Friday, July 4, 2025

Latest Posts

ಪಾಕ್‌ ವಿರುದ್ಧ ಭಾರತ “ಸ್ಪಷ್ವವಾಗಿ” ಗೆದ್ದು ಬೀಗಿದೆ : ವಿಶ್ವ ಪ್ರಸಿದ್ಧ ಯುದ್ಧ ವಿಶ್ಲೇಷಕನ ಅಧ್ಭುತ ವ್ಯಾಖ್ಯಾನ..!

- Advertisement -

ಆಪರೇಷನ್‌ ಸಿಂಧೂರ್‌ ವಿಶೇಷ :

ನವದೆಹಲಿ : ಪಹಲ್ಗಾಮ್‌ ದಾಳಿಯ ಪ್ರತೀಕಾರವಾಗಿ ಆಪರೇಷನ್‌ ಸಿಂಧೂರ್‌ ಕಾರ್ಯಾಚರಣೆ ನಡೆಸಿ ಪಾಕಿಸ್ತಾನದ ಭಯೋತ್ಪಾದಕ ನೆಲೆಗಳನ್ನು ಧ್ವಂಸ ಮಾಡಿತ್ತು. ಅಲ್ಲದೆ ಪಾಕ್‌ ಆಕ್ರಮಿತ ಕಾಶ್ಮೀರ ಹಾಗೂ ಪಾಕಿಸ್ತಾನದ 9 ಭಯೋತ್ಪಾದಕ ತರಬೇತಿ ಕೇಂದ್ರಗಳ ಮೇಲೆ ಏರ್‌ಸ್ಟ್ರೈಕ್‌ ನಡೆಸಿ 100ಕ್ಕೂ ಅಧಿಕ ಉಗ್ರರನ್ನು ಹೊಡೆದುರುಳಿಸುವ ಮೂಲಕ ಭಾರತೀಯ ಸೇನೆ ತನ್ನ ಪರಾಕ್ರಮ ಮೆರೆದಿತ್ತು. ಕೇವಲ 20 ನಿಮಿಷಗಳಲ್ಲಿ ಈ ಮಹತ್ವಾಕಾಂಕ್ಷಿಯ ಆಪರೇಷನ್‌ ಮಾಡಿ ಮುಗಿಸುವ ಮೂಲಕ ಜಗತ್ತಿಗೆ ಅಚ್ಚರಿ ಮೂಡಿಸಿತ್ತು.

ದಿಗ್ವಿಜಯ ಸಾಧಿಸಿರುವ ಆಪರೇಷನ್‌ ಸಿಂಧೂರ್‌..

ಅಲ್ಲದೆ ಜಾಗತಿಕ ಮಟ್ಟದಲ್ಲೂ ಸಹ ಈ ಆಪರೇಷನ್‌ ಸಿಂಧೂರ್‌ ಕಾರ್ಯಾಚರಣೆಯ ಕುರಿತು ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ನಡುವೆ ವೈರಿಗಳ ವಿರುದ್ಧ ದಿಗ್ವಿಜಯ ಸಾಧಿಸಿರುವ ಭಾರತದ ಕುರಿತು ಆಸ್ಟ್ರೇಲಿಯಾ ಮಿಲಿಟರಿ ಇತಿಹಾಸಕಾರ ಟಾಮ್‌ ಕೂಪರ್‌, ತಮ್ಮದೇ ಆದ ಶೈಲಿಯಲ್ಲಿ ಇಡೀ ಸಂಘರ್ಷ ಹಾಗೂ ಕಾರ್ಯಾಚರಣೆಯ ಬಗ್ಗೆ ವಿಶ್ಲೇಷಿಸಿರುವುದು ಇನ್ನಷ್ಟು ಸಂಚಲನಕ್ಕೆ ಕಾರಣವಾಗಿದೆ.

ಭಾರತವು ಸ್ಪಷ್ಟವಾಗಿ ಗೆಲುವು ಕಂಡಿದೆ..

ಇನ್ನೂ ಪ್ರಮುಖವಾಗಿ ಉಗ್ರರ ವಿರುದ್ಧ ಭಾರತ ನಡೆಸಿರುವ ಆಪರೇಷನ್‌ ಸಿಂಧೂರ್‌ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ ಉಗ್ರ ತಾಣಗಳು ಧ್ವಂಸಗೊಂಡಿರುವುದು ಸತ್ಯವಾಗಿದೆ. ಅಲ್ಲದೆ ಭಾರತ ನಡೆಸಿದ ಪರಿಣಾಮಕಾರಿ ದಾಳಿಗೆ ಅಲ್ಲಿನ ಪರಮಾಣು ಶಸ್ತ್ರಾಸ್ತ್ರ ಸಂಗ್ರಹಣಾ ಸ್ಥಳಗಳಿಗೆ ನಷ್ಟವಾಗಿರುವುದು ನಿಜವಾಗಿದೆ. ಇದರಿಂದಲೇ ತಿಳಿಯುತ್ತದೆ ಭಾರತವು ಪಾಕ್‌ ವಿರುದ್ಧದ ಕಾರ್ಯಾಚರಣೆಯಲ್ಲಿ ಸ್ಪಷ್ಟವಾಗಿ ಗೆಲುವು ಕಂಡಿದೆ ಎಂದು ಕೂಪರ್ ಹೇಳಿರುವುದು ಮತ್ತಷ್ಟು‌ ಮಹತ್ಚ ಪಡೆದುಕೊಂಡಿದೆ. ಭಾರತ-ಪಾಕಿಸ್ತಾನ ನಡುವಿನ ಸಂಘರ್ಷವನ್ನು ಪಾಶ್ಚಿಮಾತ್ಯ ರಾಷ್ಟ್ರಗಳು ತಪ್ಪಾಗಿ ಗ್ರಹಿಸಿವೆ ಎಂದು ಅವರು ಕಿಡಿ ಕಾರಿದ್ದಾರೆ.ಒಂದು ದೇಶ ಮತ್ತೊಂದು ದೇಶದ ಪರಮಾಣು ಶಸ್ತ್ರಾಸ್ತ್ರ ತಾಣಗಳ ಮೇಲೆ ದಾಳಿ ನಡೆಸಿದರೆ ಮತ್ತು ದಾಳಿಗೊಳಗಾದ ದೇಶ ಪ್ರತಿದಾಳಿ ನಡೆಸುವಲ್ಲಿ ವಿಫಲವಾದರೆ ಅದನ್ನು ದಾಳಿ ನಡೆಸಿದ ರಾಷ್ಟ್ರದ ಗೆಲುವು ಎಂದೇ ಪರಿಗಣಿಸಬೇಕು. ಹೀಗಾಗಿ ಭಾರತದ ಆಪರೇಷನ್‌ ಸಿಂಧೂರ ಸೇನಾ ಕಾರ್ಯಾಚರಣೆ ಸಂಪೂರ್ಣವಾಗಿ ಯಶಸ್ವಿಯಾಗಿದೆ ಎಂದು ಅವರು ಬಣ್ಣಿಸಿದ್ದಾರೆ.

ಭಾರತದಿಂದ ಸ್ವಂತ ಬಲದ ಮೇಲೆ ಪಾಕಿಸ್ತಾನಿ ವಾಯು ನೆಲೆಗಳ ಮೇಲೆ ದಾಳಿ..

ಭಾರತವು ನ್ಯೂಕ್ಲೀಯರ್‌ ಸಂಗ್ರಹಣಾ ಕೇಂದ್ರದ ಕಡೆ ದಾಳಿ ನಡೆಸುವಾಗ, ಪಾಕಿಸ್ತಾನಕ್ಕೆ ಆ ಸಾಮರ್ಥ್ಯವಿಲ್ಲದೆ ಕಂಗಾಲಾಗಿ ಹೋಗಿದೆ, ಹೀಗಾಗಿ ಭಾರತದ ಮೇಲೆ ದಾಳಿಗೆ ಪರಿತಪಿಸಿದರೂ ಅದು ಸಾಧ್ಯವಾಗಲಿಲ್ಲ. ಭಾರತ ನಡೆಸಿದ ದಾಳಿಯಲ್ಲಿ ಪ್ರಮುಖವಾಗಿ ಪಾಕಿಸ್ತಾನದ ವಾಯು ನೆಲೆಗಳಿಗೆ ಅಪಾರ ಹಾನಿಯಾಗಿದೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನದ ವಿರುದ್ಧ ಭಾರತವು ತನ್ನ ಗೆಲುವನ್ನು ದಾಖಲಿಸಿದೆ ಎಂದು ಅವರು ವಿಶ್ಲೇಷಿಸಿದ್ದಾರೆ.

ಭಾರತ ಮತ್ತೊಮ್ಮೆ ಪಾಕಿಸ್ತಾನವನ್ನು ಗುರಿಯಾಗಿಸಿಕೊಂಡಿತು ಮತ್ತು ವಾಯುಪಡೆಯು ಬ್ರಹ್ಮೋಸ್ ಮತ್ತು ಸ್ಕಾಲ್ಪ್‌ ಈಜಿ ಕ್ಷಿಪಣಿಗಳನ್ನು ಬಳಸಿಕೊಂಡು ಹಲವಾರು ಪಾಕಿಸ್ತಾನಿ ವಾಯುನೆಲೆಗಳನ್ನು ಗುರಿಯಾಗಿಸಿಕೊಂಡಿತು. ಈ ಅವಧಿಯಲ್ಲಿ, ಭಾರತದ ಸುಖೋಯ್ 30 ಎಂಕೆಐ, ಮಿರಾಜ್ 2000 ಮತ್ತು ರಫೇಲ್ ಪಾಕಿಸ್ತಾನಕ್ಕೆ ಭಾರಿ ಹಾನಿಯನ್ನುಂಟುಮಾಡಿದವು ಎಂದು ಅವರು ಹೇಳಿತ್ತಾರೆ. ಮುಖ್ಯವಾಗಿ ಭಾರತವು ತನ್ನ ಸ್ವಂತ ಬಲದ ಮೇಲೆ ಪಾಕಿಸ್ತಾನದ ವಾಯು ನೆಲೆಗಳ ಮೇಲೆ ದಾಳಿ ನಡೆಸಿದೆ. ಆದರೆ ಪಾಕಿಸ್ತಾನಕ್ಕೆ ಇದು ಸಾಧ್ಯವಾಗಲಿಲ್ಲ, ಅಂದರೆ ಪಾಕಿಸ್ತಾನದ ಪ್ರತಿಬಂಧಕ ಶಕ್ತಿಯೇ ವಿಫಲವಾಗಿದ. ಅಲ್ಲದೆ ಅದರ ಏರ್‌ ಸೆಕ್ಯುರಿಟಿ ಯೂನಿಟ್‌ ಸಂಪೂರ್ಣ ಕುಸಿದಿದೆ ಎಂದು ಟಾಮ್‌ ಕೂಪರ್‌ ಅಭಿಪ್ರಾಯಪಟ್ಟಿದ್ದಾರೆ.

ಭಾರತವನ್ನು ತಡೆಯಲು ಪಾಕಿಸ್ತಾನ ಮಾಡಿದ ಪ್ರಯತ್ನಗಳು ವಿಫಲ..

ಇನ್ನೂ ಮೇ 10 ರಂದು, ಭಾರತೀಯ ವಾಯು ಸೇನೆಯು ಪಾಕ್ ವಾಯುಪಡೆಯ ನೆಲೆಗಳನ್ನು ಮಾತ್ರವಲ್ಲದೆ, ಸರ್ಗೋಧಾ ಸಂಕೀರ್ಣದ ಭಾಗವಾಗಿರುವ ಮುಷಾಫ್ ವಾಯುನೆಲೆಯಲ್ಲಿರುವ ಪಾಕಿಸ್ತಾನದ ಪರಮಾಣು ಶಸ್ತ್ರಾಸ್ತ್ರ ಸಂಗ್ರಹಣಾ ಸ್ಥಳದ ಎರಡೂ ಪ್ರವೇಶದ್ವಾರಗಳನ್ನೂ ಸಹ ಹೊಡೆದು ಹಾಕಿತ್ತು. ಪಾಕಿಸ್ತಾನಿಗಳು ಸುಲಭವಾಗಿ ತಲೆಬಾಗುವ ಅಥವಾ ಸೋಲನ್ನು ಬಹಿರಂಗವಾಗಿ ಒಪ್ಪಿಕೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲ. ಯಾವಾಗ ವಾಯುನೆಲೆಯ ಜೊತೆಗೆ ಶಸ್ತ್ರಾಸ್ತ್ರ ಸಂಗ್ರಹಣಾ ಘಟಕದ ಮೇಲೆ ಭಾರತೀಯ ಕ್ಷಿಪಣಿಗಳು ದಾಳಿ ಮಾಡಿದಾಗ ಬೇರೆ ಯಾವುದೇ ಆಯ್ಕೆ ಇರಲಿಲ್ಲ. ಹೀಗಾಗಿ ಪಾಕಿಸ್ತಾನ ಭಾರತಕ್ಕೆ ಕರೆ ಮಾಡಿ ದಾಳಿ ನಿಲ್ಲಿಸಲು ಮನವಿ ಮಾಡಿತು.ಭಾರತವನ್ನು ತಡೆಯಲು ಪಾಕಿಸ್ತಾನ ಮಾಡಿದ ಎಲ್ಲಾ ಪ್ರಯತ್ನಗಳು ವಿಫಲವಾಗಿವೆ ಎಂದು ಮಧ್ಯಪ್ರಾಚ್ಯ ಮತ್ತು ದಕ್ಷಿಣ ಏಷ್ಯಾ ವಾಯು ಯುದ್ಧಗಳ ವಿಶ್ವ ಪ್ರಸಿದ್ಧ ಇತಿಹಾಸಕಾರ ಟಾಮ್‌ ಕೂಪರ್‌ ತಮ್ಮ ವಿಶ್ಲೇಷಣೆಯಲ್ಲಿ ತಿಳಿಸಿದ್ದಾರೆ.

ಇನ್ನೂ ಪ್ರಮುಖವಾಗಿ ಭಾರತದ ಶಾಂತಿಗೆ ಭಂಗ ತರುವ ಕೆಲಸ ಮಾಡುತ್ತಲೇ ಬರುತ್ತಿರುವ ಪಾಕಿಸ್ತಾನಕ್ಕೆ ಭಾರತವು ಮುಟ್ಟಿ ನೋಡಿಕೊಳ್ಳುವ ಹಾಗೆಯೇ ತನ್ನ ಹೊಡೆತವನ್ನು ನೀಡಿದೆ. ಆಪರೇಷನ್‌ ಸಿಂಧೂರ್‌ ಸೇರಿದಂತೆ ಈ ಹಿಂದಿನ ಎಲ್ಲ ಕಾರ್ಯಾಚರಣೆಗಳಿಂದ ಭಾರತವು ಜಾಗತಿಕವಾಗಿ ಗುರುತಿಸಿಕೊಳ್ಳುವಂತಾಗಿದೆ. ಅದರಲ್ಲೂ ಪಾಕಿಸ್ತಾನದ ವಿರುದ್ಧ ಭಯೋತ್ಪಾದನೆ ಹೋರಾಟಕ್ಕೆ ಮುಂದಾಗಿ ಉಗ್ರರ ಮಟ್ಟ ಹಾಕಿರುವುದು ಜಾಗತಿಕ ಮಟ್ಟದಲ್ಲಿ ಭಾರತದ ಶಕ್ತಿ ಇನ್ನಷ್ಟು ಹೆಚ್ಚಾಗಿದ್ದು, ಭಾರತ ತೆಗದುಕೊಂಡ ದಿಟ್ಟ ನಿರ್ಧಾರವನ್ನು ಬಲಿಷ್ಠ ರಾಷ್ಟ್ರಗಳು ಬೆಂಬಲಿಸಿರುವುದು ಭಾರತಕ್ಕೆ ಮತ್ತಷ್ಟು ಬಲ ಬಂದಂತಾಗಿದೆ.

- Advertisement -

Latest Posts

Don't Miss