ವೃದ್ದಿಮಾನ್ ಸಾಹಾಗೆ  ನಿರಾಕ್ಷೇಪಣಾ ಪತ್ರ

ಕೋಲ್ಕತ್ತಾ:  ಅನುಭವಿ ವಿಕೆಟ್ ಕೀಪರ್ ವೃದ್ದಿಮಾನ್ ಸಾಹಾಗೆ  ಅವರಿಗೆ ಬಂಗಾಳ ಕ್ರಿಕೆಟ್ ಸಂಸ್ಥೆ ಬೇರೆ ರಾಜ್ಯದ ಪರ ಆಡಲು ನಿರಾಕ್ಷೇಪಣಾ ಪತ್ರ ನೀಡಿದೆ. ಈ ಮೂಲಕ 15 ವರ್ಷಗಳ ಬಾಂಧವ್ಯವನ್ನು ಕಡಿತಗೊಳಿಸಿದ್ದಾರೆ.

ರಾಷ್ಟ್ರೀಯ ತಂಡದ ಪರ ಸಾಹಾ 40 ಟೆಸ್ಟ್  ಆಡಿದ್ದಾರೆ. ಅಕ್ಟೋಬರ್‍ಗೆ 38ನೇ ವರ್ಷಕ್ಕೆ ಕಾಲಿಡಲಿರುವ ಸಾಹಾ ಅವರಿಗೆ ಬಿಸಿಸಿಐ ಎರಡನೆ ವಿಕೆಟ್ ಕೀಪರ್ ಬೇಡ ಎಂದು ಹೇಳಿತ್ತು.

ನಂತರ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರನ್ನು  ಟೀಕಿಸಿದ್ದರು.

ರಾಷ್ಟ್ರೀಯ ತಂಡದಿಂದ ದೂರವಾದ ನಂತರ ಬಂಗಾಳ ತಂಡದಲ್ಲೂ ಸ್ಥಾನ  ಕಳೆದುಕೊಂಡಿದ್ದರು. ಮೂಲಗಳ ಪ್ರಕಾರ ಸಾಹಾ ತ್ರಿಪುರ ಪರ ಆಡಲು ಮನಸ್ಸು ಮಾಡಿದ್ದು  2.4 ಲಕ್ಷ ರೂ. ಬೇಡಿಕೆ ಇಟ್ಟಿದ್ದರು ಎಂದು ತಿಳಿದು ಬಂದಿದೆ.

 

 

 

 

 

 

About The Author