Tuesday, July 22, 2025

Latest Posts

‘ಯತ್ನಾಳ್ ಜೋಕರ್ ಇದ್ದ ಹಾಗೇ ಅವರ ಹೇಳಿಕೆಗೆ ಮಹತ್ವ ಕೊಡಬಾರದು’

- Advertisement -

Political News: ಹುಬ್ಬಳ್ಳಿ: ತಾಲೂಕಿನ ಪಾಳೆ ಗ್ರಾಮದಲ್ಲಿ ನಡೆದ ಮುಸ್ಲಿಂ ಧರ್ಮಗಳ ಸಮಾವೇಶದಲ್ಲಿ ಐಸಿಸ್ ನಂಟು ಹೊಂದಿದ್ದ ಖಾದ್ರಿಗಳು ಭಾಗಿಯಾಗಿದ್ದರು ಎಂಬ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿಕೆ ಈಗಾಗಲೇ ರಾಜ್ಯದಾದ್ಯಂತ ಸದ್ದು ಮಾಡುತ್ತಿದೆ. ಅದರಂತೆ ಯತ್ನಾಳ ಹೇಳಿಕೆಯನ್ನು ಕಾಂಗ್ರೆಸ್ ಮುಖಂಡರು ಹಾಗೂ ಮುಸ್ಲಿಂ ಮುಖಂಡರು ತೀವ್ರವಾಗಿ ಖಂಡಿಸಿದ್ದು, ಇದೀಗ ಮುಂದುವರೆದು ಮುಸ್ಲಿಂ ಮುಖಂಡ ಅಶ್ಪಾಕ್ ಕುಮಟಾಕರ್ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಓರ್ವ ಜೋಕರ್, ಅವರ ಹೇಳಿಕೆಯನ್ನು ಯಾರು ಗಂಭೀರವಾಗಿ ಪರಿಗಣಿಸಬಾರದು, ಅವರು ಶೀಘ್ರವಾಗಿ ಬಹಿರಂಗವಾಗಿ ಕ್ಷಮೆಯಾಚನೆ ಮಾಡಬೇಕು ಇಲ್ಲದೇ ಹೋದಲ್ಲಿ ಮಾನನಷ್ಟ ಮೊಕದ್ದಮೆ ಹಾಕಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮಗುರುಗಳ ಸಮಾವೇಶದಲ್ಲಿ ಮುಖ್ಯಮಂತ್ರಿಗಳು ಭಾಗಿಯಾಗಿದ್ದಕ್ಕೆ ಶಾಸನ ಬಸನಗೌಡ ಪಾಟೀಲ್ ಯತ್ನಾಳ ಅವರಿಗೆ ಹೊಟ್ಟೆ ಕಿಚ್ಚು ಆಗಿದೆ. ಈ ಹೊಟ್ಟೆ ಕಿಚ್ಚಿನಿಂದ ಭಯೋತ್ಪಾದಕ ನಂಟು ಹೊಂದಿದ್ದವರು ಸಮಾವೇಶದಲ್ಲಿ ಭಾಗಿಯಾಗಿದ್ದರು ಎಂಬ ಆರೋಪ ಮಾಡಿದ್ದಾರೆ ಎಂದು ಹರಿಹಾಯ್ದರು.

ಧರ್ಮಗುರುಗಳಿಗೆ ಯಾವುದೇ ಪಕ್ಷವಿರುವುದಿಲ್ಲ. ಎಲ್ಲ ಜಾತಿ, ಧರ್ಮದವರು ದರ್ಗಾಕ್ಕೆ ಭೇಟಿಕೊಟ್ಟು ಆರ್ಶೀವಾದ ಪಡೆದುಕೊಳ್ಳುತ್ತಾರೆ. ಆದರೆ ಯತ್ನಾಳ ಅವರು ಪ್ರಚೋದನಕಾರಿ ಹೇಳಿಕೆ ಕೊಟ್ಟು ಸಮಾಜದಲ್ಲಿ ಅಶಾಂತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಬಸನಗೌಡ ಪಾಟೀಲ್ ಜೋಕರ್ ಇದ್ದ ಹಾಗೇ ಅವರ ಹೇಳಿಕೆಗೆ ಮಹತ್ವ ಕೊಡಬಾರದು. ಕೂಡಲೇ ಅವರು ಸಾರ್ವಜನಿಕವಾಗಿ ಕ್ಷಮೆಯಾಚನೆ ಮಾಡಬೇಕು ಎಂದು ಒತ್ತಾಯಿಸಿದರು.

ಮಾತು ಎತ್ತಿದ್ದರೇ ಮುಸ್ಲಿಂರಿಗೆ ಬೈಯುವ ಬಸನಗೌಡ ಪಾಟೀಲ್ ಯತ್ನಾಳ ಈ ಹಿಂದೆ ಬೆಂಗಳೂರಿನಲ್ಲಿ ಪ್ರತಿಭಟನೆ ಮಾಡುವಾಗ ಬಸನಗೌಡ ಪಾಟೀಲ್ ಯತ್ನಾಳ ಅಸ್ವಸ್ಥರಾಗಿದ್ದರು ಆಗ ಪ್ರಾಥಮಿಕವಾಗಿ ಚಿಕಿತ್ಸೆ ನೀಡಿದ್ದು ಮುಸ್ಲಿಂ ವೈದ್ಯರು, ಆಗ ಚಿಕಿತ್ಸೆ ಬೇಡಾ ಎಂದು ಹೇಳಬೇಕಿತ್ತು ಎಂದು ಪ್ರಶ್ನೆ ಮಾಡಿದರು.

ಸದ್ಯ ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿದೆ. ಅಲ್ಲಿ ಉತ್ತರ ಕರ್ನಾಟಕ ಭಾಗದ ಸಮಸ್ಯೆ ಬಗ್ಗೆ ಯತ್ನಾಳ ಅವರು ಚರ್ಚೆ ಮಾಡಲಿ, ಅಭಿವೃದ್ಧಿ ಬಗ್ಗೆ ಮಾತನಾಡಲಿ, ಅದು ಬಿಟ್ಟು ಸಮಾಜದಲ್ಲಿ ಜಗಳ ಹಚ್ಚುವ ಕೆಲಸವನ್ನು ಬಿಡಬೇಕು ಎಂದರು.

ಬಿಜೆಪಿ ಹಾಗೂ ಆರ್.ಎಸ್.ಎಸ್’ನವರಿಗೆ
ಯತ್ನಾಳ ಅವರ ಸಂಸ್ಕೃತಿ ಗೊತ್ತಿದೆ. ಹೀಗಾಗಿ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನು ಮಾಡುವುದಿಲ್ಲ, ವಿಪಕ್ಷ ನಾಯಕನಾಗಿ ಮಾಡುವುದಿಲ್ಲ. ಇವರು ಸುಖಾಸುಮ್ಮನೆ ಪ್ರಚಾರಕ್ಕೆ ಮಾತನಾಡುತ್ತಾರೆ. ಮುಂದೆ ಜನರು ತಕ್ಕ ಉತ್ತರ ಕೊಡತ್ತಾರೆ ಎಂದು ಅಶ್ಪಾಕ್ ಕುಮಟಾಕರ ತಿಳಿಸಿದರು.

ಬೆಂಗಳೂರಿನಲ್ಲಿ ಎಂಆರ್ಪಿಗಿಂತ ಹೆಚ್ಚಿನ ಬೆಲೆಗೆ ಶಾಂಪೂ ಮಾರಿದ Flipkart ಗೆ 20,000 ರೂ ದಂಡ

ಜೈನ ಮುನಿ ಹತ್ಯೆ: ಆರೋಪಿಗಳ ವಿರುದ್ದ ಚಾರ್ಜ್ ಶೀಟ್ ಸಲ್ಲಿಸಿದ ಸಿಐಡಿ!

ಪ್ರವಾಸಿಗರಿಗೆ ಸಿಹಿಸುದ್ದಿ: ಡಿ.11 ರಿಂದ ನಂದಿಬೆಟ್ಟಕ್ಕೆ ಎಲೆಕ್ಟ್ರಿಕ್ ರೈಲು!

- Advertisement -

Latest Posts

Don't Miss