Tuesday, September 23, 2025

Latest Posts

ಮರಗಳ್ಳತನ ಪ್ರಕರಣ: ಸಂಸದ ಪ್ರತಾಪ್ ಸಿಂಹ ಸಹೋದರ ವಿಕ್ರಂ ಸಿಂಹ ಅರೆಸ್ಟ್

- Advertisement -

Bengaluru News: ಮರಗಳ್ಳತನ ಪ್ರಕರಣದಲ್ಲಿ ಸಂಸದ ಪ್ರತಾಪ್ ಸಿಂಹ ಅವರ ಸಹೋದರ ವಿಕ್ರಮ್ ಸಿಂಹರನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.

ಬೇಲೂರು ಬಳಿಯ ನಂದಗೊಂಡನಹಳ್ಳಿಯ 126 ಮರಗಳನ್ನು ಕಡಿದ ಆರೋಪದಡಿ ಮತ್ತು ತಲೆಮರೆಸಿಕೊಂಡಿದ್ದ ಆರೋಪದಡಿ, ವಿಕ್ರಂ ಸಿಂಹನನ್ನು ಅರೆಸ್ಟ್‌ ಮಾಡಲಾಗಿದೆ. ಬೇಲೂರಿನ ನಂದಗೊಂಡನಹಳ್ಳಿಯಲ್ಲಿ 10 ಎಕರೆ ಜಾಗದಲ್ಲಿ ಸುಮಾರು ಮರಗಳನ್ನು ಬೆಳೆಸಿದ್ದು, ಅದರಲ್ಲಿ 126 ಮರಗಳನ್ನು ಕಡಿದು, ಮಾರಿರುವ ಆರೋಪ ಕೇಳಿಬಂದಿತ್ತು.

ಈ ಕಾರಣಕ್ಕಾಗಿ ವಿಕ್ರಂ ಸಿಂಹ ಸೇರಿ ಜಮೀನಿನ ಮಾಲೀಕರಾದ ರಾಕೇಶ್ ಶೆಟ್ಟಿ, ಜಯಮ್ಮ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ವಿಷಯ ತಿಳಿದು ವಿಕ್ರಂ ಸಿಂಹ ತಲೆಮರೆಸಿಕೊಂಡಿದ್ದರೆಂಬ ಆರೋಪ ಕೇಳಿ ಬಂದಿದ್ದು, ಇವೆರಡೂ ಕಾರಣಕ್ಕಾಗಿ ವಿಕ್ರಂ ಸಿಂಹ ವಿರುದ್ಧ ಕೇಸ್ ದಾಖಲಾಗಿತ್ತು. ಇದೀಗ ವಿಕ್ರಂ ಸಿಂಹನನ್ನು ಬಂಧಿಸಲಾಾಗಿದೆ.

ಕೆಲ ದಿನಗಳ ಹಿಂದೆ ಕಾಂಗ್ರೆಸ್ ಈ ಬಗ್ಗೆ ಟ್ವೀಟ್ ಮಾಡಿ ಲೇವಡಿ ಮಾಡಿತ್ತು. ಅಣ್ಣಾ ಪ್ರತಾಪ್ ಸಿಂಹ ನಾಡುಗಳ್ಳ, ತಮ್ಮ ವಿಕ್ರಂ ಸಿಂಹ ಕಾಡುಗಳ್ಳ ಎಂದು ವ್ಯಂಗ್ಯವಾಡಿತ್ತು.

‘ಪ್ರಣವಾನಂದ ಸ್ವಾಮೀಜಿ ಅಲ್ಲ ಸ್ವಾಮೀಜಿನೇ ಅಲ್ಲ. ನಾನು ತಲೆಕಟ್ಟೋರಿಗೆ ಉತ್ತರ ಕೊಡಲ್ಲ’

ಕೊಬ್ಬರಿಗೆ ಬೆಲೆ ಏರಿಕೆ: ಪ್ರಧಾನಿ ನರೇಂದ್ರ ಮೋದಿಗೆ ಧನ್ಯವಾದ ತಿಳಿಸಿದ ಮಾಜಿ ಸಿಎಂ ಕುಮಾರಸ್ವಾಮಿ

2023ರಲ್ಲಿ ನಿಧನರಾದ ಸ್ಯಾಂಡಲ್‌ವುಡ್‌ ಸೆಲೆಬ್ರಿಟಿಗಳು ಇವರು

- Advertisement -

Latest Posts

Don't Miss