ಯಾದಗಿರಿ :ಮೋಜಿ ಮಸ್ತಿಗಾಗಿ ವಾಹನ ಕಳ್ಳತನ ಮಾಡುತ್ತಿರುವವರುನ್ನು ಬಂದಿಸಿದ ಯಾದಗಿರಿ ಜಿಲ್ಲೆಯ ಕಂಭಾವಿ ಠಾಣಾ ಪೊಲೀಸರು. ಇವರು ಬಹಳ ತಿಂಗಳುಗಳಿಂದ ಜಿಲ್ಲೆಯಲ್ಲಿ ಕಳ್ಳತನ ಮಾಡುತ್ತಿದ್ದರು ಎಂದ ತಿಳಿದುಬಂದಿದೆ.
ತಮ್ಮ ಮೋಜು ಮಸ್ತಿಗಾಗಿ ದೇವರಾಜ ಮತ್ತು ಶಶಿಕುಮಾರ್ ಎನ್ನುವ ಕದೀಮರು ಜನಸಂದಣಿ ಇರುವ ಸ್ಥಳಗಳಿಗೆ ತೆರಳಿ ಅಲ್ಲಿರುವ ಬೇಕ್ ಗಳ ಹ್ಯಾಂಡ್ ಲಾಕ್ ಗಳನ್ನು ಕಾಲಿನಿಂದ ಒದ್ದು ಮುರಿದು ಅಲ್ಲಿಂದ ಬೇರೆಡೆಗೆ ಸಾಗಿಸುತಿದ್ದರು. ನಂತರ ಅವುಗಳನ್ನು ಮಾರಾಟ ಮಾಡಿ ಕುಡಿದು ತಿಂದು ಕುಪ್ಪಳಿಸುತಿದ್ದರು. ದುಡ್ಡೆಲ್ಲ ಖಾಲಿಯಾದ ಮೇಲೆ ಮತ್ತೆ ಕಳ್ಳತನಕ್ಕೆ ಇಳಿಯುತಿದ್ದರು. ಹೀಗೆ ನಗರದ ಸುತ್ತ ಮುತ್ತಲ ಹಳ್ಳಿಗಳಲ್ಲಿ ಮತ್ತು ಬೇರೆ ಬೇರೆ ಜಿಲ್ಲೆಗಳಲ್ಲಿ ತಮ್ಮ ಕೈಚಳಕವನ್ನು ತೋರಿಸುತಿದ್ದರು.
ಹೀಗೆ ಕಳ್ಳತನ ಮಾಡುವ ಸಲುವಾಗಿ ಅನುಮಾನಾಸ್ಪದವಾಗಿ ಬೀದಿಯಲ್ಲಿ ಓಡಾಡುತ್ತಿರುವಾಗ ಕೆಂಭಾವಿ ಕ್ರೈಂ ಬ್ರಾಂಚ್ ನ ಅಧಿಕಾರಿಗಳಾದ ವೆಂಕಣ್ಣ ಮತ್ತು ಕಾನ್ಸಟೇಬಲ್ ಬಸವರಾಜ ರೌಂಡ್ಸ ಮಾಡುವ ವೇಳೆ ಸಿಕ್ಕಿಹಾಕಿಕೊಂಡಿದ್ದಾರೆ.
ಈ ಕಳ್ಳರು 20 ದ್ವಿಚಕ್ರ ವಾಹನಗಳನ್ನು ಮತ್ತು ಒಂದು ಮಾರುತಿ ಜೆನ್ ಕಾರನ್ನು ಕಳ್ಳತನ ಮಾಡಿರುವುದಾಗಿ ಒಪ್ಪಿ ಕೊಂಡಿರುತ್ಥಾರೆ. ಕಳ್ಳತನವಾದ ವಾಹನಗಳ ಬೆಲೆ ಸುಮಾರು 28 ಲಕ್ಷದ 50 ಸಾವಿರ ರೂಪಾಯಿ ಇರುತ್ತದೆ.