Political News: ಕರ್ನಾಟಕ ಟಿವಿ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಮಾಜಿ ಸಚಿವ ಸಿ.ಟಿ.ರವಿ, ಸವದಿ ಮತ್ತೆ ಬಿಜೆಪಿಗೆ ಬರುತ್ತಾರಾ ಇಲ್ಲವಾ ಅನ್ನೋ ಬಗ್ಗೆ ಮಾತನಾಡಿದ್ದಾರೆ.
ಜಗದೀಶ್ ಶೆಟ್ಟರ್ ಬಿಜೆಪಿ ಬಿಟ್ಟು ಹೋಗಿ, ಮತ್ತೆ ವಾಪಸ್ ಬಿಜೆಪಿಗೆ ಬಂದಿದ್ದಾರೆ. ಅದೇ ರೀತಿ ಲಕ್ಷ್ಮಣ್ ಸವದಿ ಕೂಡ ಮರಳಿ ಬಿಜೆಪಿಗೆ ಬರುತ್ತಾರಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ರವಿ, ಶೆಟ್ಟರು ಬಿಜೆಪಿ ಬಿಟ್ಟು ಕಾಂಗ್ರೆಸ್‌ಗೆ ಹೋದಾಗ, ಶೆಟ್ರೆ ಜಾಸ್ತಿ ಮಾತಾಡ್ಬೇಡಿ. ನೀವು ಮರಳಿ ಬಿಜೆಪಿಗೆ ಬರಲೇಬೇಕು. ಬರ್ತೀರಿ ಅಂತಾ ಹೇಳಿದ್ದೆ. ಏಕೆಂದರೆ, ನಿಮ್ಮದು ಕಾಂಗ್ರೆಸ್ ಡಿಎನ್‌ಎ ಎಲ್ಲ. ಮಿಸ್ ಮ್ಯಾಚ್ ಆಗುತ್ತದೆ ಎಂದು ರವಿ ಹೇಳಿದ್ದಾರೆ.
ಅಲ್ಲದೇ, ಸವದಿ ಅವರ ರಾಜಕಾರಣ ಕೂಡ ಕಾಂಗ್ರೆಸ್ ವಿರೋಧಿ ರಾಜಕಾರಣವೇ. ಅವರು ಕೂಡ ಕಾಂಗ್ರೆಸ್‌ನಲ್ಲಿ ಬಹಳ ದಿನಗಳ ಕಾಲ ಇರಲು ಸಾಧ್ಯವಿಲ್ಲ. ಅಲ್ಲದೇ, ಹಾಗೆ ಇರಲು ಅವರ ಮನಸ್ಸು ಒಪ್ಪುವುದಿಲ್ಲ. ಕೆಲವೊಮ್ಮೆ ರಾಜಕೀಯ ಅಸ್ತಿತ್ವಕ್ಕಾಗಿ, ರಾಜಕೀಯ ಅವಕಾಶಕ್ಕಾಗಿ ಹೀಗೆ ಪಕ್ಷ ಬಿಟ್ಟು ಹೋಗುತ್ತಾರೆ. ಹಾಗೆ ಹೋದವರು ಮತ್ತೆ ವಾಪಸ್ ಬರಲೇಬೇಕು. ಹಾಗೆ ಹೋಗಲು ಸಾಧ್ಯವಿಲ್ಲ ಎಂದು ಸಿ.ಟಿ.ರವಿ ಹೇಳಿದ್ದಾರೆ.
ಅಲ್ಲದೇ, ಕಾಂಗ್ರೆಸ್‌ನವರಿಗೆ ಸದ್ಯ 135 ಸೀಟ್‌ಗಳಿದೆ ಅದನ್ನು ಸರಿಯಾಗಿ ಇಟ್ಟುಕೊಳ್ಳುವುದು ಅವರ ಕೈಯಲ್ಲಿದೆ. ಕಾಂಗ್ರೆಸ್ ಚಿಂದಿ ಚಿತ್ರಾನ್ನ ಆದರೆ ನಾವೇನು ಮಾಡಕ್ಕಾಗತ್ತೆ..? ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮದಲ್ಲವಲ್ಲ. ಅವರ ಖಾಯಿಲೆಗೆ ಔಷಧಿ ಕೊಡುವ ಡಾಕ್ಟರು ನಾವಲ್ಲ. ಮತ್ತು ಕಾಂಗ್ರೆಸ್‌ಗೆ ಹಿಡಿದಿರುವ ಖಾಯಿಲೆ ಯಾವ ಔಷಧಿಯಿಂದಲೂ ಗುಣವಾಗದಂಥ ಖಾಯಿಲೆ ಎಂದು ರವಿ ವ್ಯಂಗ್ಯವಾಡಿದ್ದಾರೆ.
ನವಲಗುಂದ ಕ್ಷೇತ್ರವನ್ನ ಸಿಎಂ ಸಿದ್ದರಾಮಯ್ಯಗೆ ದತ್ತು ನೀಡ್ತೇವೆ- ಶಾಸಕ ಕೋನರೆಡ್ಡಿ
ಯಾವ ನೈತಿಕತೆಯಿಂದ ಇನ್ನೂ ಮುಖ್ಯಮಂತ್ರಿ ಕುರ್ಚಿಯ ಮೇಲೆ ಕುಳಿತಿದ್ದೀರಿ?: ಪ್ರೀತಂಗೌಡ