Health Tips: ಆಪ್ತಸಮಾಲೋಚನೆ ಎಂದರೇನು ಎಂದು ವೈದ್ಯರಾಗಿರುವ ಡಾ.ಪ್ರಕಾಶ್ ರಾವ್ ವಿವರಿಸಿದ್ದಾರೆ.
ಕೆಲವರಿಗೆ ತಮ್ಮ ಸಮಸ್ಯೆ ಹೇಳಲು ಯಾರೂ ಇರುವುದಿಲ್ಲ. ಕಾರಣ ಅವರು ಯಾರ ಸ್ನೇಹ ಬಯಸುವುದಿಲ್ಲ. ಸಂಬಂಧವಿರಿಸಲು ಇಚ್ಛಿಸುವುದಿಲ್ಲ. ಫೋನ್, ಟಿವಿ ಇದೇ ಜೀವನವಾಗಿರುತ್ತದೆ. ಆದರೆ ವೈದ್ಯರು ಹೇಳುವ ಪ್ರಕಾರ, ನಾವು ನಮ್ಮ ಸಮಸ್ಯೆಯನ್ನು ಯಾರ ಬಳಿಯಾದರೂ ಹೇಳಿದಾಗ. ಅವರಿಂದ ಕೆಲ ಸಾಂತ್ವನದ ಮಾತು ಕೇಳಿದಾಗ ಮಾತ್ರ, ಮನಸ್ಸು ಹಗುರವಾಗುತ್ತದೆ. ಇದನ್ನೇ ಆಪ್ತ ಸಮಾಲೋಚನೆ ಎನ್ನುವುದು.
ವೈದ್ಯಕೀಯ ವಿಚಾರವಿದ್ದಾಗಲೂ ಹಾಗೆ. ನಮಗಿರುವ ಆರೋಗ್ಯ ಸಮಸ್ಯೆ ಬಗ್ಗೆ ನಾವು ವೈದ್ಯರ ಬಳಿ ಆಪ್ತಸಮಾಲೋಚನೆ ಮಾಡುವುದರಿಂದ ನಮ್ಮ ಆರೋಗ್ಯ ಸಮಸ್ಯೆಗೆ ಉತ್ತಮ ಪರಿಹಾರ ಸಿಗುತ್ತದೆ. ಇಲ್ಲದಿದ್ದರೆ, ಆರೋಗ್ಯ ಮತ್ತಷ್ಟು ಹಾಳಾಗುವ ಸಾಧ್ಯತೆ ಇರುತ್ತದೆ. ಕೆಲವರು ಮನೆಯಲ್ಲೇ ಮದ್ದು ಮಾಡಿ, ಪರಿಹಾರವಾಗದಿದ್ದರೂ ಪರದಾಡುತ್ತಾರೆ. ಅದರ ಬದಲು ಮಾತನಾಡಿ ಸಮಸ್ಯೆ ಪರಿಹಾರ ಮಾಡುವುದು ಅತೀ ಉತ್ತಮವಾಗಿರುತ್ತದೆ. ಸಂಪೂರ್ಣ ಮಾಹಿತಿಗಾಗಿ ವೀಡಿಯೋ ನೋಡಿ.




