Hassan Political News: ಇಂದು ಹಾಸನಕ್ಕೆ ಆಗಮಿಸಿದ ಸಿಎಂ ಸಿದ್ದರಾಮಯ್ಯ, ಹಾಸನಾಂಬೆಯ ದರ್ಶನ ಪಡೆದರು. ಹಾಸನಾಂಬೆಯ ದರ್ಶನ ಮಾಡಿದ ಸಿದ್ದರಾಮಯ್ಯರಿಗೆ, ಸಚಿವ ರಾಜಣ್ಣ , ಶಾಸಕ ಕೆ.ಎಂ.ಶಿವಲಿಂಗೇಗೌಡ ಸಾಥ್ ನೀಡಿದರು. ಈ ವೇಳೆ ಅರ್ಚಕರ ಬಳಿ ಹಾಸನಾಂಬೆಯ ಕುರಿತು ಸಿಎಂ ಮಾಹಿತಿ ಪಡೆದರು.
ಇನ್ನು ಸಿಎಂ ಸಿದ್ದರಾಮಯ್ಯರನ್ನು ನೋಡಲು, ಅಭಿಮಾನಿಗಳು ಕಾರ್ಯಕರ್ತರು ಮುಗಿಬಿದ್ದಿದ್ದರು. ಇವರನ್ನು ತಡೆಯಲು ಪೊಲೀಸರು ಹರಸಾಹಸ ಪಡಬೇಕಾಯಿತು. ಇನ್ನು ಸಿಎಂ ಶೇಕ್ ಹ್ಯಾಂಡ್ ಮಾಡಿ, ಇದೇ ನಮಗೆ ಅವರ ಆಶೀರ್ವಾದವೆಂದು, ಅಲ್ಲಿನ ಪೌರ ಕಾರ್ಮಿಕ ಮಹಿಳೆಯರು ಹೇಳಿದರು.
ಇನ್ನು ದೇವಿಯ ದರ್ಶನದ ಬಳಿಕ ಸಿದ್ದರಾಮಯ್ಯ, ಮಾಧ್ಯಮದವರ ಬಳಿ ಮಾತನಾಡಿದ್ದು, ಜಿಲ್ಲಾ ಉಸ್ತುವಾರಿ ಸಚಿವರಾದ ರಾಜಣ್ಣ ಅವರು ನನಗೆ ಹಾಸನಾಂಬ ಪೂಜೆ ನಡಿತಾ ಇದ್ದೆ ನೀವು ಬರ್ಬೇಕು ಅಂತ ಹೇಳಿದ್ರು . ಈ ಬಾರಿ ರಾಜಣ್ಣ ಅವರ ಮಾರ್ಗದಲ್ಲಿ ಪೂಜೆ ಚೆನ್ನಾಗಿ ಆಗಿದೆ. ಹಾಸನಾಂಬ ದೇವಿ ಐತಿಹಾಸಿಕ ಮಹತ್ವ ಹೋದಿರೋ ದೇವಿ. ಎರಡೂ ದೇವರ ಆಶೀರ್ವಾದ ಪಡೆದು ರಾಜ್ಯದಲ್ಲಿ ಬರಗಾಲ ಇದೆ. ಈ ವರ್ಷ ತೀವ್ರ ಬರಗಾಲ ಇದೆ. ಇಡೀ ರಾಜ್ಯ ಬರಗಾಲಕ್ಕೆ ತುತ್ತಾದ ಕಾಲ ಇರಲಿಲ್ಲ. ಪರಿಹಾರಕ್ಕೆ ನಾವು ಕೇಂದ್ರಕ್ಕೆ ಮನವಿ ಮಾಡಿ ಇದ್ದೀವಿ ಎಂದಿದ್ದಾರೆ.
ಅಲ್ಲದೇ, ಕೇಂದ್ರ ತಂಡ ಅಧಿಕಾರಿಗಳಿಂದ ಮಾಹಿತಿ ಪಡೆದು ಹೋಗಿದೆ. ಅವರು ಭೇಟಿ ನೀಡಿ 20 ದಿನ ಆಗಿದೆ ಅವರು ಅವರು ವರದಿ ಕೊಟ್ಟಿದ್ದಾರೋ, ಇಲ್ಲವೋ. ಇದುವರೆಗೆ ಗೈಡ್ ಲೈನ್ ಪ್ರಕಾರ ಹಣ ಬಿಡುಗಡೆ ಮಾಡಿ ಇಲ್ಲ. ನಾವು 17900 ಕೋಟಿ ಹಣ ಕೇಳಿದ್ದೇವೆ. ನಮ್ಮ ರಾಜ್ಯದಿಂದ ನಾಲ್ಕು ಲಕ್ಷ ಕೋಟಿ ಹಣ ಸಂಗ್ರಹ ಆಗುತ್ತೆ. ಹಾಗಾಗಿ ನಮ್ಮ ಪಾಲಿನ ಹಣ ಕೇಳ್ತಾ ಇರೋದು . NDRF ಮಾನದಂಡದಡಿ ನಾವು ಪರಿಹಾರ ಕೇಳ್ತಾ ಇದ್ದೀವಿ. ನಾವೆಲ್ಲ ಜಗಳ ಮಾಡ್ತಾ ಇಲ್ಲಾ ಕೇಳ್ತಾ ಇದ್ದೀವಿ ಅಷ್ಟೇ. ನಾವು ಸಚಿವರು ಕೇಂದ್ರಕ್ಕೆ ಹೋಗಿ ಭೇಟಿ ಮಾಡಲು ಮುಂದಾದ್ರೆ ಸಮಯ ಕೊಡಲಿಲ್ಲ. ಹೀಗಾದ್ರೆ ಎನ್ ಮಾಡ್ಬೇಕು ಹೇಳಿ..? ವಿರೋಧ ಪಕ್ಷದ ಅವರು ಜಗಳ ಮಾಡ್ಬೇಡಿ ಅಂತಾರೆ. ಹಾಸನಾಂಬ ಎಲ್ಲರಿಗೂ ಒಳ್ಳೇದು ಮಾಡಲಿ. NDRF ಮಾನದಂಡ ಬದಲಾಯಿಸಲು ನಾನು ಪತ್ರ ಬರೆದಿದ್ದೆನೆ. ಈ ಬಾರಿ ಮುಂಗಾರು ಮಳೆ ಕೈಕೊಟ್ಟಿದೆ. ಹಿಂಗಾರು ಉತ್ತಮವಾಗಿ ಆಗಲಿಎಂದು ಹಾಸನಾಂಬೆಗೂ ಪ್ರಾರ್ಥನೆ ಮಾಡುತ್ತೇನೆ ಎಂದಿದ್ದಾರೆ.
ಕಿಯೋನಿಕ್ಸ್ ಅಧಿಕಾರಿ ಸಂಗಪ್ಪ ಲಂಚ ಕೇಳಿದ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ನಾನು ಈ ಬಗ್ಗೆ ವಿಚಾರಣೆ ಮಾಡುತ್ತೇನೆ. ಅದು ಸತ್ಯವಾಗಿದ್ದರೆ ತನಿಖೆ ಮಾಡಿಸಿ ಕ್ರಮ ಕೈಗೊಳ್ಳುತ್ತೇನೆ ಎಂದಿದ್ದಾರೆ.
ಕೇವಲ ಶಾಸಕರನ್ನ ಸೆಳೆಯೋ ಕೆಲಸ ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಹೇಳಿಕೆ ವಿಚಾರದ ಬಗ್ಗೆ ಸಿಎಂ ಮಾತನಾಡಿದ್ದು, ಕುಮಾರಸ್ವಾಮಿ ಯಾವತ್ತು ಸತ್ಯ ಹೇಳಿದ್ದಾರೆ, ಎಲ್ಲ ಬರಿ ಸುಳ್ಳೇ ಹೇಳೋದು. ಅದು ಬಿಟ್ರೆ ಅವರಿಗೆ ಬೇರೆ ಕೆಲಸ ಇಲ್ಲ. ಬರದ ವಿಚಾರದಲ್ಲಿ ನಾವು ಕೇಂದ್ರದ ಮೇಲೆ ಬೊಟ್ಟು ಮಾಡುತ್ತಿಲ್ಲ . ದುಡ್ಡು ಕೇಳುತ್ತಿದ್ದೇವೆ, ಕೇಳಬೇಕಾ ಬೇಡ್ವಾ..? ಒಕ್ಕೂಟ ವ್ಯವಸ್ಥೆ ಯಲ್ಲಿ ರಾಜ್ಯ ಕೇಂದ್ರ ಸಮನ್ವಯದಿಂದ ಕೆಲಸ ಮಾಡಬೇಕು. ಕರ್ನಾಟಕದಲ್ಲಿ ಬರ ಬಂದ್ರೆ ಕೇಂದ್ರದ ಜವಾಬ್ದಾರಿಯು ಇರುತ್ತೆ. ಕೇಂದ್ರಕ್ಕೆ ತೆರಿಗೆ ಮೂಲಕ ಹಣ ಕೊಡೋದು ರಾಜ್ಯಗಳು. ನಮಗೆ ಸಂಕಷ್ಟ ಎದುರಾದಾಗ ನೆರವಾಗಬೇಕಾಗಿದ್ದು ಕೇಂದ್ರದ ಜವಾಬ್ದಾರಿ. 33,700 ಕೋಟಿ ಬೆಳೆ ನಷ್ಟವಾಗಿದ್ದು, 17ಸಾವಿರಕೋಟಿ ಕೇಳಿದ್ದೇವೆ. ರೈತರು ಸಂಕಷ್ಟದಲ್ಲಿದ್ದಾರೆ ಬೇಗ ಹಣ ಕೊಡಿ ಎಂದು ಕೇಳುತ್ತಿದ್ದೇವೆ ಅಷ್ಟೆ ಎಂದು ಹೇಳಿದರು.
ಸಿದ್ದರಾಮಯ್ಯ ಮೋದಿ ವಿರುದ್ಧ ದುರಹಂಕಾರದಿಂದ ಮಾತನಾಡುತ್ತಿದ್ದಾರೆ ಎಂಬ ಬಗ್ಗೆ ಮಾತನಾಡಿದ ಸಿಎಂ, ಮೋದಿಯವರು ನನ್ನ ಬಗ್ಗೆ ಮಾತನಾಡಬಹುದಾ..? ಮಧ್ಯಪ್ರದೇಶ ಚುನಾವಣಾ ಪ್ರಚಾರದಲ್ಲಿ ಕರ್ನಾಟಕದ ವಿಚಾರ ಮಾತಾಡೋದು ಏನಿರುತ್ತೆ..? ಚುನಾವಣಾ ಪ್ರಚಾರ ಮಾಡಬೇಕು ಅಷ್ಟೇ. ಮೊದಿಯವರಿಗೆ ನಮ್ಮ ಬಗ್ಗೆ ಭಯ ಇರಬೇಕು ಎಂದು ಸಿದ್ದು ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್ ಶೇಮ್ ಲೆಸ್ ಪಾರ್ಟಿ ಎಂಬ ಸಿದ್ದರಾಮಯ್ಯ ಮಾತನಾಡಿದ್ದು, ಯತ್ನಾಳ್ ಹಿಮ್ ಸೆಲ್ಫ್ ಈಸ್ ಎ ಶೇಮ್ ಲೆಸ್. ಅವರಿಗೆ ನೋಟಿಸ್ ಕೊಟ್ಟವರ್ಯಾರು..? ಯತ್ನಾಳ್ ಏನು ಬಹಳಾ ಸದ್ಗುಣ ಇರೋ ವ್ಯಕ್ತೀನಾ..? ಬಿಜೆಪಿಯವರೇ ನಡವಳಿಕೆ ಸರಿ ಇಲ್ಲ ಎಂದು ನೋಟಿಸ್ ಕೊಟ್ಟಿಲ್ವಾ..? ಎಂದು ಸಿಎಂ ಪ್ರಶ್ನಿಸಿದ್ದಾರೆ.
ಮೌಢ್ಯ ವಿರೋಧಿ ಕಾನೂನು ಬಗ್ಗೆ ಸಿಎಂ ಪ್ರತಿಕ್ರಿಯಿಸಿದ್ದು, ಹಾಸನಾಂಬೆ ದರ್ಶನವನ್ನ ಹಿಂದಿನಿಂದಲೂ ಆಚರಣೆ ಮಾಡಿದ್ದಾರೆ. ನಾನು ಮೌಢ್ಯಗಳನ್ನ ಆಚರಿಸುವುದು ರೂಢಿಯಿಲ್ಲ. ದೇವರ ಬಗ್ಗೆ ನನಗೆ ನಂಬಿಕೆ ಇದೆ. ಬಹುತೇಕ ಜನರೂ ಕೂಡ ದೇವರನ್ನ ನಂಬುತ್ತಾರೆ. 99.9999% ಜನ ದೇವರನ್ನ ನಂಬುತ್ತಾರೆ ಎಂದಿದ್ದಾರೆ.
ಬೇರೆ ಪಕ್ಷದ ನಾಯಕರು ಕಾಂಗ್ರೆಸ್ ಸೇರೋ ವಿಚಾರದ ಬಗ್ಗೆ ಸಿಎಂ ಪ್ರತಿಕ್ರಿಯಿಸಿದ್ದು, ನಾವು ಯಾರನ್ನೂ ಕರೆದುಕೊಂಡು ಬರೋದಿಲ್ಲ. ಪಕ್ಷದ ಸಿದ್ಧಾಂತ, ನಾಯಜತ್ವ ಒಪ್ಪಿ ಬಂದ್ರೆ ಬೇಡ ಎನ್ನೊಲ್ಲ. ರಾಜ್ಯದಲ್ಲಿ ವಿದ್ಯುತ್ ಸ್ಥಿತಿ ಉತ್ತಮವಾಗುತ್ತಿದೆ. 7 ಗಂಟೆ ತ್ರೀ ಫೇಸ್ ಕರೆಂಟ್ ನೀಡಲು ನೆನ್ನೆ ತೀರ್ಮಾನಿಸಲಾಗಿದೆ. ಲೋಕಸಭಾ ಚುನಾವಣೆಗೆ ಎಲ್ಲರನ್ನೂ ಒಟ್ಟುಗೂಡಿ ಚರ್ಚಿಸಿ ಅಭ್ಯರ್ಥಿ ಹಾಕುತ್ತೇವೆ ಎಂದು ಸಿಎಂ ಹೇಳಿದ್ದಾರೆ.
ಜಗದೀಶ್ ಶೆಟ್ಟರ್ ಇಂತಹ ಹಲ್ಕಾ ಕೆಲಸ ಬಿಡಬೇಕು: ಶೆಟ್ಟರ್ ವಿರುದ್ಧ ಯತ್ನಾಳ್ ವಾಗ್ದಾಳಿ