Saturday, November 15, 2025

Latest Posts

ಯಡಿಯೂರಪ್ಪಗೆ ನನ್ನ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲ: ಸಿಎಂ ಸಿದ್ದರಾಮಯ್ಯ

- Advertisement -

Belagavi News: ಬೆಳಗಾವಿ: ಬೆಳಗಾವಿಯ ಗೋಕಾಕ್‌ನ ಸತೀಶ್ ಜಾರಕಿಹೊಳಿ ನಿವಾಸಕ್ಕೆ ಭೇಟಿ ನೀಡಿದ ಸಿಎಂ ಸಿದ್ದರಾಮಯ್ಯ, ಬಳಿಕ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದರು.

ಆ ಬಳಿಕ ಮಾಧ್ಯಮದವರ ಜೊತೆ ಮಾತಾನಾಡಿರುವ ಸಿಎಂ, ಬೆಳಗಾವಿ ಜಿಲ್ಲೆಯಲ್ಲಿ 62 ರಷ್ಟು ಮಳೆ ಪ್ರಮಾಣ ಹೆಚ್ಚಳವಾಗಿದೆ‌. ಆರು ಜ‌ನ ಮಳೆಯಿಂದ ಮೃತಪಟ್ಟಿದ್ದಾರೆ. ಎಲ್ಲರಿಗೂ ಐದು ಲಕ್ಷ ರೂಪಾಯಿ ಪರಿಹಾರ. ಹನ್ನೆರಡು ಜಾನುವಾರು ಮೃತಪಟ್ಟಿವೆ‌. ಅವಕ್ಕೂ ಕೂಡ ಪರಿಹಾರ ಕೊಟ್ಟಿದ್ದೇವೆ. 48 ಮನೆಗಳು ಪೂರ್ಣ, 918 ಮನೆಗಳು ಭಾಗಷ ಹಾನಿ ಆಗಿವೆ. ಬಿದ್ದ ಮನೆಗಳಿಗೆ ಯಡಿಯೂರಪ್ಪ ಐದು ಲಕ್ಷ ಕೊಟ್ಟಿದ್ರು. ದುರುಪಯೋಗ ಹಾಗೂ ಸರಿಯಾಗಿ ವಿತರಣೆ ಆಗಲಿಲ್ಲ.

ದುರುಪಯೋಗ ಆಗಬಾರದು ಎನ್ನುವ ಕಾರಣಕ್ಕೆ 1.20 ಲಕ್ಷ ಹಣ ಹಾಗೂ ಮನೆ ನಿರ್ಮಾಣ ಮಾಡಿ ಕೊಡ್ತಿವಿ. ಬೇರೆ ಕಡೆ ಎಲ್ಲಿ ಮನೆ ನಿರ್ಮಾಣ ಮಾಡ್ತಾರೆ ಅಲ್ಲಿ ಕೊಡ್ತಿವಿ. ಎನ್ ಡಿ ಆರ್ ಎಫ್ ಜೊತೆಗೆ ರಾಜ್ಯ ಸರ್ಕಾರ ಬೇರೆ ಪರಿಹಾರ ಕೊಡ್ತಿವಿ. ಈಗಾಗಲೇ 17 ಜನರಿಗೆ ಮನೆ ಪರಿಹಾರ ವಿತರಣೆಯಾಗಿದೆ. ಕೃಷಿ ಬೆಳೆ 41 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹಾನಿಯಾಗಿದ್ದು, ವಿದ್ಯುತ್ ಕಂಬಗಳನ್ನು ಸರಿಪಡಿಸಲು ಸೂಚನೆ ನೀಡಲಾಗಿದೆ. ಮಳೆ ನಿಂತ ಮೇಲೆ ಎಲ್ಲಾ ಕೆಲಸ ಮಾಡ್ತಿವಿ‌. ದುಡ್ಡು ಇಲ್ಲ ಅಂದರೆ ಇದೆಲ್ಲ ಹೇಗೆ ಮಾಡಲು ಸಾಧ್ಯ..? ಎಂದು ಸಿಎಂ ಪ್ರಶ್ನಿಸಿದ್ದಾರೆ.

ಸುಳ್ಳು ಹೇಳುವುದರಲ್ಲಿ ನಿಸ್ಸಿಮರು. ಆರ್ ಎಸ್ ಎಸ್ ನವರು ಇದನ್ನೇ ಮಾಡಿದ್ದಾರೆ. ಬೆಳೆ ಹಾನಿ ಬಗ್ಗೆ ಸರ್ವೇ ಮಾಡಿಸ್ತಿವಿ. ತಾಂತ್ರಿಕ ವರದಿ ಪಡೆದು ಬ್ರಿಡ್ಜ್ ಎತ್ತರ ಮಾಡ್ತಿವಿ. ರಸ್ತೆ ‌ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆಯವರು ಮಾಡ್ತಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಸಿದ್ದರಾಮಯ್ಯ ರಾಜೀನಾಮೆಗೆ ಯಡಿಯೂರಪ್ಪ ಆಗ್ರಹ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ,
ಯಡಿಯೂರಪ್ಪ ಮೇಲೆ ಪೋಸ್ಕೋ‌ ಕೇಸ್ ಇದೆ. ಅವರಿಗೆ ಏನ್ ನೈತಿಕತೆ ಇದೆ. ಕೋರ್ಟ್ ಜಾಮೀನು ಕೊಟ್ಟಿದೆ ಎಂದು ಹೊರಗೆ ಇದ್ದಾರೆ. ಇಲ್ಲಂದ್ರೇ ಒಳಗೆ ಇರಬೇಕಿತ್ತು ಎಂದು ಸಿಎಂ ಸಿದ್ದರಾಮಯ್ಯ ಯಡಿಯೂರಪ್ಪಗೆ ತಿರುಗೇಟು ನೀಡಿದ್ದಾರೆ.

- Advertisement -

Latest Posts

Don't Miss