Hubli- Dharwad News: ಹುಬ್ಬಳ್ಳಿ-ಧಾರವಾಡ: ಭಾರತದಲ್ಲಿ ವಿಶ್ವಕಪ್ ಹವಾ ಹೇಗೆ ಜೋರಾಗಿದೆ. ಅಭಿಮಾನಿಗಳು ಈ ಬಾರಿ ಕಪ್ ನಮ್ದೇ ಎನ್ನುತ್ತಿದ್ದಾರೆ. ಆದರೆ, ಹುಬ್ಬಳ್ಳಿ ಧಾರವಾಡ (Hubbali Dharwad) ಕಮಿಷನರೇಟ್ ವ್ಯಾಪ್ತಿಯಲ್ಲಿ ಕ್ರಿಕೆಟ್ ಬೆಟ್ಟಿಂಗ್ ಭರಾಟೆ ಜೋರಾಗಿಯೇ ನಡೆಯುತ್ತಿದೆ. ಕಳೆದ 15 ದಿನಗಳಲ್ಲಿ 29 ಪ್ರಕರಣಗಳನ್ನು ದಾಖಲಿಸಿದ ಪೊಲೀಸರು, 42 ಮಂದಿಯನ್ನು ಬಂಧಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಹುಬ್ಬಳ್ಳಿ ಧಾರವಾಡದ ಪೊಲೀಸ್ ಆಯುಕ್ತ ರೇಣುಕಾ ಸುಕುಮಾರ, ಕಳೆದ ಹದಿನೈದು ದಿನದಲ್ಲಿ ಹುದಾ ಕಮಿಷನರೇಟ್ ವ್ಯಾಪ್ತಿಯಲ್ಲಿ ಬೆಟ್ಟಿಂಗ್ ಪ್ರಕರಣ ಸಂಬಂಧ 29 ಕೇಸ್ ದಾಖಲಿಸಿ 42 ಜನರನ್ನು ಅರೆಸ್ಟ್ ಮಾಡಿದ್ದಾರೆ. ಭಾರತ ಫೈನಲ್ ತಲುಪಿದೆ. ಹೀಗಾಗಿ ನಾವು ಮತ್ತಷ್ಟು ಎಚ್ಚರ ವಹಿಸಬೇಕಾಗಿದೆ ಎಂದರು.
ಕ್ರೀಕೆಟ್ ಬೆಟ್ಟಿಂಗ್ ಬಗ್ಗೆ ಜಾಸ್ತಿ ನಿಗಾವಹಿಸಲಾಗಿದೆ ಎಂದ ರೇಣುಕಾ ಸುಕುಮಾರ, ಸೈಬರ್ ಬೇಸ್ ಆಧಾರದ ಮೇಲೆ ಪೊಲೀಸರು ನಿಗಾ ಇಟ್ಟಿದ್ದಾರೆ. ಆ್ಯಪ್ಗಳ ಮೇಲೆ ನಾವು ನಿಗಾ ಇಟ್ಟಿದ್ದು, ಬೆಟ್ಟಿಂಗ್ ಆಡುವ ತರಹದಲ್ಲಿ ಪೊಲೀಸರು ಹೋಗಿ ಕೆಲವರನ್ನು ಅರೆಸ್ಟ್ ಮಾಡಿದ್ದಾರೆ ಎಂದರು.
ದೀಪಾವಳಿ ಹಿನ್ನೆಲೆ ಜೂಜಾಡುತ್ತಿದ್ದ 731 ಮಂದಿ ಅರೆಸ್ಟ್
ದೀಪಾವಳಿ ಹಬ್ಬ ಹಿನ್ನೆಲೆ ಪೊಲೀಸರು ಹದ್ದಿನ ಕಣ್ಣಿಟ್ಟು ಜೂಜಾಡುತ್ತಿರುವವರಿಗೆ ಬಿಸಿ ಮುಟ್ಟಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಆಯುಕ್ತರು, ದೀಪಾವಳಿ ಹಿನ್ನೆಲೆ ಜೂಜಾಟ ಆಡುತ್ತಿದ್ದ 731 ಜನರನ್ನು ಬಂಧಿಸಲಾಗಿದೆ. ಬಂಧಿತರಿಂದ 12 ಲಕ್ಷ ರೂ. ವಶಕ್ಕೆ ಪಡೆಯಲಾಗಿದೆ. ಹುಬ್ಬಳ್ಳಿ-ಧಾರವಾಡ ಪೊಲೀಸರು ಹದಿನೈದು ದಿನಗಳಲ್ಲಿ ಒಟ್ಟು 117 ಗ್ಯಾಂಬ್ಲಿಂಗ್ ಕೇಸ್ ದಾಖಲಿಸಿದ್ದಾರೆ.
ಧಾರವಾಡದಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವ ಸಾವಿರಾರು ಜನ ಅನೇಕ ತಿಂಗಳಿಂದ ರೇಷನ್ ಪಡೆದೇ ಇಲ್ಲ!
ಉಂಡ ಮನೆಗೆ ದ್ರೋಹ ಜ್ಯುವೆಲ್ಲರಿ ಶಾಪ್ನಿಂದ ಕೆಜಿ ಕೆಜಿ ಚಿನ್ನ, ಬೆಳ್ಳಿ ಕದ್ದ ಮನೆ ಕೆಲಸದಾಳು