Mysuru News: ಮೈಸೂರು : ಉಚಿತ ಬಸ್ ಪ್ರಯಾಣ ನಾರಿ ಶಕ್ತಿ ಯೋಜನೆಯಿಂದ ಸರ್ಕಾರಕ್ಕೆ ಮುಜುಗರ ತರುವಂತೆ ಆಗಿದೆ. ಉಚಿತ ಬಸ್ ಪ್ರಯಾಣ ಮಾಡುವ ಹುಮ್ಮಸ್ಸಿನಲ್ಲಿ ನಾರಿಯರು ನಿಯಂತ್ರಣ ಕಳೆದುಕೊಳ್ಳುತ್ತಿದ್ದಾರೆ . ಒಂದೆಡೆ ನೂಕು ನುಗ್ಗಲಾದ್ರೆ, ಮತ್ತೊಂದೆಡೆ ಸೀಟ್‌ಗಾಗಿ ಮಹಿಳೆಯರು ಕೈ ಕೈ ಮಿಲಾಯಿಸುತ್ತಿದ್ದಾರೆ. ಬಸ್ ಒಂದರಲ್ಲಿ ಸೀಟ್ ಗಾಗಿ ಮಹಿಳೆಯರು ಜಡೆ ಹಿಡಿದು ಕಿತ್ತಾಡಿರುವ ವಿಡಿಯೋ ವೈರಲ್ ಆಗಿದೆ.
ಈ ಘಟನೆ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನಡೆದಿದೆ ಎನ್ನಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಸಖತ್ ವೈರಲ್ ಆಗಿದೆ. ಸರ್ಕಾರ ಈ ಕೂಡಲೇ ಈ ಸಮಸ್ಯೆಗೆ ಪರಿಹಾರ ಹುಡುಕದಿದ್ದಲ್ಲಿ, ಅನಾಹುತ ನಡೆಯುವ ಸಂಭವವಿದೆ.
ಒಂದು ವಾರದಿಂದ ಈ ಯೋಜನೆಯಿಂದ ಮಹಿಳೆಯರಿಗೆ ಲಾಭವಾಗುವುದರ ಜೊತೆಗೆ, ಇನ್ನು ಕೆಲವರಿಗೆ ನಷ್ಟವೂ ಆಗುತ್ತಿದೆ. ಕೆಲ ಜನರು ಬಾಗಿಲ ಬಳಿ ನಿಂತು, ನೇತಾಡುತ್ತ ಪ್ರಯಾಣಿಸುತ್ತಿದ್ದು, ಇದು ಅವರ ಪ್ರಾಣಕ್ಕೆ ಕುತ್ತು ತರುವ ಸಂಭವವಿದೆ. ಇನ್ನು ಕೆಲವೆಡೆ ನೂಕು ನುಗ್ಗಲಿಗೆ, ಬಸ್ಸ್ನ ಬಾಗಿಲೇ ಮುರಿದು ಹೋಗಿದೆ.
‘ಅಧಿಕಾರದಲ್ಲಿದ್ದರೂ ಪ್ರತಿಭಟಿಸುತ್ತಿರುವ ವಿಶ್ವದ ಏಕೈಕ ಪಕ್ಷ ಕಾಂಗ್ರೆಸ್ ಆಗಿರಬೇಕು’