Tuesday, April 22, 2025

Latest Posts

ಮೋದಿ ದೇಶ ದಿವಾಳಿ ಮಾಡಿದ್ದು ಸತ್ಯ ; ಸಂತೋಷ್ ಲಾಡ್

- Advertisement -

ಧಾರವಾಡ: ಜಿಲ್ಲಾ ಉಸಸ್ತುವಾರಿ ಸಚಿವ ಸಂತೋಷ್ ಲಾಡ್ ಮೋದಿಯಿಂದ ದೇಶ ದಿವಾಳಿಯಾಗಿದೆ ಎಂದ್ದಿದ್ದ ಲಾಡ್ ವಿರುದ್ದ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಲಾಡ್ ರಿಂದ ಬಳ್ಳಾರಿ ದಿವಾಳಿಯಾಗಿದೆ ಎಂದು ತಿರುಗೇಟು ಕೊಟ್ಟಿದ್ದರು. ಈಗ ಮತ್ತೆ ಯತ್ನಾಳ್ ತಿರುಗೇಟಿಗೆ ಲಾಡ್ ಟಾಂಗ್ ಕೊಟ್ಟಿದ್ದಾರೆ.

ನನ್ನ ಮೇಲೆ ಆರೋಪ ಮಾಡಿ ನಮ್ಮ ವಿರುದ್ಧ ಮಾತನಾಡಿದ್ದನ್ನು ಸ್ವಾಗತಿಸುತ್ತೇನೆ. ಮೋದಿ ಸಾಹೇಬರು ದಿವಾಳಿ ಮಾಡಿದ್ದು ಸತ್ಯ. 1947ರಿಂದ 2014ರವರೆಗೆ ದೇಶದ ಸಾಲ 55 ಲಕ್ಷ ಕೋಟಿ ಇತ್ತು. ನಿರ್ಮಲಾ ಸೀತಾರಾಮನ್ ಬಜೆಟ್‌ನಲ್ಲಿ ಆ ಸಾಲ ಏರಿದೆ

ಅದರ ಆಧಾರದ ಮೇಲೆ ದಿವಾಳಿ ಅಂತಾ ಹೇಳಿದ್ದೇನೆ.ಜಿ 20ಗಾಗಿ 4200 ಕೋಟಿ ಖರ್ಚು ಮಾಡಿದ್ದಾರೆ ಎರಡೇ ದಿನಕ್ಕೆ ಅದೆಲ್ಲ ಸೋರಿ ಹೋಗಿದೆ ಅದರ ಬಗ್ಗೆ ಚರ್ಚೆ ಬೇಡ ಫ್ರಾನ್ಸ್, ಇಂಡೋನೇಷ್ಯಾದಲ್ಲಿ ಸಹ ಜಿ20 ಸಭೆ ಆಗಿದೆ. ಬೇರೆ ದೇಶಗಳಲ್ಲಿ ನಮಗಿಂತ ಕಡಿಮೆ‌ ಖರ್ಚು ಮಾಡಿ ಯಶಸ್ವಿ ಮಾಡಿದ್ದಾರೆ. ನಮ್ಮಲ್ಲಿ 4200 ಕೋಟಿ ಖರ್ಚು ಮಾಡಿದ್ದಾರೆ

ಎರಡೆರೆಡು ಮೀಟರ್‌ಗೆ ಮೋದಿ ಫೋಟೋ ಹಾಕಿದ್ದರು ಕೇವಲ ಪ್ರಚಾರ ಗಿಟ್ಟಿಸಿಕೊಂಡಿದ್ದಾರೆ ಈ ಕಾರ್ಯಕ್ರಮಕ್ಕೆ ಮಾಡಿದ ವೆಚ್ಚದ ಹಣ ಬಿಜೆಪಿಯವರದ್ದಾ? ಆ ದುಡ್ಡು ಸರ್ಕಾರದಲ್ಲವಾ? ಎಂದು ಪ್ರಶ್ನೆ ಮಾಡಿದರು.

- Advertisement -

Latest Posts

Don't Miss