ಕೆಜಿಎಫ್ ಚಾಪ್ಟರ್ ೨ ೧೧೦೦ ಕೋಟಿ – ಶುರುವಾಯ್ತು ಅಣ್ತಮ್ಮಾಸ್ ನಡುವೇನೇ ಪೈಪೋಟಿ – ಏನ್ ಗುರು ನಿಮ್ದೆಲ್ಲಾ ಗೋಳು – ಕೋಟಿ ಬಂದವ್ನು ನಿಮ್ಮನೆಗೇನಾದ್ರೂ ಕೊಡ್ತಾನಾ ಕೂಳು… ಯಾರು ಬಾಸ್ ಯಾರು ಸುಲ್ತಾನ್..?
ಕೆಜಿಎಫ್ ಸೂಪರ್‌ಹಿಟ್ ಆಗಿದೆ, ಬ್ಲಾಕ್ ಬಸ್ಟರ್ ಆಗಿದೆ.. ಸೋ ಇದೇ ಖುಷಿಗೆ ಹೊಂಬಾಳೆ ಫಿಲಂಸ್ ೨೫ನೇ ದಿನದ ಪ್ರೋಮೋ ಬಿಡುಗಡೆ ಮಾಡಿದ್ರು. ದ ಬಾಕ್ಸಾಫೀಸ್ ಸುಲ್ತಾನ್ ರೇಸ್ ಕಂಟಿನ್ಯೂಸ್ ಅಂತ ಹಾಕಿದ್ರು.. ಇಲ್ಲೇ ನೋಡಿ ಶುರುವಾಗಿದ್ದು ಕಿರಿಕ್ಕು.. ಬಾಕ್ಸ್ ಆಫೀಸ್ ಸುಲ್ತಾನಾ ಅಂತ ಹಾಕ್ಬರ‍್ದಿತ್ತಾ..? ದರ್ಶನ್ ಅಭಿಮಾನಿಗಳಿಗೆ ಉಂಟಾದ ಟೆನ್ಶನ್ ಏನು ಅಂದ್ರೆ.., ಬಾಕ್ಸಾಫೀಸ್ ಸುಲ್ತಾನ ಅನ್ನೋ ಬಿರುದು ದರ್ಶನ್ ಅವ್ರದ್ದು ಅದನ್ನು ಕಿತ್ಕೊಂಡು ಯಶ್ ಅವ್ರಿಗ್ಯಾಕೆ ಕೊಟ್ರು ಅಂತ.
ದರ್ಶನ್ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ.. ಯಶ್ ಅವರಿಗೂ ದೊಡ್ಡ ಅಭಿಮಾನಿ ಬಳಗ ಇದೆ, ರ‍್ಲಿ. ಅದೆಲ್ಲಾ ಸರಿ ಏನ್ ಬಾಕ್ಸಾಫೀಸ್ ಅಂದ್ರೆ ನಿಮ್ಮಪ್ಪನ ದುಡ್ಡಿನ ತಿಜೋರಿನಾ..? ಅಲ್ಲಿ ದುಡ್ಡು ಬಂದ್ರೆ ನಿಮ್ಮನೆಗೆ ಅನ್ನ ಸಾಂಬಾರ್ ಬರುತ್ತಾ ಇಲ್ಲಾಂದ್ರೆ ಇದುನ್ನೆಲ್ಲಾ ನೋಡ್ತಾ ಕಮೆಂಟ್ ಹಾಕ್ತಾ ಕಿತ್ತಾಡೋ ನಿಮ್ಮ ಮೊಬೈಲ್‌ಗೆ ೨೯೯ ರುಪಾಯಿ ರಿಚಾರ್ಜ್ ಆಗುತ್ತಾ..? ಏನೂ ಇಲ್ಲ ತಾನೆ..? ಇದುನ್ನೆಲ್ಲಾ ಬಿಟ್ಟು ನಿಮ್ಮ ನಿಮ್ಮ ಕ್ಯಾಮೆ ನೋಡ್ಕೋಳ್ರೋ ಅಂತ ಸ್ವತಃ ದರ್ಶನ್, ಯಶ್ ಹೇಳಿದ್ರೂ ಕೇಳೋಕೆ ಫ್ಯಾನ್ಸ್ ರೆಡಿ ಇಲ್ಲ.
ಹೌದು ಅಣ್ತಮ್ಮಾಸ್ ಚೆನ್ನಾಗಿದ್ದಾರೆ. ಸುಮಲತಾ ಅವ್ರ ಪರ ಮಂಡ್ಯ ಲೋಕಸಭಾ ಚುನಾವಣಾ ಪ್ರಚಾರದಲ್ಲಿ ನಿಂತಿದ್ದ ಜೋಡೆತ್ತು, ಯಾವತ್ತೂ ಕಿತ್ತಾಡಿಕೊಂಡಿಲ್ಲ ಆದ್ರೆ ಇದ್ಯಾವ್ದು ಇಲ್ದಿರೋ ಕಿರಿಕ್ ಗುರು. ನೀವು ಹಿಂಗೆ ಮಾಡೋದ್ರಿಂದಾನೇ ಒಬ್ಬ ಸ್ಟಾರ್ ಇನ್ನೊಬ್ಬ ಸ್ಟಾರ್ ಸಿನಿಮಾ ಬಗ್ಗೆ ಒಳ್ಳೆ ಮಾತು ಹೇಳೋಕೂ ಯೋಚನೆ ಮಾಡೋ ಹಂಗಾಗಿದೆ. ಅವರ ಬಗ್ಗೆ ಒಳ್ಳೆ ಮಾತಾಡಿದ್ರೆ ನಮ್ಮ ಫ್ಯಾನ್ಸ್ ಎಲ್ಲಿ ಬೇಜಾರು ಮಾಡ್ಕೋತಾರೋ ಅಂತ.
ಯಶ್ ಹೆಚ್ಚು ದರ್ಶನ್ ಕಮ್ಮೀನಾ..? ಇಲ್ಲಾ ಯಶ್ ಕಮ್ಮಿ ದರ್ಶನ್ ಹೆಚ್ಚಾ..? ಅಣ್ತಮ್ಮಾ.. ಇಲ್ ಅಣ್ಣ ಹೆಚ್ಚೋ ತಮ್ಮ ಹೆಚ್ಚೋ ಅಂದAಗಾಯ್ತು.. ಇಬ್ರುನ್ನ ಕೇಳಿದ್ರೂ ನಾವಲ್ಲ ನೀವೇ ಹೆಚ್ಚು ಅಂತ ಅಭಿಮಾನಿಗಳನ್ನು ತಲೆ ಮೇಲೆ ಹೊತ್ತು ಮೆರೆಸೋ ಸ್ಟಾರ್‌ಗಳು ಇವ್ರಿಬ್ರು..
ಒಂದು ಕಾಲದಲ್ಲಿ ಅಣ್ಣಾವ್ರು ವಿಷ್ಣು ದಾದಾ ಇವ್ರಿಬ್ರ ಬಗ್ಗೇನೂ ಫ್ಯಾನ್ಸ್ ಹಿಂಗೇ ಕಿತ್ತಾಡಿದ್ರು..
ಅಣ್ಣಾವ್ರು ಬಂದು ೨೦ ವರ್ಷ ಆಗಿತ್ತು.. ಅದಾಗ್ಲೇ ಡಾ ರಾಜ್ ಅಭಿಮಾನಿಗಳ ಪಾಲಿಗೆ ಆರಾಧ್ಯ ದೈವವಾಗಿದ್ರು.. ವಿಷ್ಣು ಇನ್ನೂ ಚಿಗುರು ಮೀಸೆ ಹುಡುಗ.. ೧೯೭೨ರಲ್ಲಿ
ದರ್ಶನ್ ಹಿಟ್ ಮೇಲೆ ಹಿಟ್ ಕೊಡ್ತಿದ್ದಾಗ ಯಶ್ ಇನ್ನೂ ಸ್ಯಾಂಡಲ್‌ವುಡ್‌ಗೆ ಕಾಲಿಡೋಕೆ ಕಷ್ಟಪಡ್ತಿದ್ದ ಹೊಸ ಹುಡುಗ. ಆದ್ರೆ ದರ್ಶನ್ ಬೆಳೆದಿದ್ದಾರೆ. ಯಶ್ ಇನ್ನೂ ಬೆಳೀತಿದ್ದಾರೆ. ಇನ್ನಷ್ಟು ಬೆಳೀತಿದ್ದಾರೆ..
ಇಷ್ಟಕ್ಕೂ ಇಲ್ಲಿ ಹೊಂಬಾಳೆ ಫಿಲಂಸ್ ಕೊಟ್ಟ ಕಿರೀಟ ಈ ಕಿರಿಕ್ಗೆ ಕಾರಣ ಅನ್ನಬಹುದು. ಒಂದು ಕಡೆ ಫ್ಯಾನ್ಸ್ ಇಮೋಷನ್ ರೆಸ್ಪೆಕ್ಟ್ ಮಾಡೋದು ಸಿನಿಮಾ ತಂಡದ ಜವಾಬ್ಧಾರಿ. ಯಾಕಂದ್ರೆ ಇಲ್ಲೀರ‍್ಗೂ ಸ್ಯಾಂಡಲ್‌ವುಡ್ ದರ್ಶನ್ ಅವ್ರನ್ನೇ ಬಾಕ್ಸಾಫೀಸ್ ಸುಲ್ತಾನಾ ಅಂತ ಕರೆದಿರೋದು. ಹೀಗಿರೋವಾಗ ಅದೇ ಹೆಸರನ್ನು ಮತ್ತೊಬ್ಬ ನಟನಿಗೆ ಕೊಟ್ಟಾಗ ಅಭಿಮಾನಿಗಳು ಕೋಪಗೊಳ್ಳೋದು ಸಹಜ. ಸುಲ್ತಾನಾ ಅನ್ನೋ ಸಾಂಗ್ ಕೆಜಿಎಫ್ ಚಾಪ್ಟರ್೨ ನಲ್ಲಿ ಸೂಪರ್‌ಹಿಟ್ ಆಗಿತ್ತು.. ಕೆಜಿಎಫ್ ಸಾಮ್ರಾಜ್ಯಕ್ಕೆ ರಾಕಿಭಾಯ್ ಸುಲ್ತಾನಾ ಅನ್ನೋ ಅರ್ಥದಲ್ಲಿ ಹೊಂಬಾಳೆ ಈ ಸಂಭ್ರಮ ಆಚರಿಸಿದೆ..
ರ‍್ಲಿ ಬಿಡಿ, ಯಶ್ ಅವ್ರಿಗೆ ಮತ್ತೊಂದು ಕಿರೀಟ ಕೊಡಿ.. ಕಿರೀಟಗಳಿಗೇನು ಬರವೇ.. ಆದ್ರೆ ನೆನ್ಪಿಟ್ಕೊಳ್ಳಿ.. ತಲೆಗಳು ಬದಲಾಗ್ತವೆ.. ಸ್ಟಾರ್‌ಗಳು ಹೋಗ್ತಾರೆ.. ಹೊಸ ಸ್ಟಾರ್‌ಗಳು ಹುಟ್ತಾನೇ ರ‍್ತಾರೆ.. ಅಂತ ಅಲೆಗ್ಜಾಂಡರ್, ಅಶೋಕ, ನೆಪೋಲಿಯನ್ನೇ ಉಳೀಲಿಲ್ಲಾ..
ಓಂ
ಕರ್ನಾಟಕ ಟಿವಿ