Sandalwood: ಸ್ಯಾಂಡಲ್‌ವುಡ್ ನಟ ದುನಿಯಾ ವಿಜಯ್ ಕರ್ನಾಟಕ ಟಿವಿ ಜತೆ ಮಾತನಾಡಿದ್ದು, ಲ್ಯಾಂಡ್‌ಲಾರ್ಡ್ ಸಿನಿಮಾ ಬಗ್ಗೆ ವಿಷಯ ಹಂಚಿಕ“ಂಡಿದ್ದಾರೆ.
ಸದ್ಯ ಸುದ್ದಿ ಮಾಡುತ್ತಿರುವ ಕನ್ನಡ ಸಿನಿಮಾ ಅಂದ್ರೆ ಅದು ಲ್ಯಾಂಡ್‌ಲಾರ್ಡ್ ಸಿನಿಮಾ. ದುನಿಯಾ ವಿಜಿ ನಟನೆಯ ಸಿನಿಮಾ ಇದಾಗಿದ್ದು, ರಾಜ್ ಬಿ ಶೆಟ್ಟಿ ಕೂಡ ಈ ಸಿನಿಮಾದಲ್ಲಿದ್ದಾರೆ.
ಸಿನಿಮಾ ಸುದ್ದಿ ಮಾತಿಗೂ ಮುನ್ನ, ಕ್ರೈಂ ಸುದ್ದಿ ಬಗ್ಗೆ ಮಾತನಾಡಿದ ದುನಿಯಾ ವಿಜಿ, ಮಕ್ಕಳ ಕೈಗೆ ಫೋನ್ ನೀಡುವ ಬಗ್ಗೆ ತಮ್ಮ ಅನಿಸಿಕೆ ಹೇಳಿದ್ದಾರೆ. ಮಕ್ಕಳಿಗೆ ಫೋನ್ ನೀಡುವುದಕ್ಕೂ ಮುನ್ನ ಅವರ ಪೋಷಕರ ಆಧಾರ್ ಕಾರ್ಡ್ ಪಡೆದಿರಬೇಕು. ಮಕ್ಕಳು ತಮ್ಮ ಫೋನ್ ಹೇಗೆ ಬಳಕೆ ಮಾಡುತ್ತಾರೆ ಅನ್ನೋದು ಪೋಷಕರಿಗೆ ತಿಳಿದಿರಬೇಕು. ಹೀಗೆ ಮಾಡಿದ್ದಲ್ಲಿ ಮಾತ್ರ ನಾವು ನಮ್ಮ ಮಕ್ಕಳನ್ನು ರಕ್ಷಿಸುವುದಕ್ಕೆ ಸಾಧ್ಯವೆಂದು ವಿಜಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
ಬೇರೆ ಬೇರೆ ದೇಶದಲ್ಲಿ ಈ ರೀತಿಯ ನಿಯಮಗಳು ಜಾರಿಗೆ ಬಂದಿದೆ. ಸೋಶಿಯಲ್ ಮೀಡಿಯಾ ಬಳಸಲು ವಯಸ್ಸಿನ ಮಿತಿ ಇದೆ. ಆದರೆ ಭಾರತದಲ್ಲಿ ಚಿಕ್ಕ ಚಿಕ್ಕ ಮಕ್ಕಳು ರೀಲ್ಸ್ ಮಾಡುತ್ತಾರೆ. ಅಶ್ಲೀಲ ಪದ ಬಳಕೆ ಮಾಡುತ್ತಾರೆ. ಹಾಗಾಗಿ ಮಕ್ಕಳನ್ನು ನಾವು ಸರಿಯಾಗಿ ಬೆಳೆಸಬೇಕು ಅಂದ್ರೆ, ಫೋನ್ ನೀಡುವುದರ ಬಗ್ಗೆ ಗಮನವಿರಬೇಕು ಅಂತಾರೆ ವಿಜಿ. ಸಂಪೂರ್ಣ ಮಾಹಿತಿಗಾಗಿ ವೀಡಿಯೋ ನೋಡಿ.




