Health Tips: ವೈದ್ಯರು ಈಗಾಗಲೇ ನಿಮಗೆ ಬಿಯರ್ ಕುಡಿಯುವ ಬಗ್ಗೆ, ಹೆಚ್ಚು ಮದ್ಯಪಾನ ಮಾಡಿದರೆ ಏನಾಗುತ್ತದೆ ಅನ್ನೋ ಬಗ್ಗೆ ವಿವರಿಸಿದ್ದಾರೆ. ಆದರೆ, ಕೆಲವರು ಹೇಳುವ ಪ್ರಕಾರ, ವೈನ್ ಕುಡಿದರೆ, ತ್ವಚೆಯ ಕಾಂತಿ ಹೆಚ್ಚುತ್ತಂತೆ. ಇದು ನಿಜಾನಾ..? ಸುಳ್ಳಾ..? ಅನ್ನೋ ಬಗ್ಗೆ ವೈದ್ಯರೇ ವಿವರಿಸಿದ್ದಾರೆ ನೋಡಿ.
ವೈದ್ಯರು ಹೇಳುವ ಪ್ರಕಾರ, ದ್ರಾಕ್ಷಿ ಜ್ಯೂಸನ್ನು ಫರ್ಮೆಂಟ್ ಮಾಡಿದ್ರೆ, ಅದು ವೈನ್ ಆಗುತ್ತದೆ. ಹಾಗಾಗಿ ವೈನ್ ಕುಡಿಯುವ ಬದಲು ದ್ರಾಕ್ಷಿಯನ್ನೇ ತಿನ್ನಿ ಅಥವಾ ದ್ರಾಕ್ಷಿಯ ಜ್ಯೂಸ್ ಕುಡಿಯಿರಿ ಅಂತಾರೆ ವೈದ್ಯರು.
ಯಾಕಂದ್ರೆ ವೈನ್‌ನಲ್ಲಿ ಆಲ್ಕೋಹಾಲ್ ಕಂಟೆಂಟ್ ಇರುವ ಕಾರಣಕ್ಕೆ, ವೈನ್ ಕುಡಿದರೆ, ಆರೋಗ್ಯಕ್ಕೂ ಅಷ್ಟು ಉತ್ತಮವಲ್ಲ. ಲಿಮಿಟ್‌ನಲ್ಲಿ ಕುಡಿದರೂ, ಅದು ಆಲ್ಕೋಹಾಲ್ ಸೇವನೆಯಂತೆಯೇ ಆಗುತ್ತದೆ. ಹಾಗಾಗಿ ವೈನ್ ಸೇವಿಸುವುದಿದ್ದರೂ, ಅದು ಲಿಮಿಟ್‌ನಲ್ಲಿ ಇರಬೇಕು ಅಂತಾರೆ ವೈದ್ಯರು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.

