Saturday, December 6, 2025

Latest Posts

ಆಸ್ಕರ್ ಪ್ರಶಸ್ತಿ ನೀಡಲು ಬೆತ್ತಲೆಯಾಗಿ ಬಂದ WWE ಸ್ಟಾರ್‌ ಜಾನ್‌ಸೇನಾ

- Advertisement -

ನಿನ್ನೆಯಷ್ಟೇ ಆಸ್ಕರ್ ಪ್ರಶಸ್ತಿ ಪ್ರಧಾನ ಸಮಾರಂಭ ನಡೆದಿದ್ದು, ಹಲವರಿಗೆ ಪ್ರಶಸ್ತಿ ಸಿಕ್ಕಿದೆ. ಉತ್‌ತಮ ನಟ, ನಟಿ, ಪೋಷಕ ನಟ, ಪೋಷಕ ನಟಿ ಇತ್ಯಾದಿ ಪ್ರಶಸ್ತಿಗಳನ್ನು ನೀಡಲಾಗಿದೆ. ಆದರೆ ಬೆಸ್ಟ್ ಕಾಸ್ಟ್ಯೂಮ್ ಡಿಸೈನರ್ ಪ್ರಶಸ್ತಿ ನೀಡಲು ವೇದಿಕೆ ನಟನೊಬ್ಬ ಬೆತ್ತಲೆಯಾಗಿ ಬಂದು ಎಡವಟ್ಟು ಮಾಡಿದ್ದಾನೆ.

ಬೇರೆಯವರಿಗೆ ಇದು ಎಡವಟ್ಟು ಅನ್ನಿಸಿದರೂ, ವಿದೇಶಿಗರಿಗೆ ಇದು ಕಾಮನ್. WWE ಸ್ಟಾರ್ ಜಾನ್‌ ಸೀನಾ ಓರ್ವ ನಟ ಕೂಡ ಹೌದು. ಆಸ್ಕರ್ ಪ್ರಶಸ್ತಿ ಪ್ರಧಾನ ಸಮಾರಂಭದ ವೇಳೆ ಜಾನ್‌ಸೀನಾ, ವೇದಿಕೆ ಮೇಲೆ ಬೆತ್ತಲೆಯಾಗಿ ಬಂದಿದ್ದಾರೆ. ಚಿಕ್ಕ ಬೋರ್ಡ್‌ನಿಂದ ತಮ್ಮ ಮುಖ್ಯ ಅಂಗಗಳನ್ನು ಮುಚ್ಚಿಕೊಂಡಿದ್ದಾರೆ. ಬಳಿಕ ಅವರಿಗೆ ವೇದಿಕೆ ಮೇಲೆಯೇ ಬೇರೆ ಬಟ್ಟೆ ತೊಡಿಸಲಾಗಿದೆ.

ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಈ ಬಗ್ಗೆ ಪರ ವಿರೋಧ ಚರ್ಚೆಗಳು ನಡೆಯುತ್ತಿದೆ. ಕೆಲವರು ಇದನ್ನು ನಾರ್ಮಲ್ ಆಗಿ ತೆಗೆದುಕೊಂಡು, ಜಾನ್ಸೇನಾ ತಮಾಷೆಗಾಗಿ ಹೀಗೆ ಮಾಡಿದ್ದಾರೆಂದು ಹೇಳಿದರೆ, ಓರ್ವ ಸೆಲೆಬ್ರಿಟಿಯಾಗಿ ಈ ರೀತಿ ತಮಾಷೆ ಮಾಡಿದ್ದು, ತಪ್ಪು ಎಂದು ಹಲವರು ಆಕ್ರೋಶ ಹೊರಹಾಕಿದ್ದಾರೆ.

ಮುಸ್ಲಿಮರ ಬಗ್ಗೆ ಆ ಪೊಲೀಸರಿಗೆ ಎಷ್ಟು ದ್ವೇಷವಿದೆ ಅನ್ನೋದು ಇದರಲ್ಲೇ ಗೊತ್ತಾಗುತ್ತದೆ: ಓವೈಸಿ

ಮಂಡ್ಯದಲ್ಲಿ ಮುಂದಿನ ವರ್ಷದ ಬಜೆಟ್ ಬಗ್ಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ

ತೃಣಮೂಲ ಕಾಂಗ್ರೆಸ್‌ನಿಂದ ಕ್ರಿಕೇಟಿಗ ಯುಸೂಫ್ ಪಠಾಣ್‌ಗೆ ಟಿಕೇಟ್

- Advertisement -

Latest Posts

Don't Miss