಕಂಠಯ್ಯ ಅವರು ,ಶ್ರೀ ಸುರೇಶ್ ಗೌಡ ಅವರು ,ಶ್ರೀ ಅನ್ನದಾನಿ ಅವರು , ಕೆ.ಆರ್ ಪೇಟೆ ವಿಧಾನ ಸಭೆ ಕ್ಷೇತ್ರದ ಶಾಸಕ ಶ್ರೀ ಎಚ್. ಟಿ ಮಂಜು ಅವರು,ಮಾಜಿ ವಿಧಾನ ಪರಿಷತ್ತ್ ಸದಸ್ಯರಾದ ಶ್ರೀ ಕೆ.ಟಿ ಶ್ರೀಕಂಠೆೇಗೌಡ ಅವರು,ಮಂಡ್ಯ ಜೆ.ಡಿ.ಎಸ್ ಜಿಲ್ಲಾ ಅಧ್ಯಕ್ಷರಾದ ಶ್ರೀ ಡಿ ರಮೇಶ್ ಅವರು,ಶ್ರೀ ಜಿ.ಬಿ ಶಿವ ಕುಮಾರ್ ಅವರು,ಶ್ರೀ ರಾಮಚಂದ್ರು ಅವರು,ಶ್ರೀ ಗುರು ಚರಣ್ ಅವರು ,ಶ್ರೀ ಹೆಚ್. ಕೆ ರಾಮು ಅವರು ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.

ನಮ್ಮ ಪಕ್ಷ ಸರಿ ಇಲ್ಲ ಎನ್ನುವುದಾದರೆ ನಮ್ಮ ಪಕ್ಷದ ಬಳಿ ಏಕೆ ಬಂದಿದ್ದರು..?: ಕಾಂಗ್ರೆಸ್ ವಿರುದ್ಧ ರೇವಣ್ಣ ವಾಗ್ದಾಳಿ

ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹಣೆಗೆ ಗಾಯ: ದಯವಿಟ್ಟು ಅವರಿಗಾಗಿ ಪ್ರಾರ್ಥಿಸಿ ಎಂದ ಟಿಎಂಸಿ

ವಾಹನ ಸವಾರರಿಗೆ ಗುಡ್‌ನ್ಯೂಸ್: ಪೆಟ್ರೋಲ್, ಡಿಸೇಲ್ ದರದಲ್ಲಿ ಇಳಿಕೆ

About The Author