ಸಾಮಾನ್ಯವಾಗಿ ನಟ,ನಟಿಯರ ಬಗ್ಗೆ ಗಾಂಧೀನಗರದಲ್ಲಿ ಗಾಸಿಪ್‌ಗಳು ಹಬ್ಬುತ್ತಲೇ ಇರುತ್ತವೆ. ಅದರಂತೆ ಇದೀಗ ನಟ ಯಶ್ ಬಗ್ಗೆ ಸ್ಪೋಟಕ ಸುದ್ದಿಯೊಂದು ಹೊರಬಿದ್ದಿದೆ. ಕೆಜಿಎಫ್-2 ನಟ ಯಶ್ ಸಿನಿ ಕರಿಯರ್ ನಲ್ಲಿ ಅತಿ ದೊಡ್ಡ ತಿರುವು ಅಂದರೆ ತಪ್ಪಾಗೋದಿಲ್ಲ. ಸದ್ಯ ಯಶಸ್ಸನ್ನ ಸಂಭ್ರಮಿಸುತ್ತಿರೋ ರಾಕಿಭಾಯ್‌ಗೆ ಈಗ ಗಾಂಧೀನಗರದಲ್ಲಷ್ಟೇ ಅಲ್ಲ,ಇಡೀ ವಿಶ್ವದಲ್ಲೇ ಅಭಿಮಾನಿಗಳು ಹುಟ್ಟುಕೊಂಡಿದ್ದಾರೆ.
ಸೋಶಿಯಲ್ ಮೀಡಿಯಾದಲಂತೂ ದಿಢೀರಂತ ಫಾಲೋವರ್ಸ್ ಸಂಖ್ಯೆ ಮಿಲಿಯನ್ಸ್ ಘಟ್ಟಲೇ ಏರಿದೆ. ಇಂಥಹ ಸಮಯದಲ್ಲಿ ಯಶ್ ಅಭಿಮಾನಿಗಳಿಗೆ ಊಹಿಸಲಾಗದ ಸುದ್ದಿಯೊಂದು ಸಿಕ್ಕಿದೆ. ಹೌದು, ರಾಕಿಂಗ್ ಸ್ಟಾರ್ ಯಶ್ ದಶಕಗಳ ನಂತರ ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರಂತೆ.
ಸದ್ಯ ಸಾಕಷ್ಟು ಬಿಗ್ ಪ್ರಾಜೆಕ್ಟ್ ಗಳ ಆಫರ್ ಯಶ್ ಬಳಿ ಹರಿದು ಬರ್ತಿದ್ದು, 10 ವರ್ಷಗಳ ಬಳಿಕ ಪೊಲಿಟಿಕಲ್‌ಗೆ ಎಂಟ್ರಿ ಕೊಡ್ತಾರಂತೆ. ಹೀಗಂತ ಬೆಂಗಳೂರಿನ ಜ್ಯೋತಿಷಿಯೊಬ್ಬರು ಭವಿಷ್ಯ ನುಡಿದಿದ್ದಾರೆ. ಸೂಪರ್ ಸ್ಟಾರ್ ಆಗಿರೋ ಯಶ್ ಇನ್ನೂ ದೊಡ್ಡ ಲೆವೆಲ್‌ಗೆ ಬೆಳೆಯುತ್ತಾರೆ, ಅವರದ್ದೇ ಸ್ವಂತ ಪ್ರೊಡಕ್ಷನ್ ಹೌಸ್ ನಿರ್ಮಾಣ ಮಾಡುತ್ತಾರೆ. ಆ ಬಳಿಕ ರಾಜಕೀಯಕ್ಕೆ ಬರ್ತಾರೆ ಎಂದು ಜ್ಯೋತಿಷಿ ತಿಳಿಸಿದ್ದಾರೆ.
ಸದ್ಯ ಇದೇ ಸುದ್ದಿ ಸೋಶಿಯಲ್ ಮೀಡಿಯಾಗಳಲ್ಲಿ ಸೆನ್ಸೇಶನ್ ಕ್ರಿಯೇಟ್ ಮಾಡಿದೆ. ಅದೇನೇ ಇರಲಿ ಯಶ್ ಕಳೆದ ನಾಲ್ಕೈದು ವರ್ಷಗಳಿಂದ ನಟನೆ ಜೊತೆಗೆ ತಮ್ಮ ಯಶೋಮಾರ್ಗ ಸಂಸ್ಥೆಯ ಮೂಲಕ ಅನೇಕ ಸಾಮಾಜಿಕ ಕೆಲಸಗಳನ್ನ ಮಾಡ್ತಿದ್ದಾರೆ. ಈ ಮೂಲಕ ಸದ್ಯ ರಾಜಕೀಯದಿಂದ ದೂರ ಉಳಿದಿರೋ ಯಶ್ ಸಿನಿಮಾಗಳ ಮೇಲಷ್ಟೇ ಕಾನ್ಸಂಟ್ರೇಟ್ ಮಾಡ್ತಿದ್ದಾರೆ.
ನಳಿನಾಕ್ಷಿ, ಕರ್ನಾಟಕ ನ್ಯೂಸ್
https://www.youtube.com/c/KarnatakaTV123/videos