Sunday, June 1, 2025

Latest Posts

ವಿಂಬಲ್ಡನ್‍:ದಾಖಲೆ ಸ್ಥಾಪಿಸುವರೆ ಜಬೇರ್?

- Advertisement -

ಲಂಡನ್: ವಿಂಬಲ್ಡನ್‍ನ ಮಹಿಳಾ ಸಿಂಗಲ್ಸ್‍ನಲ್ಲಿ ಇಂದು ಟ್ಯುನಿಶಿಯಾದ ಆನ್ಸ್  ಜಬೇರ್ ಕಜಕಿಸ್ಥಾನದ ಎಲೆನಾ ರಿಬಾಕಿನಾ ಅವರನ್ನು ಎದುರಿಸುವರು.

ಜಬೇರ್ ಅವರು ಸೆಮಿಫೈನಲ್ಲಿನಲ್ಲಿ ಮರಿಯಾ ಅವರನ್ನು ಸೋಲಿಸಿ ಫೈನಲಿಗೇರಿದ್ದಾರೆ. ಜಬೇರ್ ಅವರು ಅರಬ್ ರಾಷ್ಟ್ರದಿಂದ ಮತ್ತು ಆಫ್ರಿಕಾದಿಂದ ವಿಂಬಲ್ಡನ್ ಫೈನಲಿಗೇರುತ್ತಿರುವ ಪ್ರಥಮ ಮಹಿಳೆಯಾಗಿದ್ದಾರೆ. ಅವರು ಪ್ರಶಸ್ತಿ ಗೆದ್ದುದಾದರೆ ಅರಬ್ ಮತ್ತು ಆಫ್ರಿಕನ್ ಜಗತ್ತಿನಿಂದ ಪ್ರಶಸ್ತಿ ಗೆದ್ದ ಪ್ರಥಮ ಮಹಿಳೆಯಾಗಿ ದಾಖಲೆ ಬರೆಯಲಿದ್ದಾರೆ.

ಇದೇವೇಳೆ, ಎಲೆನಾ ರಿಬಾಕಿನಾ ಅವರು ಮಾಜಿ ಚಾಂಪ್ಯನ್ ಹಾಲೆಪ್ ಅವರನ್ನು ಸೋಲಿಸಿ ಫೈನಲಿಗೇರಿದ್ದಾರೆ.

ರಶ್ಯಾದಲ್ಲಿ ಜನಿಸಿದವರಾದ ರಿಬಾಕಿನಾ 2018ರಲ್ಲಿ ಕಜಕಿಸ್ಥಾನದ ಪರವಾಗಿ ಆಡಲು ನಿರ್ಧರಿಸಿದ್ದರು.

ನಡಾಲ್ ಹಿಂತೆಗೆತ

ಲಂಡನ್: ರಾಫಾಲ್ ನಡಾಲ್ ವಿಂಬಲ್ಡನ್ ಸೆಮಿಫೈನಲಿನಿಂದ ಹಿಂದೆ ಸರಿದಿದ್ದಾರೆ. ತೀವ್ರ ಕಿಬ್ಬೊಟ್ಟೆ ನೋವಿನ ಮಧ್ಯೆಯೇ ಕ್ವಾರ್ಟರ್ ಫೈನಲ್ ಗೆದ್ದಿದ್ದ ನಡಾಲ್ ತನಗೆ ಸೆಮಿಫೈನಲಿನಲ್ಲಿ ಆಡಲು ಸಾಧ್ಯಯವಾಗದು ಎಂದು ಹೇಳಿದ್ದಾರೆ. ಇದರಿಂದಾಗಿ ಅವರ ಎದುರಾಳಿ ಕಿರ್ಗಿಯೋಸ್ ನೇರ ಫೈನಲ್ ಪ್ರವೇಶ ಪಡೆದಿದ್ದಾರೆ.

ಈ ನೋವನ್ನು ಇಟ್ಟುಕೊಂಡು ನನಗೆ ಇನ್ನೊಂದು ಪಂದ್ಯ ಆಡಲು ಸಾಧ್ಯವಾಗದು ಎಂದು ನಡಾಲ್ ಹೇಳಿದ್ದಾರೆ. ಈ ವರ್ಷದ ಆಸ್ಟ್ರೇಲಿಯನ್ ಓಪನ್ ಮತ್ತು ಫ್ರೆಂಚ್ ಓಪನ್ ಗೆದ್ದಿದ್ದ ನಡಾಲ್‍ಗೆ ವಿಂಬಲ್ಡನ್ ಗೆಲ್ಲುವ ಕನಸು ಈಗ ಭಗ್ನವಾಗಿದೆ.

 

 

- Advertisement -

Latest Posts

Don't Miss