Tuesday, April 15, 2025

Latest Posts

ಕೆಜಿಎಫ್-2 ಟೀಸರ್ ರಿಲೀಸ್…’ರಾಕಿಭಾಯ್’ ಖದರ್ ಗೆ ಸಾರಿ ಸಾಟಿ ಯಾರು…?

- Advertisement -

ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬದ ಪ್ರಯುಕ್ತ ಬಹುನಿರೀಕ್ಷಿತ ಕೆಜಿಎಫ್-2 ಟೀಸರ್ ರಿಲೀಸ್ ಆಗಿದೆ. ಇವತ್ತು ರಿಲೀಸ್ ಆಗ್ಬೇಕಿದ್ದ ಟೀಸರ್ ನಿನ್ನೆ ರಾತ್ರಿಯೇ ರಿಲೀಸ್ ಆಗಿದೆ. ಸೋಷಿಯಲ್ ಮೀಡಿಯಾದಲ್ಲಿ ಕೆಜಿಎಫ್-2 ಟೀಸರ್ ತುಣುಕು ವೈರಲ್ ಆಗ್ತಿದ್ದಂತೆ ಚಿತ್ರತಂಡ ಸ್ವತಃ ಆಫೀಷಿಯಲ್ ಆಗಿ ಹೊಂಬಾಳೆ ಯೂಟ್ಯೂಬ್ ನಲ್ಲಿ ಟೀಸರ್ ರಿಲೀಸ್ ಮಾಡಿ ಯಶ್ ಅಭಿಮಾನಿಗಳಿಗೆ ಅಡ್ವಾನ್ಸ್ ಸರ್ ಪ್ರೈಸ್ ಕೊಟ್ಟಿದೆ.

ಕಣ್ಣು ಕುಕ್ಕುಮ ಮೇಕಿಂಗ್

ಕೆಜಿಎಫ್-2 ಟೀಸರ್ ನ ಮೇನ್ ಹೈಲೆಟ್ ಮೇಕಿಂಗ್. ಪ್ರತಿ ಫ್ರೇಮ್ ನಲ್ ನಿರ್ದೇಶಕ ಪ್ರಶಾಂತ್ ನೀಲ್ ಜಾಣ್ಮೆ ಎದ್ದು ಕಾಣುತ್ತದೆ. ಟೀಸರ್ ನಲ್ಲಿ ಬರೋ ಪ್ರತಿ ಪಾತ್ರಗಳ ಪ್ರಾಮುಖ್ಯತೆಯನ್ನು ಸಾರಿ ಹೇಳ್ತಾವೆ. ಸ್ಟೈಲೀಶ್ ಆಗಿ ಕಾಣಿಸಿಕೊಳ್ಳೋ ರಾಕಿ. ನರಾಚಿ ಪ್ರತಿಯೊಂದು ಏರಿಯಾಗಳು ಹುಟ್ಟಿಸುವ ಭೀತಿ, ವೈರಿಗಳ ಸೆದೆ ಬಡಿಯುವ ರಾಕಿಭಾಯ್ ಸ್ಟೈಲ್, ರಣ ರಣ ಕೆಂಪು ರಕ್ತದಂತೆ ಕಾದಿರುವ ಗನ್ ನಿಂದ ಸಿಗರೇಟು ಹೊತ್ತಿರುವ ಯಶ್ ಸ್ಟೈಲ್ ಸಿಂಪಲ್ಲಿ ಸೂಪರ್ ಆಗಿದೆ.

ಕೆಜಿಎಫ್ ಚಾಪ್ಟರ್ 1 ನಲ್ಲಿ ಎಲ್ಲರಲ್ಲಿಯೂ ಖದರ್ ಹುಟ್ಟಿಸಿದ್ದ ಸೋಗ್ಲನ್ ‘ಪವರ್ ಫುಲ್ ಪೀಪಲ್ಸ್ ಕಮ್ ಫ್ರಂ ಪವರ್ ಫುಲ್ ಫ್ಲೇಸಸ್’ ಕೆಜಿಎಫ್-2 ನಲ್ಲಿ ಬದಲಾಗಿದೆ. ‘ಪವರ್ ಫುಲ್ ಪೀಪಲ್ ಮೇಕ್ ಪ್ಲೇಸಸ್ ಪವರ್ ಫುಲ್’ ಎಂದು ಚೇಂಚ್ ಮಾಡಲಾಗಿದೆ.

ರಮೀಕಾ ಸೇನ್ ಲುಕ್ ನಲ್ಲಿ ಮಿಂಚದ ರವೀನಾ

ಕೆಜಿಎಫ್ ಚಾಪ್ಟರ್ 2ನ ಮತ್ತೊಂದು ಪ್ರಮುಖ ಪಾತ್ರ ರಮೀಕಾ ಸೇನ್. ರಮೀಕಾ ಸೇನ್ ಗೆಟಪ್ ನಲ್ಲಿ ಸಖತ್ ಖಡಕ್ ಲುಕ್ ನಲ್ಲಿ ರವೀನಾ ಟಂಡನ್ ಮಿಂಚಿದ್ದು, ಪಾರ್ಲಿಮೆಂಟ್ ಒಳಗ ಗತ್ತಿನಿಂದ ಹೆಜ್ಜೆ ಹಾಕುತ್ತಾ ಬರುವ ಆಕೆಯ ಸ್ಟೈಲ್, ಉದ್ದು ಜಡೆ ಬಿಟ್ಟು ಕತ್ತಿ ಹಿಡಿದಿರುವ ಸಂಜಯ್ ದತ್, ರಾಕಿಯ ರೀನಾಳ ಕತ್ತು ಎಲ್ಲವೂ ಅದ್ಭುತವಾಗಿ ಮೂಡಿ ಬಂದಿದೆ.

ಆದ್ರೆ ಸಂಜಯ್ ದತ್ ಮುಖವನ್ನು ರಿವೀಲ್ ಮಾಡಿಲ್ಲ. ಮಾಳ್ವಿಕ ಅನಿನಾಶ್, ಪ್ರಕಾಶ್ ರೈ ಪಾತ್ರಗಳು ಟೀಸರ್ ನಲ್ಲಿ ಕಾಣಿಸಿಕೊಂಡಿಲ್ಲ. ಅದನ್ನು ಬಿಟ್ರೆ ರವಿ ಬಸ್ರೂರ್ ಮ್ಯೂಸಿಕ್ ಅದ್ಭುತ ಮ್ಯೂಸಿಕ್ ಟೋಟಲ್ ಆಗಿ ಕೆಜಿಎಫ್-2 ಟೀಸರ್ ಗೆ ಎಲ್ಲೆಡೆಯಿಂದ ಭಾರೀ ಮೆಚ್ಚುವೆ ವ್ಯಕ್ತವಾಗ್ತಿದೆ.

ಈಗಾಗ್ಲೇ 20 ಮಿಲಿಯನ್ಸ್ ವೀವ್ಸ್ ಪಡೆದುಕೊಂಡಿರೋ ಕೆಜಿಎಫ್-2 ಟೀಸರ್, ಯೂಟ್ಯೂಬ್ ನಲ್ಲಿ ಧೂಳ್ ಎಬ್ಬಿಸ್ತಿದ್ದು, ರಾಕಿಭಾಯ್ ಭಕ್ತಗಣ ಸಖತ್ ಖುಷಿಪಡ್ತಿದೆ.

- Advertisement -

Latest Posts

Don't Miss