Friday, November 22, 2024

Latest Posts

ಆಸ್ಟ್ರೇಲಿಯಾ ವನಿತೆಯರಿಗೆ ವಿಶ್ವಕಪ್ ಕಿರೀಟ

- Advertisement -

ಕ್ರೈಸ್ಟ್‍ಚರ್ಚ್:ಓಪನರ್ ಅಲಿಸಾ ಹೀಲಿ ಅವರ ಅತ್ಯದ್ಬುತ ಶತಕದ ನೆರೆವಿನಿಂದ ಬಲಿಷ್ಠ ಆಸ್ಟ್ರೇಲಿಯಾ ವನಿತೆಯರ ತಂಡ ಏಳನೆ ಬಾರಿಗೆ ಪ್ರಶಸ್ತಿ ಎತ್ತಿ ಹಿಡಿದಿದೆ.


ಕ್ರೈಸ್ಟ್‍ಚರ್ಚ್‍ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡ ಫೀಲ್ಡಿಂಗ್ ಅಯ್ದುಕೊಂಡಿತು.
ಆಸಿಸ್ ಪರ ಆರಂಭಿಕರಾಗಿ ಕಣಕ್ಕಿಳಿದ ಅಲಿಸ್ಸಾ ಹೀಲಿ ಹಾಗೂ ರಾಚೆಲ್ ಹಯ್ನೆಸ್ ಭರ್ಜರಿ ಆರಂಭ ಕೊಟ್ಟು ಮೊದಲ ವಿಕೆಟ್‍ಗೆ 160 ರನ್ ಸೇರಿಸಿದರು. ಸ್ಫೋಟಕ ಬ್ಯಾಟಿಂಗ್ ಮಾಡಿದ ಅಲಿಸ್ಸಾ ಹೀಲಿ ಮೊದಲಿಗೆ 62 ಎಸೆತದಲ್ಲಿ ಅರ್ಧ ಶತಕ ಸಿಡಿಸಿದರು. ನಂತರ 100 ಎಸೆತದಲ್ಲಿ ಶತಕ ಸಿಡಿಸಿದರು.

ರಾಚೆಲ್ 68 ರನ್ ಗಳಿಸಿ ಎಕ್ಲಸ್ಟೋನ್‍ಗೆ ವಿಕೆಟ್ ಒಪ್ಪಿಸಿದರು. ಬೆತ್ ಮೂನಿ 62, ಗಾರ್ಡನರ್ 1, ತಹೀಲಾ ಮೆಕ್‍ಗ್ರೆತ್ 8, ಎಲ್ಲಿಸ್ಸಾ ಪೆರ್ರಿ ಅಜೇಯ 17 ರನ್ ಕಲೆ ಹಾಕಿದರು. ಅಲಿಸ್ಸಾ ಹೀಲಿ 138 ಎಸೆತ ಎದುರಿಸಿ 26 ಬೌಂಡರಿಗಳೊಂದಿಗೆ 170 ರನ್ ಗಳಿಸಿದರು. ಆಸ್ಟ್ರೇಲಿಯಾ ನಿಗದಿತ 50 ಓವರ್‍ಗಳಲ್ಲಿ 5 ವಿಕೆಟ್ ನಷ್ಟಕ್ಕೆ 356 ರನ್ ಗಳಿಸಿತು.

357 ರನ್‍ಗಳ ಬೃಹತ್ ಮೊತ್ತ ಬೆನ್ನತ್ತಿದ ಇಂಗ್ಲೆಂಡ್ ತಂಡ ಉತ್ತಮ ಆರಂಭ ಪಡೆಯಲಿಲ್ಲ. ಓಪನರ್ ಟಾಮಿ ಬಿಮೊಂಟ್ 27, ವ್ಯಾಟ್ 4, ಹೀಥರ್ ನೈಟ್ 26, ನಾಟ್ ಸೀವರ್ ಅಜೇಯ 148, ಆಮಿ ಜಾನ್ಸ್ 20, ಸೋಫಿಯಾ ಡಂಕ್ಲಿ 22, ಚಾರ್ಲಿ ಡೀನ್ 21 ರನ್ ಗಳಿಸಿದರು. ಇಂಗ್ಲೆಂಡ್ ತಂಡ 43.4 ಓವರ್‍ಗಳಲ್ಲಿ 285 ರನ್‍ಗಳಿಗೆ ಆಲೌಟ್ ಆಯಿತು. ಆಸ್ಟ್ರೇಲಿಯಾ ಪರ ಆಲನಾ ಕಿಂಗ್, ಜೆಸ್ ಜೊನಸೆನ್ ತಲಾ 3 ವಿಕೆಟ್ ಪಡೆದರು. ಮೆಗಾನ್ ಸ್ಕಟ್ 2 ವಿಕೆಟ್ ಪಡೆದರು.

ಫೈನಲ್ ಹಾಗೂ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿದ ಅಲಿಸ್ಸಾ ಹೀಲಿ ಪಂದ್ಯ ಹಾಗೂ ಸರಣಿ ಶ್ರೇಷ್ಠ ಪುರಸ್ಕಾರ ಪಡೆದರು.

- Advertisement -

Latest Posts

Don't Miss