ದೂರು ದಾಖಲಿಸಲು ವಿಳಂಬಿಸಿದ ಹಿನ್ನೆಲೆ ಮಹಿಳೆ ಆತ್ಮಹ* ಯತ್ನ: ಗೃಹ ಸಚಿವರ ವಿರುದ್ಧ ಸಿ.ಟಿ.ರವಿ ಆಕ್ರೋಶ

Political News: ಕಲಬುರಗಿಯಲ್ಲಿ ಪೋಲೀಸರು ದೂರು ದಾಖಲಿಸದ ಹಿನ್ನೆಲೆ, ಬೇಸರಗ“ಂಡ ಮಹಿಳೆ ವಿಷ ಸೇವಿಸಿ, ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ಬಗ್ಗೆ ಬಿಜೆಪಿ ಹಿರಿಯ ನಾಯಕ ಸಿ.ಟಿ.ರವಿ ಗೃಹಸಚಿವರಾದ ಪ್ರಿಯಾಂಕ್ ಖರ್ಗೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೀಪದ ಬುಡದಲ್ಲಿ ಕತ್ತಲು ಎನ್ನುವಂತೆ, ಕಾನೂನು – ಸುವ್ಯವಸ್ಥೆ ಜವಾಬ್ದಾರಿ ಹೊಂದಿರುವ ಗೃಹ ಸಚಿವರ ಜಿಲ್ಲೆಯಲ್ಲೇ ಜಂಗಲ್ ರಾಜ್! ಕಲಬುರಗಿ ಜಿಲ್ಲೆಯ, ನೆಲೋಗಿ ಪೊಲೀಸ್ ಠಾಣೆಯ ಆವರಣದಲ್ಲಿ ರೇವೂಬಾಯಿ ಎನ್ನುವ ಮಹಿಳೆ ವಿಷ ಸೇವಿಸಿ ಆತ್ಮಹತ್ಯೆಗೆ ಮುಂದಾಗಿದ್ದು ಆಘಾತಕಾರಿ ಬೆಳವಣಿಗೆ. ಇದು ರಾಜ್ಯದ ಆಡಳಿತ, ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದಕ್ಕೆ ಪ್ರತ್ಯಕ್ಷ ಸಾಕ್ಷಿ ಎಂದು ರವಿ ಕಿಡಿಕಾರಿದ್ದಾರೆ.

ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರೇ, ನಿಮ್ಮ ಜಿಲ್ಲೆಯಲ್ಲಿ ಮಹಿಳೆಯರು ನ್ಯಾಯ ಸಿಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ, ಪೊಲೀಸ್ ಠಾಣೆಯ ಮುಂದೆ ವಿಷ ಸೇವಿಸುವ ಪರಿಸ್ಥಿತಿ ಬಂದಿದೆ. ಇದುವೇ ನಿಮ್ಮ ಇಲಾಖೆ ಕಾರ್ಯಾಚರಿಸುವ ರೀತಿ? ಬೇರೆಲ್ಲ ವಿಚಾರಗಳಿಗೆ ತಲೆ ತೂರಿಸುವ ನೀವು, ನಿಮ್ಮ ಇಲಾಖೆಯ ಕಡೆಗೂ ಸ್ವಲ್ಪ ಗಮನ ಹರಿಸಿ ೆಂದು ರವಿ ತಿವಿದಿದ್ದಾರೆ.

ಆ ಮಹಿಳೆ ಇಂತಹ ಅಪಾಯಕಾರಿ ನಡೆಗೆ ಏಕೆ ಮುಂದಾದರು ಎನ್ನುವ ಕುರಿತು ತಕ್ಷಣವೇ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ರವಿ ಪ್ರಿಯಾಂಕ್ ಖರ್ಗೆ ಮತ್ತು ಕಾಂಗ್ರೆಸ್ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

About The Author