Hubli News: ಹುಬ್ಬಳ್ಳಿ: ಇಂದು ಹುಬ್ಬಳ್ಳಿಯಲ್ಲಿ ಮಾತನಾಡಿರುವ ಸಚಿವ ಸಂತೋಷ್ ಲಾಡ್, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಯಾವ ರಾಜಕೀಯ ಪಕ್ಷ, ನಾಯಕರೂ ಶಾಶ್ವತ ಇಲ್ಲಾ. ಶಾಶ್ವತ ಇರೋದು ದೇಶದ ಜನ ಹಾಗೂ ಸಂವಿಧಾನ ಅಷ್ಟೇ. ಅದಕ್ಕೆ ಧಕ್ಕೆ ತರುವಂತ ಕೆಲಸ ಬಿಜೆಪಿ ಅವರು ಮಾಡ್ತಾ ಇದ್ದಾರೆ ಎಂದು ಸಂತೋಷ್ ಲಾಡ್ ಹೇಳಿದ್ದಾರೆ.
ಅಮಿತ್ ಶಾ ಜೊತೆ ವೇದಿಕೆ ಹಂಚಿಕೊಂಡ ಡಿಕೆಶಿ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಸಂತೋಷ್ ಲಾಡ್, ಅವರನ್ನೇ ಕೇಳಬೇಕು, ಅದು ಅವರ ವಿಚಾರ. ನಾನು ಅದಕ್ಕೆ ಪ್ರತಿಕ್ರಿಯೆ ನೀಡಲ್ಲ. ಅವರು ಕರೆದಿದ್ದಾರೆ, ಅವರು ಹೋಗಿದ್ದಾರೆ. ಸದ್ಗುರು ಅವರ ಸಿದ್ದಾಂತ ನಾವು ಒಪ್ಪುತ್ತೇವೆ. ನೆನ್ನೆ ನಡೆದಿದ್ದು ಶಿವನ ವೇದಿಕೆ, ಅದರಲ್ಲಿ ರಾಜಕೀಯವಾಗಿ ಮಾತನಾಡಿದ್ದು ಕೇಳಿದ್ದೇನೆ. ಆ ಮಾತುಗಳು ಸರಿಯಲ್ಲ, ಇಂಡೈರೆಕ್ಟಗಿ ಬಿಜೆಪಿ ಪರವಾಗಿ ಮಾತನಾಡೋದು ಸರಿಯಲ್ಲ. ಸರ್ಕಾರದ ಅಧಿಕಾರಿಗಳು ಬಂದಾಗ ಹಾಗೆ ಮಾತನಾಡೋದು ಸರಿಯಲ್ಲ.
ಆ ವೇದಿಕೆ ಬಿಟ್ಟು ಬೇರೆ ಕಡೆ ಮಾತನಾಡಿದ್ರು ನಡೀತಿತ್ತು. ಭಯೋತ್ಪಾದನೆ ಬಗ್ಗೆ ಇಂತಹ ವೇದಿಕೆಯಲ್ಲಿ ಮಾತನಾಡಿದ್ದು ಸರಿಯಲ್ಲ ಎಂದು ಸಂತೋಷ್ ಲಾಡ್ ಹೇಳಿದ್ದಾರೆ.
ತೋರಿಸಿಕೊಳ್ಳೋದಕ್ಕೆ ಮಾತ್ರ ರಾಜಕೀಯದಲಿಲ್ಲ ಅನ್ನೋ ಹಾಗೆ ಇದ್ದು ಹೀಗೆ ಮಾತನಾಡೋದು ಸರಿಯಲ್ಲ.
ನಾನು ಇದನ್ನ ಖಂಡನೇ ಮಾಡ್ತೇನೆ. ನನಗೆ ಅವರ ಬಗ್ಗೆ ಅಪಾರ ಗೌರವ ಇದೆ, ಆದ್ರೆ ನೆನ್ನೆ ಮಾತನಾಡಿದ್ದು ಆ ವೇದಿಕೆಯಲ್ಲಿ ಮಾತನಾಡೊ ಮಾತಲ್ಲ. ಉತ್ತರ ಭಾರತದಲ್ಲಿ ಮೌಢ್ಯತೆ ಬಗ್ಗೆ ಮಾತನಾಡೋದು. ಸಾರ್ವಜನಿಕರ ಬಗ್ಗೆ ಚಿಂತನೆ ಬಿಟ್ಟು ಮೌಢ್ಯತೆ ಬಗ್ಗೆ ಪ್ರಮೋಟ್ ಮಾಡೊತರ ಇದೆ. ನಾವು ಯಾವ ಕಡೆ ಹೋಗ್ತಾ ಇದ್ದೇವೆ ಅನ್ನೋದೇ ಗೊತ್ತಾಗ್ತಿಲ್ಲ ಎಂದು ಸಂತೋಷ್ ಲಾಡ್ ಹೇಳಿದ್ದಾರೆ.
ಮಹದಾಯಿ ನ್ಯಾಯಮಂಡಳಿ ವಿಸ್ತರಣೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಸಂತೋಷ್ ಲಾಡ್, ನಾವು ಮಾತನಾಡಿದ್ರೆ ಟೀಕೆ ಮಾಡಿದಂತತ್ತಾಗುತ್ತೆ, ನಮಗೆ ಬೇರೆ ದಾರಿನೇ ಇಲ್ಲಾ. ನಾವಿರೋದೇ ಎರ್ಡಮೂರು ರಾಜ್ಯಗಳಲ್ಲಿ. ಬಿಜೆಪಿ ವಿರುದ್ಧ 8-10 ರಾಜ್ಯಗಳಲ್ಲಿ ಇದ್ದಾರೆ. ಉಳಿದೆಲ್ಲ ಕಡೆಗಳಲ್ಲಿ ಬಿಜೆಪಿ ಅವರೇ ಇದ್ದಾರೆ.
ಅವರು ಏನು ಮಾಡ್ತಾರೆ ಗೊತ್ತೇ ಆಗ್ತಿಲ್ಲ. ದೇಶದಲ್ಲಿ ಕಾನೂನು ರಾತ್ರೋರಾತ್ರಿ ಬದಲಾವಣೆ ಮಾಡ್ತಾರೆ.
ಎಲ್ಲಿಗೆ ಹೋಗುತ್ತಾ ಇದೆ ದೇಶದ ವ್ಯವಸ್ಥೆ ಗೊತ್ತಿಲ್ಲ. ದೇಶದ ಸಂವಿಧಾನ ಬಿಟ್ಟು ಯಾವ ರಾಜಕೀಯ ಪಕ್ಷ ಸಹ ಇಲ್ಲಾ. ಸಂವಿಧಾನ ಬದಲಾವಣೆ ಮಾಡ್ತೇವೆ ಅನ್ನೋದರಿಂದ ಯಾರಿಗೂ ಲಾಭ ಇಲ್ಲಾ.
ಹಿಂದೂ ರಾಷ್ಟ್ರ, ಹಿಂದೂಸ್ಥಾನ ಎಂಬ ಪದಗಳಿಂದ ಜನರಿಗೆ ಆಕರ್ಷಣೆ ಮಾಡೋದನ್ನ ಬಿಟ್ರೆ ಅಭಿವೃದ್ಧಿ ಇಲ್ಲಾ. ಜನ ಅಭಿವೃದ್ಧಿ ಬಿಟ್ಟ ಇದರ ಹಿಂದೇನೆ ಹೋಗ್ತಾ ಇದ್ದಾರೆ. ಸರ್ಕಾರಗಳು ಹರಾಸಾಹಸ ಮಾಡಿ ಅಂತಹದನ್ನೇ ಪ್ರಮೋಟ್ ಮಾಡೋದು ಬೇರೆ ಏನನ್ನು ಕೇಳಬಾರದು. ಹೊರ ದೇಶಗಳಲ್ಲಿ ಏನಾಗ್ತಿದೆ ಅಂತ ಕೆಲವು ಮಾಧ್ಯಮಗಳು ತಿಳಿಸೋದೇ ಇಲ್ಲಾ. ನಮ್ಮ ದೇಶದಲ್ಲಿ ವೈಚಾರಿಕತೆಯನ್ನ ಪ್ರಮೋಟ್ ಮಾಡೋದು ನಡಿತಾ ಇದೆ. ಇದನ್ನ ಬಹಳ ಪ್ಲಾನ್ ಮಾಡಿಕೊಂಡು ಮಾಡಲಾಗ್ತಿದೆ. ಇದರಿಂದ ಯಾರಿಗೂ ಲಾಭ ಇಲ್ಲಾ ಎಂದು ಸಂತೋಷ್ ಲಾಡ್ ಹೇಳಿದ್ದಾರೆ.