Friday, August 29, 2025

Latest Posts

ಮಹಿಳೆಯರು ಮನೆಯಲ್ಲೇ ಕೂತು ಶುರುಮಾಡಬಹುದಾದ 5 ಉದ್ಯಮಗಳು..

- Advertisement -

ಕೆಲ ಹೆಣ್ಣುಮಕ್ಕಳು ಓದಲು ಆಸೆ, ಅರ್ಹತೆ ಇದ್ದರೂ ಮನೆಯವರ ಒತ್ತಡಕ್ಕೆ ಮಣಿದು, ವಿದ್ಯಾಭ್ಯಾಸ ಅರ್ಧಕ್ಕೆ ನಿಲ್ಲಿಸಿ ಮದುವೆಯಾಗುತ್ತಾರೆ. ಮದುವೆ ಬಳಿಕ ಮನೆ, ಮಕ್ಕಳು, ಕುಟುಂಬದ ಜವಾಬ್ದಾರಿ ಹೊರುತ್ತಾರೆ. ಆದ್ರೆ ಮಹಿಳೆಯರು ಮನೆಯಲ್ಲೇ ಕೂತು ಲಾಭದಾಯಕ ಉದ್ಯಮ ಶುರು ಮಾಡುವ ಬಗ್ಗೆ ಕೆಲ ಐಡಿಯಾಗಳನ್ನ ನಾವು ನಿಮಗೆ ನೀಡಲಿದ್ದೇವೆ.

1.. ಗಾರ್ಡೆನಿಂಗ್: ಕೆಲವರಿಗೆ ಮನೆಯಲ್ಲಿ ಪುಟ್ಟ ಗಾರ್ಡೆನ್ ತಯಾರಿಸಿ, ವಿವಿಧ ತರಹದ ಗಿಡ ನೆಡುವ ಹವ್ಯಾಸ ಇರುತ್ತದೆ. ಇದೇ ಹವ್ಯಾಸವನ್ನ ಉದ್ಯೋಗವಾಗಿ ಮಾರ್ಪಾಡು ಮಾಡಬಹುದು. ನಿಮ್ಮ ಮನೆಯಲ್ಲೇ ಪುಟ್ಟ ನರ್ಸರಿ ತಯಾರಿಸಿ ವಿವಿಧ ತರಹದ ಹೂವು, ಹಣ್ಣಿನ ಗಿಡ ನೆಟ್ಟು, ಪಾಟ್ ಮಾಡಿ ಮಾರಬಹುದು.

2.. ಹೋಮ್ ಕ್ಯಾಟರಿಂಗ್: ಯುವಕ ಯುವತಿಯರು ವಿದ್ಯಾಭ್ಯಾಸ, ಕೆಲಸಕ್ಕಾಗಿ ತಮ್ಮ ಊರನ್ನ ಬಿಟ್ಟು, ಬೆಂಗಳೂರಿನಂಥ ಸಿಟಿಗೆ ಬರುತ್ತಾರೆ. ಈ ವೇಳೆ ಅವರಿಗೆ ಊಟ ತಿಂಡಿಯ ಅವಶ್ಯಕತೆ ಹೆಚ್ಚಾಗಿ ಇರುತ್ತದೆ. ಪ್ರತಿದಿನ ಹೊಟೇಲನಲ್ಲಿ ತಿಂಡಿ, ಊಟ ಮಾಡಲು ಸಾಧ್ಯವಾಗುವುದಿಲ್ಲ. ಮನೆ ಊಟಕ್ಕಾಗಿ ಚಡಪಡಿಸುತ್ತಿರುತ್ತಾರೆ. ಅಂಥವರಿಗೆ ಮನೆಯೂಟ ಒದಗಿಸುವ ಕೆಲಸ ಮಾಡಬಹುದು. ಎಷ್ಟೇ ಕಷ್ಟ, ಎಂಥ ಸಮಯ ಬಂದರೂ ಮನುಷ್ಯ ಊಟ ತಿಂಡಿ ಇಲ್ಲದೇ ಬದುಕಲಾರ. ಹಾಗಾಗಿ ಹೋಮ್ ಕ್ಯಾಟರಿಂಗ್ ಶುರು ಮಾಡಿದರೆ ಹೆಚ್ಚಿನ ಲಾಭ ಗಳಿಸಬಹುದು.

ಅಲ್ಲದೇ, ನಿಮಗೆ ರುಚಿಕರ ಸ್ನ್ಯಾಕ್ಸ್, ಸ್ವೀಟ್ಸ್ ಮಾಡಲು ಬರುತ್ತದಾದರೆ, ಮನೆಯಲ್ಲೇ ಈ ಎಲ್ಲ ತಿಂಡಿ ತಯಾರಿಸಿ, ಮಾರಬಹುದು.

https://youtu.be/a8ogowgjLZA

3.. ಆಭರಣ ತಯಾರಿ: ಅಂದು ಇಂದು ಎಂದೆಂದೂ ಲಾಭದಾಯಕ ಉದ್ಯಮ ಎಂದರೆ ಆಭರಣ ತಯಾರಿಕೆಯದ್ದು. ಜನಜೀವನದಲ್ಲಿ ಫ್ಯಾಷನ್ ಅನ್ನೋದು ಜೀವನದ ಒಂದು ಭಾಗವಾಗಿಬಿಟ್ಟಿದೆ. ದಿನದಿಂದ ದಿನಕ್ಕೆ ಹೊಸ ಹೊಸ ಫ್ಯಾಷನ್ ಟ್ರೆಂಡನ್ನ ನಾವು ನೋಡ್ತಾನೇ ಇರ್ತೀವಿ. ಅಂಥಾದ್ರಲ್ಲಿ ಆರ್ನ್‌ಮೆಂಟ್ಸ್ ಕೂಡ ಒಂದು.

ಹೆಣ್ಣುಮಕ್ಕಳಿಗೆ ಎಷ್ಟು ಆಭರಣ ಕೊಂಡುಕೊಂಡರೂ ಕಡಿಮೇನೆ. ಅದರಲ್ಲೂ ಈಗಿನ ಕಾಲದ ಆರ್ಟಿಫಿಶಿಯಲ್ ಜ್ಯುವೆಲ್ಲರಿಯಲ್ಲಂತೂ ವೆರೈಟಿ ವೈರೆಟಿ ಆಭರಣಗಳು ಕಾಣಸಿಗುತ್ತದೆ. ಟ್ಯಾಸಲ್, ಟೆರಾಕೋಟ್, ಬೀಡ್ಸ್, ಸ್ಟೋನ್ಸ್, ರಿಬ್ಬನ್ ಜ್ಯುವೆಲ್ಲರಿ ಹೀಗೆ ಹಲವಾರು ವಿಧದ ಆಭರಣ ಕಾಣಸಿಗುತ್ತದೆ. ಯೂಟ್ಯೂಬ್‌ನಲ್ಲಿ ನೋಡಿ ಅಥವಾ ತರಬೇತಿ ಪಡೆದು ಇಂಥ ಆಭರಣ ತಯಾರಿಸಿ ಮಾರಬಹುದು.

4.. ಆನ್‌ಲೈನ್ ಟ್ಯೂಷನ್: ಈಗಂತೂ ಆನ್‌ಲೈನ್ ಕ್ಲಾಸ್‌ಗಳಿಗೆ ಹೆಚ್ಚಿನ ಬೇಡಿಕೆ ಬಂದುಬಿಟ್ಟಿದೆ. ಲಾಕ್‌ಡೌನ್‌ ಸಮಯದಲ್ಲಿ ಶಿಕ್ಷಕರು ಮನೆಯಿಂದಲೇ ಪಾಠ ಮಾಡಿದ್ರೆ, ಮಕ್ಕಳು ಮನೆಯಲ್ಲಿ ಕೂತು ಪಾಠ ಕಲಿಯುತ್ತಿದ್ದಾರೆ. ನಿಮಗೂ ಟೀಚಿಂಗ್‌ನಲ್ಲಿ ಆಸಕ್ತಿ ಇದ್ದಲ್ಲಿ ಆನ್‌ಲೈನ್ ಟ್ಯೂಷನ್‌ನ ಲಾಭ ಪಡೆಯಿರಿ. ಯ್ಯೂಟೂಬ್ ಚಾನೆಲ್ ಶುರು ಮಾಡಿ, ಅದರಲ್ಲಿ ನಿಮಗೆ ಆಸಕ್ತಿ ಇರುವ ವಿಷಯದ ಬಗ್ಗೆ ಟ್ಯೂಷನ್ ನೀಡಿ.

5.. ಹೊಲಿಗೆ: ಹಿಂದಿನ ಕಾಲದಲ್ಲಿ ಹೆಣ್ಣು ಮಕ್ಕಳಿಗೆ ಅರ್ಧದಲ್ಲೇ ವಿದ್ಯಾಭ್ಯಾಸ ಮೊಟಕುಗೊಳಿಸಿ, ಬಟ್ಟೆ ಹೊಲಿದು ಹೊಟ್ಟೆ ತುಂಬಿಸಿಕೊಳ್ಳಲಿ ಎಂದು ಹೊಲಿಗೆ ಕ್ಲಾಸಿಗೆ ಸೇರಿಸಿಬಿಡುತ್ತಿದ್ದರು. ಆದ್ರೆ ಈಗ ವಿದ್ಯಾವಂತರೂ ಕೂಡ ಹೊಲಿಗೆ ಕಲಿಯಲು ಉತ್ಸುಕರಾಗಿದ್ದಾರೆ. ಏಕೆಂದರೆ ಮಾರುಕಟ್ಟೆಯಲ್ಲಿ ಡಿಸೈನ್ ಡಿಸೈನ್ ಬಟ್ಟೆಗಳಿಗೆ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ಮನೆಯಲ್ಲೇ ಕೂತು ಫ್ಯಾಷನೇಬಲ್ ಡ್ರೆಸ್ ತಯಾರಿಸಿ ಮಾರಿದರೆ ಉತ್ತಮ ಲಾಭ ಗಳಿಸಬಹುದು.

ಮನೆಯಲ್ಲೇ ಕೂತು ಹೊಲಿಗೆ, ಆನ್‌ಲೈನ್ ಟ್ಯೂಷನ್, ಆಭರಣ ತಯಾರಿ, ಹೋಮ್ ಕ್ಯಾಟರಿಂಗ್, ಗಾರ್ಡೆನಿಂಗ್ ಮಾಡಿದ್ರೆ ಸಾಲದು. ಅದರ ಪ್ರಮೋಷನ್ ಮಾಡುವುದು ತುಂಬಾ ಇಂಪಾರ್ಟೆಂಟ್. ಇವತ್ತು ಸೋಶಿಯಲ್ ಮೀಡಿಯಾ ತುಂಬಾ ಸ್ಪೀಡಾಗಿದೆ. ವಿಶ್ವದಲ್ಲಿ ಏನೇನು ನಡಿಯುತ್ತಿದೆ ಎಂಬುದನ್ನ ಕೂತಲ್ಲೇ ವೀಕ್ಷಿಸಬಲ್ಲೆವು. ಎಲ್ಲೋ ರೆಡಿಯಾಗುವ ವಸ್ತುವನ್ನ ಆನ್‌ಲೈನ್‌ನಲ್ಲಿ ಆರ್ಡರ್ ಹಾಕಿ, ಮನೆಗೆ ತರಿಸಿಕೊಳ್ಳಬಲ್ಲೆವು. ಅಂತೆಯೇ ನಿಮ್ಮ ಪ್ರಾಡಕ್ಟ್‌ಗಳ ಮಾರಾಟಕ್ಕಾಗಿ ಸೋಶಿಯಲ್ ಮೀಡಿಯಾ ಬಳಸಿಕೊಳ್ಳಿ.

ನಿಮ್ಮ ಪ್ರಾಡಕ್ಟ್‌ಗೆ ಸಂಬಂಧಪಟ್ಟ, ವಾಟ್ಸಪ್ ಗ್ರೂಪ್, ಫೇಸ್‌ಬುಕ್ ಗ್ರೂಪ್‌ಗೆ ಜಾಯ್ನ್ ಆಗಿ ನಿಮ್ಮ ಪ್ರಾಡಕ್ಟ್ ಪ್ರಮೋಟ್ ಮಾಡಿಕೊಳ್ಳಿ. ಇದರ ಜೊತೆ ನಿಮ್ಮ ವಸ್ತುಗಳ ಬೆಲೆಯನ್ನೂ ದಾಖಲಿಸಿ. ಜನರಿಗೆ ನಿಮ್ಮ ಪ್ರಾಡಕ್ಟ್ ಇಷ್ಟವಾದರೆ, ಆನಲೈನ್‌ ಮೂಲಕವೇ ಲಾಭ ಗಳಿಸಬಹುದು.

ಶ್ರಾವಣಿ ಸೋಮಯಾಜಿ, ಕರ್ನಾಟಕ ಟಿವಿ

ಲೋನ್ ಅಪ್ಲೈ ಮಾಡೋದು ಹೇಗೆ..? ಪ್ರಧಾನ ಮಂತ್ರಿ ಆವಾಸ್ ಯೋಜನೆ ಲಾಭ ಪಡೆಯೋದು ಹೀಗೆ..? ಯಾವ ಬ್ಯಾಂಕ್ ಸೇಫ್ ಅಲ್ಲ..? ಎಲ್ಲಾ ರೀತಿಯ ಹಣಕಾಸಿನ ಮಾಹಿತಿಗಾಗಿ ಈ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.. ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ..

https://indianmoney.com/ffc

- Advertisement -

Latest Posts

Don't Miss