ಭಜರಂಗ್ ಪುನಿಯಾ ಬೆನ್ನಲ್ಲೇ ಪದ್ಮಶ್ರೀ ಪ್ರಶಸ್ತಿ ಹಿಂದಿರುಗಿಸಿದ ಕುಸ್ತಿಪಟು ವೀರೇಂದ್ರ ಸಿಂಗ್

National News: ಮಹಿಳಾ ಕುಸ್ತಿಪಟು ಮೇಲೆ ಲೈಂಗಿಕ ಕಿರುಕುಳದ ಆರೋಪ ಬಂದಿದ್ದು, ಬಿಜೆಪಿ ನಾಯಕ ಆ ಕಿರುಕುಳ ಕೊಟ್ಟಿದ್ದಾನೆಂಬ ಆರೋಪವಿದೆ. ಆದರೆ ಬಿಜೆಪಿ ನಾಯಕ ಬ್ರಿಜಭೂಷಣ್ ಸಿಂಗ್ ಆಪ್ತ ಸಂಜಯ್‌ ಸಿಂಗ್‌ನನ್ನು ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷರಾಗಿ ಆಯ್ಕೆ ಮಾಡಿರುವ ಬಗ್ಗೆ, ಕುಸ್ತಿಪಟುಗಳು ಅಸಮಾಧಾನ ಹೊರಹಾಕಿದ್ದಾರೆ.

ಸಾಕ್ಷಿ ಮಲಿಕ್ ನಿನ್ನೆಯಷ್ಟೇ ಸುದ್ದಿಗೋಷ್ಠಿ ನಡೆಸಿ, ನಾನು ಕುಸ್ತಿಯಿಂದ ದೂರ ಉಳಿಯಲು ನಿರ್ಧರಿಸಿದ್ದೇನೆ ಎಂದು ಹೇಳಿದ್ದರು. ಭಜರಂಗ್ ಪುನಿಯಾ ಕೂಡ, ತನಗೆ ಬಂದ ಪ್ರಶಸ್ತಿಯನ್ನು ಹಿಂದಿರುಗಿಸಿದರು. ಅದೇ ರೀತಿ ಇಂದು ಇನ್ನೋರ್ವ ಕುಸ್ತಿಪಟು ವಿರೇಂದ್ರ ಸಿಂಗ್ ಕೂಡ, ತಮಗೆ ಬಂದ ಪದ್ಮಶ್ರೀ ಪ್ರಶಸ್ತಿಯನ್ನು ಹಿಂದಿರುಗಿಸಿದ್ದಾರೆ.

ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ವೀರೇಂದ್ರ ಸಿಂಗ್, ನನ್ನ ಸಹೋದರಿ ಸಾಕ್ಷಿ ಮಲೀಕ್ ಅವರ ಬಗ್ಗೆ ನನಗೆ ಹೆಮ್ಮೆ ಇದೆ. ನೀವೂ ನಿರ್ಧಾರ ತೆಗೆದುಕೊಳ್ಳಿ ಎಂದು ನಾನು ದೇಶದ ಅಗ್ರ ಆಟಗಾರರಿಗೂ ಕೂಡ ಹೇಳುತ್ತೇನೆ ಎಂದು ವೀರೇಂದ್ರ ಸಿಂಗ್ ಹೇಳಿದ್ದಾರೆ.

ಬಿಗ್‌ಬಾಸ್ ಮನೆಯಲ್ಲೇ ಪತಿ-ಪತ್ನಿ ಮಧ್ಯೆ ಡಿವೋರ್ಸ್ ಮಾತುಕತೆ..

ಕಿವಿಗೆ ಪೆಟ್ಟು ಬೀಳುವಷ್ಟು ಕೆಟ್ಟದಾಗಿ ಪತ್ನಿಗೆ ಹೊಡೆದ್ರಾ ವಿವೇಕ್ ಬಿಂದ್ರಾ..?

ಉಡುಪಿ ಕೃಷ್ಣಮಠಕ್ಕೆ ಭೇಟಿ ಕೊಟ್ಟ ನಟಿ ಸಾಯಿ ಪಲ್ಲವಿ

About The Author