Monday, November 17, 2025

Latest Posts

ಯತೀಂದ್ರ ಮಾತಿಗೆ ‘ಬಂಡೆ’ ಸೈಲೆಂಟ್‌ ಏಕೆ?

- Advertisement -

ನವೆಂಬರ್‌ ಕ್ರಾಂತಿ ಹೊಸ್ತಿಲಲ್ಲಿರುವ ರಾಜ್ಯ ಕಾಂಗ್ರೆಸ್‌ ಪಾಳಯದಲ್ಲಿ, ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಹೇಳಿಕೆ ಪರ ವಿರೋಧದ ಚರ್ಚೆ ಹುಟ್ಟು ಹಾಕಿದೆ. ಸಿದ್ದು ಬಣದವರು ಸಮರ್ಥಿಸಿಕೊಂಡ್ರೆ, ಡಿಕೆಶಿ ಬಣದವರು ಪರೋಕ್ಷವಾಗಿ ವಾರ್ನ್‌ ಮಾಡ್ತಿದ್ದಾರೆ. ಇದೀಗ ಸ್ವತಃ ಡಿಕೆ ಶಿವಕುಮಾರ್‌ ಪ್ರತಿಕ್ರಿಯಿಸಿದ್ದು, ಮೌನಾಸ್ತ್ರ ಪ್ರಯೋಗಿಸಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮಗಳು ಈ ಬಗ್ಗೆ ಪ್ರಶ್ನಿಸುತ್ತಿದ್ದಂತೆ, ಈಗ ನಾನು ಮಾತನಾಡೋಕೆ ಹೋಗಲ್ಲ. ಯಾರ ಜೊತೆ ಮಾತನಾಡ ಬೇಕೋ ಅವರತ್ರ ಮಾತನಾಡ್ತೀನಿ ಎಂದಷ್ಟೇ ಹೇಳಿದ್ರು. ಮುಂದುವರಿದು ಪ್ರಶ್ನೆ ಕೇಳುವಷ್ಟರಲ್ಲಿ ಡಿಕೆಶಿ ಹೊರಟು ಬಿಟ್ಟಿದ್ರು. ಇದನ್ನ ಹೇಳುವಾಗಲೂ ಡಿಕೆಶಿ ಮುಖದಲ್ಲಿ ಕೆಂಡದಂತ ಕೋಪ ಇದ್ರೂ, ಯತೀಂದ್ರ ಸಿಎಂ ಪುತ್ರ ಅನ್ನೋ ಕಾರಣದಿಂದ ತಾಳ್ಮೆಯಿಂದಲೇ ಉತ್ತರಿಸಿ ಹೊರಟು ಹೋದ್ರು.

ಅಧಿಕಾರ ಹಂಚಿಕೆ ಸೂತ್ರದಂತೆ ತಮಗೆ ಸಿಎಂ ಸ್ಥಾನ ಸಿಗಬೇಕೆಂದು ಡಿಕೆಶಿ ಪಟ್ಟು ಹಿಡಿದಿದ್ದಾರೆ. ಹೈಕಮಾಂಡ್‌ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ. ಆದ್ರೆ ಸಿದ್ದರಾಮಯ್ಯ ಮಾತ್ರ ಸಿಎಂ ಸ್ಥಾನ ಬಿಟ್ಟುಕೊಡಲು ಒಪ್ಪಿರಲಿಲ್ಲ. 5 ವರ್ಷ ನಾನೇ ಸಿಎಂ ಅಂತಾ ಹೇಳುತ್ತಿದ್ರು.

ನವೆಂಬರ್‌ ತಿಂಗಳು ಹತ್ತಿರವಾಗುತ್ತಿದ್ದಂತೆ ಅದೇನಾಯ್ತೋ ಏನೋ. ಎಂಎಲ್‌ಸಿ ಯತೀಂದ್ರ, ತಂದೆಯ ರಾಜಕೀಯ ನಿವೃತ್ತಿಯ ಸುಳಿವು ನೀಡಿದ್ರು. ಜೊತೆಗೆ ಮುಂದಿನ ಉತ್ತರಾಧಿಕಾರಿ ಬಗ್ಗೆಯೂ ಪರೋಕ್ಷವಾಗಿ ಸುಳಿವು ಕೊಟ್ಟು, ಸತೀಶ್‌ ಜಾರಕಿಹೊಳಿ ಹೆಸರನ್ನು ಪ್ರಸ್ತಾಪಿಸಿದ್ರು. ಇದು ಡಿಕೆಶಿ ಮತ್ತು ಅವರ ಬಣದ ಅಸಮಾಧಾನ ತೀವ್ರಗೊಳ್ಳುವಂತೆ ಮಾಡಿದೆ.

ಈ ಹಿಂದೆ ತಮ್ಮದೇ ಬಣದವರು ಸಿಎಂ ಬದಲಾವಣೆ ಬಗ್ಗೆ ಹೇಳಿಕೆ ಕೊಟ್ಟಿದ್ದಕ್ಕೆ, ಸ್ವತಃ ಡಿಕೆ ಶಿವಕುಮಾರ್‌ ನೋಟಿಸ್‌ ಕೊಡೋದಾಗಿ ಎಚ್ಚರಿಸಿದ್ರು. ಬಳಿಕ ಕೆಪಿಸಿಸಿಯಿಂದ ನೋಟಿಸ್‌ ಕೂಡ ಕೊಡಲಾಗಿತ್ತು. ಆದ್ರೀಗ ಯತೀಂದ್ರ ಇಂಥದ್ದೊಂದು ಹೇಳಿಕೆ ಕೊಟ್ರು ಈ ಬಗ್ಗೆ ಸರಿಯಾಗಿ ಪ್ರತಿಕ್ರಿಯೆಯನ್ನೂ ಡಿಕೆ ಕೊಡ್ತಿಲ್ಲ. ಸಿದ್ದರಾಮಯ್ಯ ಪುತ್ರ ಅನ್ನೋ ಕಾರಣಕ್ಕೋ ಏನೋ ಸೈಲೆಂಟ್‌ ಆಗಿದ್ದಾರೆ. ಈ ಮೌನದ ಹಿಂದೆ ಬೇರೆಯದ್ದೇ ಸ್ಟ್ರ್ಯಾಟಜಿ ಇದೆ ಎಂದೇ ಹೇಳಲಾಗ್ತಿದೆ. ಆದರೆ ಯತೀಂದ್ರ ಹೇಳಿಕೆ, ಡಿಕೆಶಿ ಮೌನ, ಪ್ರಮುಖ ಬದಲಾವಣೆಯ ಮುನ್ಸೂಚನೆಯಾ ಅನ್ನೋದನ್ನ ಕಾದು ನೋಡಬೇಕಿದೆ.

- Advertisement -

Latest Posts

Don't Miss