Sunday, January 12, 2025

Latest Posts

ಡಾಲಿಯ ಜಮಾಲಿಗುಡ್ಡಕ್ಕೆ ರೀಲಿಸ್ ಡೇಟ್ ಫಿಕ್ಸ್..!

- Advertisement -

ಧನಂಜಯ ಮತ್ತು ಅದಿತಿ ಪ್ರಭುದೇವ ಅಭಿನಯದ ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ ಚಿತ್ರದ ಬಿಡುಗಡೆ ದಿನಾಂಕವನ್ನು ಅಂತಿಮಗೊಳಿಸಲಾಗಿದೆ.ಕುಶಾಲ್ ಗೌಡ ನಿರ್ದೇಶನದ ರೊಮ್ಯಾಂಟಿಕ್ ಥ್ರಿಲ್ಲರ್ ಚಿತ್ರವು ಇದೇ ಸೆಪ್ಟೆಂಬರ್ 9 ರಂದು ಥಿಯೇಟರ್‍ಗಳಲ್ಲಿ ಬಿಡುಗಡೆಯಾಗಲಿದೆ.

ಜೊತೆಗೆ ಚಿತ್ರ ತಂಡವು ಅಧಿಕೃತ ಘೋಷಣೆ ಮಾಡಿದೆ. ಕನ್ನಡಕ್ಕಾಗಿ ಒಂದನ್ನು ಒತ್ತಿ ಚಿತ್ರದ ಮೂಲಕ ಕುಶಾಲ್ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಈಗ ಅವರ ಎರಡನೇ ಚಿತ್ರ ಜಮಾಲಿಗುಡ್ಡ ಚಿತ್ರವು ಬಿಡುಗಡೆಯ ಹಂತದಲ್ಲಿದೆ. ಧನಂಜಯ್ ಮತ್ತು ಅದಿತಿ ಪ್ರಭುದೇವ ಈ ಹಿಂದೆ ವಿಜಯ್ ಪ್ರಸಾದ್ ಅವರ ತೋತಾಪುರಿ ಚಿತ್ರಕ್ಕೆ ಇವರು ಸಹಕರಿಸಿದ್ದರು, ಅದು ಕೂಡಾ ಇನ್ನೂ ಬಿಡುಗಡೆಯಾಗಬೇಕಿದೆ.

ಚಿತ್ರದಲ್ಲಿ ಯಶ್ ಶೆಟ್ಟಿ, ಪ್ರಕಾಶ್ ಬೆಳವಾಡಿ, ಭಾವನಾ ರಾಮಣ್ಣ, ಮತ್ತು ತ್ರಿವೇಣಿ ಸೇರಿದಂತೆ ಅನೇಕ ನಟರು ನಟಿಸಿದ್ದಾರೆ. ಹಿರೋಶಿಮಾ ಎಂಬ ಪಾತ್ರದಲ್ಲಿ ಧನಂಜಯ್ ಕಾಣಿಸಿಕೊಳ್ಳುತ್ತಿದ್ದು, ಖಳನಟ ಯಶ್ ಶೆಟ್ಟಿ ನಾಗಸಕಿ ಎಂಬ ಪಾತ್ರಕ್ಕೆ ಬಣ್ಣಹಚ್ಚಿದ್ದಾರೆ. ಚಿತ್ರದಲ್ಲಿ ಧನಂಜಯ್ ಕೈದಿಯಾಗಿರುತ್ತಾರೆಯೇ ಎನ್ನುವ ಪ್ರಶ್ನೆ ಇದೀಗ ಪ್ರೇಕ್ಷಕರಲ್ಲಿ ಮೂಡಿದೆ. ಇದಕ್ಕೆ ಪೂರಕವಾಗಿ ಅವಳಿ ಕೈದಿಗಳು ಅವಳಿ ನಗರಗಳ ಹೆಸರಿನಲ್ಲಿ ಎಂದು ಧನಂಜಯ್ ಟ್ವೀಟ್ ಮಾಡಿದ್ದಾರೆ. ಚಿತ್ರದಲ್ಲಿ ಯಶ್ ಶೆಟ್ಟಿ ಕೈದಿ ಸಮವಸ್ತ್ರ ಧರಿಸಿ ಜೈಲಿನೊಳಗೆ ಇರುವ ಫೆÇೀಟೊ ಪೆÇೀಸ್ಟರ್ ಒಂದನ್ನು ಚಿತ್ರತಂಡ ಈ ಹಿಂದೆ ಬಿಡುಗಡೆ ಮಾಡಿತ್ತು.

ಬೆಂಗಳೂರು, ಚಿಕ್ಕಮಗಳೂರು, ಕುದುರೆಮುಖ, ಗೋಕರ್ಣ, ಶಿವಮೊಗ್ಗದಲ್ಲಿ 80 ದಿನ ಚಿತ್ರದ ಚಿತ್ರೀಕರಣ ನಡೆದಿದೆ. ಚಿತ್ರತಂಡವು ಪೆÇೀಸ್ಟ್‍ಪೆÇ್ರಡಕ್ಷನ್ ಕೆಲಸಗಳಲ್ಲಿ ತೊಡಗಿಸಿಕೊಂಡಿದೆ. ಇದು 90ರ ದಶಕದಲ್ಲಿ ನಡೆಯುವ ಕಥೆ. ಬಾರ್ ಸಪ್ಲೈಯರ್ ಪಾತ್ರದಲ್ಲಿ ಧನಂಜಯ್ ಇಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಾಯಕಿಯಾಗಿ ಅದಿತಿ ಪ್ರಭುದೇವ ವಿಭಿನ್ನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಪ್ರಕಾಶ್ ಬೆಳವಾಡಿ, ಭಾವನ ರಾಮಣ್ಣ, ಕಾಮಿಡಿ ಕಿಲಾಡಿಗಳು ಸಂತು, ತ್ರಿವೇಣಿ, ಪ್ರಾಣ್ಯ, ನಂದ ಗೋಪಾಲ್ ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ನಿಹಾರಿಕಾ ಮೂವೀಸ್ ಲಾಂಛನದಲ್ಲಿ ಶ್ರೀಹರಿ ನಿರ್ಮಾಣ ಮಾಡುತ್ತಿರುವ ಈ ಚಿತ್ರವನ್ನು ಕುಶಾಲ್ ಗೌಡ ನಿರ್ದೇಶಿಸಿದ್ದಾರೆ. ಕಥೆ, ಚಿತ್ರಕಥೆಯನ್ನು ಕುಶಾಲ್ ಗೌಡ ಅವರೇ ಬರೆದಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನಿರ್ದೇಶನವಿದೆ. ಕಾರ್ತಿಕ್ ಛಾಯಾಗ್ರಹಣ ಹಾಗೂ ಹರೀಶ್ ಕೊಮ್ಮೆ ಸಂಕಲನ ಈ ಚಿತ್ರಕ್ಕಿದೆ. ಚಿತ್ರಕ್ಕೆ ಮಾಸ್ತಿ ಸಂಭಾಷಣೆ ಬರೆದಿದ್ದಾರೆ.

- Advertisement -

Latest Posts

Don't Miss