Saturday, March 29, 2025

Latest Posts

ಮಧ್ಯದಲ್ಲಿ ಬಂದ ಯೂನಸ್‌ ಮಧ್ಯಂತರ ಪತನವಾಗ್ತಾರಾ..? : ಭುಗಿಲೆದ್ದ ಬಾಂಗ್ಲಾ ಬಂಡಾಯ..

- Advertisement -

International News: ಬಾಂಗ್ಲಾ ದೇಶದಲ್ಲಿ ಶೇಖ್‌ ಹಸೀನಾ ಸರ್ಕಾರ ಪತನವಾದ ಬಳಿಕ ಮಧ್ಯಂತರ ಸರ್ಕಾರ ರಚಿಸಿರುವ ಮೊಹಮ್ಮದ್‌ ಯೂನಸ್‌ ಆಡಳಿತಕ್ಕೆ ಇದೀಗ ಗಂಡಾಂತರ ಎದುರಾಗಿದ್ದು, ದೇಶದಲ್ಲಿ ಮಿಲಿಟರಿ ಆಡಳಿತ ಜಾರಿಯಾಗುವ ಆತಂಕ ಕಾಡುತ್ತಿದೆ. ಮುಖ್ಯವಾಗಿ ಹಸೀನಾ ಪದಚ್ಯುತಿಯ ಬಳಿಕ ದೇಶದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಯೂನಸ್‌ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ನಿರಂತರ ಹಿಂಸಾಚಾರ, ಗಲಭೆಗಳು ಹಾಗೂ ನಾಗರಿಕ ಸಂಘರ್ಷಗಳಿಂದ ಬಾಂಗ್ಲಾ ಬಳಲಿಹೋಗುತ್ತಿದೆ. ಇದೇ ವಿಚಾರವನ್ನು ಮುಂದಿಟ್ಟುಕೊಂಡು ಅಲ್ಲಿನ ಸೇನೆಯು ಇಡೀ ದೇಶದ ಆಡಳಿತವನ್ನು ತನ್ನ ವಶ ಪಡಿಸಿಕೊಳ್ಳಲು ತೆರೆಮರೆಯಲ್ಲಿ ಸಿದ್ದತೆ ನಡೆಸಿದೆ.

ಮಧ್ಯಂತರ ಸರ್ಕಾರಕ್ಕೆ ಟೈಂ ಬಾಂಬ್ ಫಿಕ್ಸ್‌..!

ಇನ್ನೂ ಯೂನಸ್‌ ಆಡಳಿತ ವೈಫಲ್ಯಗಳ ವಿರುದ್ಧ ದೇಶದ ಹಲವು ಭಾಗಗಳಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳ ಪ್ರತಿಭಟನೆಗಳು, ಎಲ್ಲ ದಂಗೆಗಳನ್ನು ಹಾಗೂ ಆಡಳಿತ ವಿರೋಧಿ ಅಲೆಯನ್ನು ಎದುರಿಸುತ್ತಿರುವ ಮಧ್ಯಂತರ ಸರ್ಕಾರಕ್ಕೆ ಇತಿಶ್ರೀ ಹಾಡಲು ಸೇನಾ ಮುಖ್ಯಸ್ಥ ವಾಕರ್‌- ಉಜ್‌ – ಜಮಾನ್‌ ಸೇನೆಯ ಹಿರಿಯ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿ ಮುಂದಿನ ಕಾರ್ಯತಂತ್ರಗಳ ಕುರಿತು ಚರ್ಚಿಸಿದ್ದಾರೆ. ಅಲ್ಲದೆ ಯೂನಸ್‌ ಸರ್ಕಾರದ ವಿರುದ್ಧ ಜನರಲ್ಲಿ ಮೂಡಿರುವ ಅವಿಶ್ವಾಸ ಹಾಗೂ ಆಡಳಿತ ಸ್ಥಿರತೆ ತರುವ ನಿಟ್ಟಿನಲ್ಲಿ ಈ ಸಭೆಯಲ್ಲಿ ಉನ್ನತ ಮಟ್ಟದ ಮಾತುಕತೆ ನಡೆದಿದೆ. ಪ್ರಮುಖವಾಗಿ ನಿರಂತರ ಒಂದಲ್ಲ ಒಂದು ರೀತಿಯ ರಾಜಕೀಯ ವಿಪ್ಲವ ಹಾಗೂ ಪ್ರಕ್ಷೋಭೆಗಳಿಗೆ ತುತ್ತಾಗುತ್ತಿರುವ ಬಾಂಗ್ಲಾದಲ್ಲಿ ಸೇನಾ ಮುಖ್ಯಸ್ಥರ ಈ ನಡೆಯು ಅತ್ಯಂತ ಮಹತ್ವ ಪಡೆದಿದ್ದು, ಯೂನಸ್‌ ಸರ್ಕಾರಕ್ಕೆ ಟೈಂ ಬಾಂಬ್‌ ಫಿಕ್ಸ್‌ ಆದಂತೆ ಕಂಡು ಬರುತ್ತಿದೆ.

ಸೇನಾ ಆಡಳಿತಕ್ಕೆ ಪ್ಲಾನ್..!

ಇದರ ಮುನ್ಸೂಚನೆಯೆಂಬಂತೆ ಈಗಾಗಲೇ ಬಾಂಗ್ಲಾ ದೇಶದ ಢಾಕಾದಲ್ಲಿ ಭದ್ರತಾ ಪಡೆಗಳು ಬೀಡು ಬಿಟ್ಟಿವೆ. ಇನ್ನೂ ದೇಶದಲ್ಲಿ ಭಯೋತ್ಪಾದಕ ಚಟುವಟಿಕೆಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ಗಮನಿಸಿರುವ ಸೇನಾ ಮುಖ್ಯಸ್ಥ ಹಲವು ಭಾಗಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಭದ್ರತಾ ಪಡೆಗಳನ್ನು ನಿಯೋಜಿಸಿದ್ದಾರೆ. ಮುಖ್ಯವಾಗಿ ದೇಶದಲ್ಲಿ ತಲೆದೂರಿರುವ ರಾಜಕೀಯ ಅಸ್ಥಿರತೆಯು ಅಲ್ಲಿನ ಜನರನ್ನು ಕಂಗೆಡಿಸಿದ್ದು, ಅವರಿಗೆ ಶಾಂತಿಯೇ ಇಲ್ಲದಾಗಿದೆ ಎಂದು ಸೇನಾ ಮುಖ್ಯಸ್ಥ ಅಸಮಾಧಾನ ಹೊರಹಾಕಿದ್ದಾರೆ. ಇನ್ನೂ ದೇಶದಲ್ಲಿ ನಡೆಯುತ್ತಿರುವ ದಂಗೆ ಹಾಗೂ ಹೋರಾಟಗಳ ಹಿಂದೆ ನಿರ್ಗಮಿತ ಅಧ್ಯಕ್ಷೆ ಶೇಕ್‌ ಹಸೀನಾ ನೇತೃತ್ವದ ಅವಾಮಿ ಲಿಗ್‌ ಪಕ್ಷದ ಕೈವಾಡವಿದೆ ಎಂದು ಯೂನಸ್‌ ಸರ್ಕಾರ ಆರೋಪಿಸುತ್ತಿದೆ. ಆದರೆ ಇದೇ ರಾಜಕೀಯ ಅಭದ್ರತೆ ಹಾಗೂ ದಂಗೆಗಳ ಲಾಭವನ್ನು ಪಡೆದು ಸೇನಾ ಆಡಳಿತ ಜಾರಿಗ ತರಲು ಮುಖ್ಯಸ್ಥ ಜಮಾನ್‌ ಪ್ಲಾನ್‌ ನಡೆಸಿದ್ದಾರೆ.

ಏನಾಗಬಹುದು ಮುಂದೆ..?

ಇನ್ನೂ ಬಾಂಗ್ಲಾದಲ್ಲಿ ತುರ್ತು ಪರಿಸ್ಥಿತಿ ಹೇರುವ ಮೂಲಕ ಇಡೀ ದೇಶದ ಆಡಳಿತವನ್ನು ತನ್ನ ಸುಪರ್ದಿಗೆ ಪಡೆಯಲು ಯೋಚಿಸಿರುವ ಸೇನೆಯು, ರಾಷ್ಟ್ರಪತಿಗಳಿಗೆ ಎಮರ್ಜೆನ್ಸಿ ಪರಿಸ್ಥಿತಿ ಘೋಷಿಸುವಂತೆ ಒತ್ತಾಯ ಮಾಡಬಹುದು. ಅಲ್ಲದೆ ಯೂನಸ್‌ ಸರ್ಕಾರದ ವಿರುದ್ಧ ಕ್ಷಿಪ್ರಕ್ರಾಂತಿ ನಡೆಸಲೂಬಹುದು, ಇನ್ನೊಂದು ಹೆಜ್ಜೆ ಮುಂದೆ ಹೋಗಿ ಸೇನೆಯು ತನ್ನದೇ ನಿಯಂತ್ರಣದಲ್ಲಿ ರಾಷ್ಟ್ರೀಯ ಏಕತೆಯ ನೂತನ ಸರ್ಕಾರ ರಚನೆಗೂ ಮುಂದಾಗಬಹುದನ್ನು ಅಲ್ಲಗಳೆಯುವಂತಿಲ್ಲ.

- Advertisement -

Latest Posts

Don't Miss