Sunday, September 8, 2024

Latest Posts

ರಕ್ಷಿತ್ ಶೆಟ್ಟಿ ಬರ್ತ್ಡೇಗೆ ರಶ್ಮಿಕಾ ವಿಶ್ ಮಾಡ್ತಾರಾ..?

- Advertisement -

ಇವತ್ತು ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಹುಟ್ಟುಹಬ್ಬ. ರಕ್ಷಿತ್ ಸಖತ್ ಖುಷಿಯಲ್ಲಿದ್ದಾರೆ. ಅದಕ್ಕೆ ಕಾರಣ ಚಾರ್ಲಿ ರಿಲೀಸ್‌ಗೆ ಸಿಕ್ತಿರೋ ಭರ್ಜರಿ ವೆಲ್ಕಮ್. ದೇಶದ ಬೇರೆ ಬೇರೆ ನಗರಗಳಲ್ಲಿ ರಕ್ಷಿತ್ ಶೆಟ್ಟಿ ನಟನೆಯ ಚಾರ್ಲಿ ಸಿನಿಮಾದ ಪ್ರೀಮಿಯರ್ ಶೋ ನಡೆಸುತ್ತಿದ್ದು, ದೆಹಲಿ, ಲಕ್ನೋಗಳಲ್ಲಿ ಚಾರ್ಲಿ ನೋಡಿ ಕಣ್ಣಿರಿಟ್ಟವರು ಖುಷಿಪಟ್ಟವರು, ಈ ಸಿನಿಮಾವನ್ನು ಪ್ರತಿಯೊಬ್ಬರು ನೋಡಬೇಕು ಅಂತ ರೆಕಮಂಡ್ ಮಾಡ್ತಿದ್ದಾರೆ.
ಈ ಖುಷಿಯಲ್ಲಿರೋ ರಕ್ಷಿತ್ ಚಾರ್ಲಿ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗ್ತಿದ್ದಾರೆ.
ಆದ್ರೆ ಇವತ್ತು ರಕ್ಷಿತ್ ಶೆಟ್ಟಿ ಹುಟ್ಟುಹಬ್ಬಕ್ಕೆ ಚಿತ್ರತಂಡ ಹೊಸ ಸಾಂಗ್ ಯಾವುದನ್ನಾದ್ರೂ ಸಪ್ರೆöÊಸ್ ಆಗಿ ರಿಲೀಸ್ ಮಾಡ್ತಿದ್ಯಾ ಅನ್ನೋ ಕುತೂಹಲ ಎಲ್ಲರಿಗೂ ಇದೆ. ಇದರ ಜೊತೆಗಿರೋ ಇನ್ನೊಂದು ಕುತೂಹಲ ಅಂದ್ರೆ ರಕ್ಷಿತ್ ಬರ್ತ್ಡೇಗೆ ರಶ್ಮಿಕಾ ಮಂದಣ್ಣ ವಿಶ್ ಮಾಡ್ತಾರಾ ಅನ್ನೋದು. ಕಳೆದ ವರ್ಷ ರಶ್ಮಿಕಾ ಹುಟ್ಟಿಹಬ್ಬಕ್ಕೆ ರಕ್ಷಿತ್ ಶೆಟ್ಟಿ ವಿಶ್ ಮಾಡಿದ್ರು. ಈ ಸಾರಿ ರಶ್ಮಿಕಾ ಏನಾದ್ರೂ ತಮ್ಮ ಸಿನಿಮಾ ಇಂಡಷ್ಟಿçಯ ಗಾಡ್‌ಫಾದರ್ ರಕ್ಷಿತ್ ಶೆಟ್ಟಿಗೆ ಹುಟ್ಟುಹಬ್ಬದ ಬೆಸ್ಟ್ ವಿಶಸ್ ಹೇಳ್ತಾರಾ ಅನ್ನೋ ಕುತೂಹಲ ಇವತ್ತು ಸಂಜೆಯವರೆಗೂ ಇರುತ್ತೆ.
ಕಿರಿಕ್‌ಪಾರ್ಟಿ ನಂತ್ರ ಫೆವರಿಟ್ ಫೇರ್ ಆಗಿ ಎಂಗೇಜ್‌ಮೆAಟ್ ಮಾಡಿಕೊಂಡು ನಂತ್ರ ಬ್ರೇಕಪ್ ಮಾಡಿಕೊಂಡ ಈ ಸ್ವೀಟ್ ಪೇರ್ ಫ್ರೆಂಡ್ಶಿಪ್ ಉಳಿಸಿಕೊಳ್ತಾರಾ ಅನ್ನೋ ಕುತೂಹಲ ಎಲ್ಲರಿಗೂ ಇದೆ. ಬೇರೆಯಾದ ಜೋಡಿಹಕ್ಕಿಗಳು ಮತ್ತೆ ಒಂದಾಗೋದು ಡೌಟ್. ಇಬ್ಬರೂ ಸದ್ಯಕ್ಕೆ ಇಂಡಿಯನ್ ಸಿನಿಮಾ ಇಂಡಷ್ಟಿçಯಲ್ಲಿ ಮಿಂಚ್ತಿದ್ದಾರೆ. ರಶ್ಮಿಕಾ ಅಮಿತಾಭ್ ಬಚ್ಚನ್ ಜೊತೆ ನಟಿಸ್ತಿದ್ದು, ರಕ್ಷಿತ್ ಕೂಡ ಚಾರ್ಲಿ ಮೂಲಕ ಪ್ಯಾನ್ ಇಂಡಿಯಾ ಸಿಂಪಲ್‌ಸ್ಟಾರ್ ಆಗ್ತಾರೆ ಅನ್ನೋದ್ರಲ್ಲಿ ಡೌಟ್ ಇಲ್ಲ. ಎನಿವೇ ನಮ್ ಕಡೆಯಿಂದಾನೂ ಹ್ಯಾಪಿ ಬರ್ತ್ಡೇ ಸಿಂಪಲ್‌ಸ್ಟಾರ್

- Advertisement -

Latest Posts

Don't Miss