Tuesday, October 14, 2025

Latest Posts

ಕಾಂಗ್ರೆಸ್ ಗೆ ಕೈ ಕೊಡ್ತಾರಾ ಸಾಹುಕಾರ..?: ಸಾಕ್ಷಿಯಾದ ಸವದಿ ಬರ್ತಡೇ ಬ್ಯಾನರ್

- Advertisement -

Chikkodi News: ಮಾಜಿ ಸಿಎಂ ಜಗದೀಶ ಶೆಟ್ಟರ ಬಿಜೆಪಿ ಪ್ರವೇಶ ಬೆನ್ನಲ್ಲೆ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಮೇಲೆ ಕೇಂದ್ರ ನಾಯಕರ ಕಣ್ಣು ಬಿದ್ದಿದೆ.

ಅದೆಷ್ಟೋ ಬಾರಿ ನಾನು ಕಾಂಗ್ರೆಸ್ ಬಿಡಲ್ಲ ಎಂದ ಲಕ್ಷ್ಮಣ ಸವದಿಯ ತೆರೆಮರೆಯಲ್ಲಿ ಏನೋ ಬದಲಾವಣೆ ಕಾಣ್ತಿದೆಯಾ ಅನ್ನೋ ಗುಸು ಗುಸು ಮಾತು ಕೇಳಿಬರುತ್ತಿವೆ .ಆದ್ರೆ ಇತ್ತೀಚಿನ ದಿನಗಳಲ್ಲಿ ರಾಜಕೀಯ ಬೆಳವಣಿಗೆಗಳನ್ನ ಗಮನಿಸಿದ್ರೆ ಸವದಿ ಬ್ಯಾಲನ್ಸ್ ಮಾಡ್ತಿದ್ದಾರಾ ಅಂತಾ ಮೇಲ್ನೋಟಕ್ಕೆ ಕಂಡು ಬರುತ್ತಿದೆ.

ಬೆಳಗಾವಿ ರಾಜಕಾರಣದಲ್ಲಿ ಶಾಸಕ ಲಕ್ಷ್ಮಣ ಸವದಿ ತಮದೆ ವರ್ಚಸ್ಸು ಹೊಂದಿದವರು ರಾಜಕೀಯ ಅಂದ್ರೆ ವಿರೋಧ ಇದ್ದೆ ಇರುತ್ತೆ ಆದ್ರೆ ಚಿಕ್ಕೋಡಿ ಮಾಜಿ ಸಂಸದ ಮೊನ್ನೆ ನೀಡಿದ ಹೇಳಿಕೆ ಕೆಲವು ಅನುಮಾನಕ್ಕೆ ಎಡೆಮಾಡಿದೆ ಅಂದರೆ ತಪ್ಪಾಗಲಾರದು ಕಾರಣ ಶಾಸಕ ಲಕ್ಷ್ಮಣ ಸವದಿ ಬಿಜೆಪಿ ಬುಲಾವ್ ಬೆನ್ನಲ್ಲೇ ಡಿಸಿಎಂ ಡಿ ಕೆ ಶಿವಕುಮಾರ್ ಸವದಿಗೆ ಕೆಲ ಆಫರ್ ನೀಡಿದ್ರಂತೆ.

ತಮ್ಮ ಆಪ್ತರಿಗೆ ನಿಘಮ ಮಂಡಳಿ ಸ್ಥಾನ ಲೋಕಸಭೆ ಚುನಾವಣೆಯಲ್ಲಿ ಉತ್ತರ ಕರ್ನಾಟಕದಲ್ಲಿ ಸವದಿಗೆ ನಾಯಕತ್ವ ನಂತರ ಸಚಿವ ಸಂಪುಟ ದಲ್ಲಿ ಬದಲಾವಣೆ ತರುವ ಭರವಸೆ ನೀಡಿದ್ರಂತೆ ಇದರ ಬೆನ್ನಲ್ಲೆ ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಮಾತು ಎಲ್ಲೊ ಭಿನ್ನಮತ ಸ್ಫೋಟಗೊಂಡಂತೆ ಗೋಚರವಾಗಿತ್ತಿದೆ ಇದರ ಮದ್ಯ ಅಥಣಿ ಪಟ್ಟಣದಲ್ಲಿ ಶಾಸಕ ಲಕ್ಷ್ಮಣ ಸವದಿ ಬರ್ತಡೆ ಬ್ಯಾನರ್ ಗಳು ಹಲವು ಅನುಮಾನಗಳನ್ನ ಸೃಷ್ಟಿಮಾಡಿವೆ.

ಫೇ 16 ರಂದು ಶಾಸಕ ಲಕ್ಷ್ಮಣ ಸವದಿ ಹುಟ್ಟುಹಬ್ಬದ ನಿಮಿತ್ಯ ಪಟ್ಟನದುದ್ದಕ್ಕೂ ಅಭಿಮಾನಿಗಳು ಬ್ಯಾನರ್ ಗಳನ್ನ ಅಳವಡಿಸಿದ್ದಾರೆ ನೂರಾರು ಬ್ಯಾನರ್ ಗಳಲ್ಲಿ ಪಕ್ಷದ ಚಿನ್ಹೆ ಮಾತ್ರ ಕಾಣಿಸ್ತಿಲ್ಲ.. ಇದು ರಾಜಕೀಯ ಬದಲಾವಣೆಯ ಕುರುಹು ನೀಡಿದೆಯಾ ಅನ್ನೋ ಚರ್ಚೆ ಎಲ್ಲೆಡೆ ಸದ್ದು ಮಾಡುತ್ತಿದೆ.

ನಾಯಿ ತಿನ್ನದ ಬಿಸ್ಕೀಟನ್ನು ಕಾಂಗ್ರೆಸ್ ಕಾರ್ಯಕರ್ತನಿಗೆ ನೀಡಿದ ರಾಹುಲ್ ಗಾಂಧಿ

ಮದುವೆಯಾಗಲಿದ್ದಾರಾ ಸ್ಪೋರ್ಟ್ಸ್ ಸ್ಟಾರ್ಸ್ ಪಿವಿ ಸಿಂಧು- ನೀರಜ್ ಛೋಪ್ರಾ..?

ಚಿಲಿಯಲಿ ಸಂಭವಿಸಿದ ಕಾಡ್ಗಿಚ್ಚಿಗೆ 100ಕ್ಕೂ ಹೆಚ್ಚು ಜನ ಬಲಿ, 200ಕ್ಕೂ ಹೆಚ್ಚು ಜನರು ಕಾಣೆ

- Advertisement -

Latest Posts

Don't Miss