International News: ಕೆಲ ದಿನಗಳ ಹಿಂದಷ್ಟೇ ಭಾರತದಲ್ಲಿ ಕೆಲವರಿಗೆ ಹಕ್ಕಿಜ್ವರ ಬಂದಿದೆ ಎಂದು ಹೇಳಲಾಗಿದ್ದು, ಇದೀಗ ವಿಶ್ವದಲ್ಲೇ ಮೊದಲ ಬಾರಿ ಹಕ್ಕಿಜ್ವರದಿಂದ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ. ಮೆಕ್ಸಿಕೋದಲ್ಲಿ ಓರ್ವ ವ್ಯಕ್ತಿ ಹಕ್ಕಿಜ್ವರದಿಂದ ಸಾವನ್ನಪ್ಪಿದ್ದಾನೆ.
ಭಾರತದಲ್ಲಿ ಆಂದ್ರಪ್ರದೇಶ, ಮಹಾರಾಷ್ಟ್ರ, ಕೇರಳ, ಜಾರ್ಖಂಡ್‌ನಲ್ಲಿ ಹಕ್ಕಿಜ್ವರದ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ಹಕ್ಕಿಜ್ವರ ಹಾಲು ಮತ್ತು ಹಸುವಿನಿಂದ ಹರಡುತ್ತದೆ ಎಂದು ಹೇಳಲಾಗಿದ್ದು, ಎಚ್1ಎನ್1 ವೈರಸ್‌ನ್ನೇ ಹಕ್ಕಿಜ್ವರ ಎಂದು ಹೇಳಲಾಗುತ್ತಿದೆ. ಮೊಟ್ಟೆ ಸೇವನೆಯಿಂದ ಕೂಡ ಈ ರೋಗ ಬರುವ ಸಾಧ್ಯತೆ ಇರುತ್ತದೆ. ಮೆಕ್ಸಿಕೋದಲ್ಲಿ 59 ವರ್ಷದ ವ್ಯಕ್ತಿ ಹಕ್ಕಿಜ್ವರದಿಂದ ಸಾವನ್ನಪ್ಪಿದ್ದಾರೆ.
ಈ ವ್ಯಕ್ತಿಗೆ ಜ್ವರ, ಉಸಿರಾಟದ ತೊಂದರೆ, ಅತಿಸಾರದ ರೋಗ ಲಕ್ಷಣಗಳಿತ್ತು. ಹಾಗಾಗಿ ಅಇವರನ್ನು ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ, ಈ ವ್ಯಕ್ತಿ ಸಾವನ್ನಪ್ಪಿದ್ದಾರೆ. ಆದರೆ ಇವರಿಗೆ ಈ ಮೊದಲೇ, ಮೂತ್ರಪಿಂಡ ಖಾಯಿಲೆ, ಬಿಪಿ, ಶುಗರ್ ಕೂಡ ಇತ್ತು. ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇದ್ದ ಕಾರಣ, ಬೇಗ ಸಾವನ್ನಪ್ಪಿರಬಹುದು ಎಂದು ಅಂದಾಜಿಸಲಾಗಿದೆ.
ನಾನು ಕುಪ್ಪುಸ್ವಾಮಿ ಮಗ, ಕರುಣಾನಿಧಿ ಮಗ ಆಗಿದ್ದರೆ ಗೆಲ್ಲುತ್ತಿದ್ದೆ: ಸೋತರೆಂದು ಟೀಕಿಸಿದವರಿಗೆ ಅಣ್ಣಾಮಲೈ ತಿರುಗೇಟು