Hassan News: ಹಾಸನ: ಚುನಾವಣೆ ಬಳಿಕ ಕಾಂಗ್ರೆಸ್ ಪಕ್ಷ ಹತಾಶವಾಗಿದೆ, ಬೇಜವಾಬ್ದಾರಿತನದ ಸರ್ಕಾರ ನಡೆಸುತ್ತಿದೆ ಚುನಾವಣೆ ಬಳಿಕ ಏಕಾಏಕಿ ತೈಲಬೆಲೆ ಏರಿಕೆ ಮಾಡುವ ಮೂಲಕ ಜನರಿಗೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ವಾಗ್ದಾಳಿ ನಡೆಸಿದರು.
ಹಾಸನದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಜನ ಇಡಿ ಶಾಪ ಹಾಕುತ್ತಿದ್ದಾರೆ ಬರಗಾಲದಿಂದ ಈಗ ತಾನೇ ಚೇತರಿಸಿಕೊಳ್ಳುತ್ತಿರುವ ಜನರಿಗೆ ಪೆಟ್ರೋಲ್ ಮತ್ತು ಡೀಸೆಲ್ ದರದಿಂದ ಸರಕು ಸಾಕಾಣಿಕೆ ಮೇಲೆ ಹೊರೆ ಬೀಳಲಿದೆ ಇದರಿಂದ ದಿನ ನಿತ್ಯದ ತರಕಾರಿ ಬೆಲೆಯಿಂದ ಹಿಡಿದು ಪ್ರತಿ ವಸ್ತುಗಳ ಮೇಲೆ ಆರ್ಥಿಕ ಹೊರೆಯಾಗಲಿದೆ. ಕೇವಲ ನಗರ ಪ್ರದೇಶಗಳಿಗೆ ಮಾತ್ರ ಸೀಮಿತವಾಗದೆ ರೈತಾಪಿ ವರ್ಗದವರಿಗೂ ಬೆಲೆ ಏರಿಕೆ ಬಿಸಿ ತಟ್ಟಲಿದೆ. ಇದು ರಾಜ್ಯ ಸರ್ಕಾರದ ಬೀಜವಾಬ್ದಾರಿ ಜನಕ್ಕೆ ಹಿಡಿದ ಕೈಗನ್ನಡಿಯಾಗಿದ್ದು ನಾಳೆಯಿಂದ ರಾಜ್ಯಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ವಿರುದ್ಧ ಹಾಗೂ ಕಾಂಗ್ರೆಸ್ ಪಕ್ಷದ ಬೇಜವಾಬ್ದಾರಿತನದ ವಿರುದ್ಧ ಪಕ್ಷ ಹೋರಾಟಕ್ಕಿಳಿಯಲಿದೆ ಎಂದರು.
ಸರ್ಕಾರ ರಾಜ್ಯದ ಜನರಿಗೆ ಗ್ಯಾರಂಟಿ ಯೋಜನೆಗಳನ್ನು ನೀಡಿದ್ದು ಅದಕ್ಕೆ ಹಣ ಹೊಂದಿಸಲು ಸಾಧ್ಯವಾಗದೆ ಈ ರೀತಿ ಜನರಿಂದಲೇ ವಸೂಲಿ ಮಾಡುವಂತಹ ಕಾರ್ಯಕ್ಕೆ ಕೈ ಹಾಕಿರುವುದು ನಿಮ್ಮ ಸರ್ಕಾರದ ಬೇಜವಾಬ್ದಾರಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಮುಖ್ಯಮಂತ್ರಿಗಳು ತಮ್ಮ ಕೈಯನ್ನ ಕಟ್ಟಿ ಹಾಕಿಕೊಂಡು ಕಳೆದ ಒಂದು ವರ್ಷದಿಂದ ರಾಜ್ಯಕ್ಕೆ ಯಾವುದೇ ಹೊಸ ಯೋಜನೆಗಳನ್ನು ರಾಜ್ಯದ ಜನರಿಗೆ ನೀಡಲು ಸಾಧ್ಯವಾಗುತ್ತಿಲ್ಲ. ಒಂದು ಕಡೆ ಯಥೇಚ್ಛವಾಗಿ ಸಾಲ ಮಾಡಿಕೊಂಡು ಸಾಲವನ್ನು ತೀರಿಸಲಾಗದೆ ಅದನ್ನ ರಾಜ್ಯದ ಜನರ ಮೇಲೆ ಪರೋಕ್ಷವಾಗಿ ಏರಿಕೆ ಮಾಡುತ್ತಿದ್ದಾರೆ.
ಇನ್ನು ಹಾಸನ ಜಿಲ್ಲೆಯಲ್ಲಿಯೂ ಕೂಡ ನಮ್ಮ ಪಕ್ಷದ ಶಾಸಕರಿದ್ದಾರೆ ಅವರಿಗೆ ಅನುದಾನದ ಕೊರತೆ ಉಂಟಾಗಿದೆ ರಸ್ತೆ ಚರಂಡಿ ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸಾಧ್ಯವಾಗದಂತೆ ಸರ್ಕಾರ ಅನುದಾನವನ್ನ ತಡೆಹಿಡಿದಿರುವುದು ಶಾಸಕರುಗಳು ತಮ್ಮ ತಮ್ಮ ಕ್ಷೇತ್ರದಲ್ಲಿ ತಲೆಯೆತ್ತಿ ತಿರುಗಲು ಸಾಧ್ಯವಾಗೋದಿಲ್ಲ ಇದರಿಂದ ರಾಜ್ಯ ಸರ್ಕಾರ ಅಭಿವೃದ್ಧಿ ಶೂನ್ಯ ವಾಗಿದ್ದು ಜನರ ಮೇಲೆ ಪದೇಪದೇ ಆರ್ಥಿಕ ಹೊರೆ ಏರುತ್ತಿರುವುದು ಬೇಜವಾಬ್ದಾರಿ ತರದ ಪರಮಾವಧಿಯಾಗಿದೆ ಎಂದು ಆಕ್ರೋಶ ಹೊರ ಹಾಕಿದ್ರು.